ಮಲೈ ಕುಲ್ಫಿ 
ಅಡುಗೆ

ಮಲೈ ಕುಲ್ಫಿ | Malai Kulfi recipe in Kannada

ಸಾಂಪ್ರದಾಯಿಕ ಭಾರತೀಯ ಸಿಹಿತಿಂಡಿಗಳಲ್ಲಿ ಮಲಾಯಿ ಕುಲ್ಫಿ ವಿಶೇಷ ಸ್ಥಾನ ಹೊಂದಿದೆ. ಹಾಲು ಹಾಗೂ ಏಲಕ್ಕಿಯ ಸುವಾಸನೆ, ಡ್ರೈ ಫ್ರೂಟ್ಸ್‌ನಿಂದ ತಯಾರಾಗುವ ಈ ಕುಲ್ಫಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ.

ಸಾಂಪ್ರದಾಯಿಕ ಭಾರತೀಯ ಸಿಹಿತಿಂಡಿಗಳಲ್ಲಿ ಮಲಾಯಿ ಕುಲ್ಫಿ ವಿಶೇಷ ಸ್ಥಾನ ಹೊಂದಿದೆ. ಹಾಲು ಹಾಗೂ ಏಲಕ್ಕಿಯ ಸುವಾಸನೆ, ಡ್ರೈ ಫ್ರೂಟ್ಸ್‌ನಿಂದ ತಯಾರಾಗುವ ಈ ಕುಲ್ಫಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ.

ಬೇಕಾಗುವ ಪದಾರ್ಥಗಳು...

  • ಹಾಲು – 1 ಲೀಟರ್

  • ಸಕ್ಕರೆ – ½ ಬಟ್ಟಲು

  • ಖೋವಾ (ಮಾವಾ) – 100 ಗ್ರಾಂ

  • ಕಾರ್ನ್ ಫ್ಲೋರ್ – 1 ಚಮಚ

  • ಹಾಲು – 2 ಟೇಬಲ್ ಸ್ಪೂನ್ (ಕಾರ್ನ್ ಫ್ಲೋರ್ ಕಲಸಲು)

  • ಏಲಕ್ಕಿ ಪುಡಿ – ½ ಚಮಚ

  • ಬಾದಾಮಿ – 10 (ಸಣ್ಣದಾಗಿ ಕತ್ತರಿಸಿದ್ದು)

  • ಗೋಡಂಬಿ – 10 (ಸಣ್ಣದಾಗಿ ಕತ್ತರಿಸಿದ್ದು)

  • ಪಿಸ್ತಾ – 10 (ಸಣ್ಣದಾಗಿ ಕತ್ತರಿಸಿದ್ದು)

  • ಕೇಸರಿ ದಳ- ಸ್ವಲ್ಪ (ಐಚ್ಛಿಕ)

ಮಾಡುವ ವಿಧಾನ...

  • ಒಂದು ದಪ್ಪ ತಳದ ಪಾತ್ರೆಯಲ್ಲಿ ಹಾಲನ್ನು ಹಾಕಿ ಮಧ್ಯಮ ಉರಿಯಲ್ಲಿ ಕುದಿಸಿ.

  • ಹಾಲು ಕುದಿಯಲು ಆರಂಭಿಸಿದ ನಂತರ ಆಗಾಗ ಕಲಕುತ್ತಾ ಅದರ ಪ್ರಮಾಣ ಅರ್ಧದಷ್ಟು ಕಡಿಮೆಯಾಗುವವರೆಗೆ ಕುದಿಯಲು ಬಿಡಿ

  • ಬಳಿಕ ಕಾರ್ನ್ ಫ್ಲೋರ್ ಅನ್ನು 2 ಚಮಚ ಹಾಲಿನಲ್ಲಿ ಕರಗಿಸಿ ಕೈಯಾಡಿಸುತ್ತಾ ಹಾಲಿಗೆ ಸೇರಿಸಿ.

  • ಬಳಿಕ ಸಕ್ಕರೆ, ಖೋವಾ ಮತ್ತು ಕೇಸರಿಯನ್ನು ಸೇರಿಸಿ ಚೆನ್ನಾಗಿ ಕಲಸಿ.

  • ಮಿಶ್ರಣ ಸ್ವಲ್ಪ ಗಟ್ಟಿಯಾಗುವವರೆಗೆ 5-10 ನಿಮಿಷ ಕುದಿಸಿ.

  • ಈಗ ಏಲಕ್ಕಿ ಪುಡಿ, ಬಾದಾಮಿ, ಗೋಡಂಬಿ ಮತ್ತು ಪಿಸ್ತಾವನ್ನು ಸೇರಿಸಿ.

  • ಮಿಶ್ರಣ ಸಂಪೂರ್ಣ ತಣ್ಣಗಾದ ಬಳಿಕ ಕುಲ್ಫಿ ಅಚ್ಚು ಅಥವಾ ಸಣ್ಣ ಕಪ್‌ಗಳಲ್ಲಿ ತುಂಬಿ.

  • 6-8 ಗಂಟೆಗಳ ಕಾಲ ಅಥವಾ ರಾತ್ರಿ ಪೂರ್ತಿ ಫ್ರೀಜರ್‌ನಲ್ಲಿ ಇಡಿ.

  • ನಂತರ ಅಚ್ಚಿನಿಂದ ತೆಗೆದು ಪಿಸ್ತಾ ತುಂಡುಗಳಿಂದ ಅಲಂಕರಿಸಿದರೆ ರುಚಿಕರವಾದ ಮಲಾಯಿ ಕುಲ್ಫಿ ಸವಿಯಲು ಸಿದ್ಧ.

ಸಲಹೆ:

  • ಹೆಚ್ಚು ರುಚಿಗಾಗಿ ಕಂಡೆನ್ಸ್ಡ್ ಮಿಲ್ಕ್ ಬಳಸಬಹುದು.

  • ಗುಲಾಬಿ ಎಸೆನ್ಸ್ ಅಥವಾ ಕೇಸರಿ ಸೇರಿಸಿದರೆ ಕುಲ್ಫಿಯ ಸುವಾಸನೆ ಹೆಚ್ಚುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಸ್ರೇಲ್ ವೈಮಾನಿಕ ದಾಳಿಗೆ ತತ್ತರಿಸಿದ ಲೆಬನಾನ್: 16 ಮಂದಿ ಬಲಿ; ಅಮೆರಿಕ-ಇರಾನ್ ಶಾಂತಿ ಮಾತುಕತೆ ಮುಂದೂಡಿಕೆ, ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ..!

NEET ಭದ್ರತೆಗೆ ಆದ್ಯತೆ; ದೇಶಾದ್ಯಂತ Telegram app ತಾತ್ಕಾಲಿಕ ನಿಷೇಧ, ಕೇಂದ್ರದ ಆದೇಶ ಎತ್ತಿಹಿಡಿದ Delhi ಹೈಕೋರ್ಟ್..!

ಚಿಕ್ಕಮಗಳೂರು: ನಡು ರಸ್ತೆಯಲ್ಲಿ ಲಾಂಗ್​ನಿಂದ ಕೇಕ್‌ ಕತ್ತರಿಸಿ ಬರ್ತಡೇ ಸೆಲೆಬ್ರೇಷನ್‌; ಪುಡಾರಿ ವಿರುದ್ಧ FIR

NEET UG 2026ಗೆ ಮತ್ತೊಂದು ಬಲಿ; ಮರು ಪರೀಕ್ಷೆಗೂ ಮುನ್ನ 17 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ

US-Iran ಒಪ್ಪಂದ ಬೆನ್ನಲ್ಲೇ Hormuzನಲ್ಲಿ ತೈಲ ಸಾಗಣೆ ಪುನರಾರಂಭ: ಲೆಬನಾನ್'ನಲ್ಲಿ ಮುಂದುವರೆದ ಉದ್ವಿಗ್ನತೆ, ಮಧ್ಯಪ್ರಾಚ್ಯ ಶಾಂತಿಗೆ ಕಂಟಕ..!