ಕಾರ್ನ್ ಚೀಸ್ 
ಅಡುಗೆ

ಕಾರ್ನ್ ಚೀಸ್ | Cheese corn recipe in Kannada

ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುವ ಸುಲಭ ಮತ್ತು ರುಚಿಕರ ಸ್ನ್ಯಾಕ್ ಅಂದ್ರೆ ಚೀಸ್ ಕಾರ್ನ್, ಸ್ವೀಟ್ ಕಾರ್ನ್, ಚೀಸ್ ಮತ್ತು ಮಸಾಲೆಗಳ ಸಂಯೋಜನೆಯಿಂದ ತಯಾರಾಗುವ ಈ ಡಿಶ್, ಸಂಜೆ ತಿಂಡಿಗೆ ಅಥವಾ ಪಾರ್ಟಿ ಸ್ಟಾರ್ಟರ್‌ಗೆ ಪರ್ಫೆಕ್ಟ್ ಆಯ್ಕೆ.

ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುವ ಸುಲಭ ಮತ್ತು ರುಚಿಕರ ಸ್ನ್ಯಾಕ್ ಅಂದ್ರೆ ಚೀಸ್ ಕಾರ್ನ್, ಸ್ವೀಟ್ ಕಾರ್ನ್, ಚೀಸ್ ಮತ್ತು ಮಸಾಲೆಗಳ ಸಂಯೋಜನೆಯಿಂದ ತಯಾರಾಗುವ ಈ ಡಿಶ್, ಸಂಜೆ ತಿಂಡಿಗೆ ಅಥವಾ ಪಾರ್ಟಿ ಸ್ಟಾರ್ಟರ್‌ಗೆ ಪರ್ಫೆಕ್ಟ್ ಆಯ್ಕೆ.

ಬೇಕಾಗುವ ಪದಾರ್ಥಗಳು...

  • ಸ್ವೀಟ್ ಕಾರ್ನ್ – 1 ಬಟ್ಟಲು

  • ಚೀಸ್ ತುರಿದದ್ದು – 1/2 ಬಟ್ಟಲು

  • ಕಾರ್ನ್ ಫ್ಲೋರ್- 1 ಚಮಚ

  • ಒರೆಗ್ಯಾನೋ - 1/2 ಚಮಚ

  • ಚಿಲ್ಲಿ ಫ್ಲೇಕ್ಸ್- 1/2 ಚಮಚ

  • ಬೆಣ್ಣೆ – 1 ಚಮಚ

  • ಹಾಲು – 1/4 ಬಟ್ಟಲು

  • ಮೆಣಸಿನ ಪುಡಿ – 1/2 ಚಮಚ

  • ಕರಿಮೆಣಸಿನ ಪುಡಿ – 1/4 ಟೀ ಚಮಚ

  • ಉಪ್ಪು – ರುಚಿಗೆ ತಕ್ಕಷ್ಟು

  • ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ...

  • ಮೊದಲು ಸ್ವೀಟ್ ಕಾರ್ನ್ ಅನ್ನು ಚೆನ್ನಾಗಿ ಬೇಯಿಸಿಕೊಳ್ಳಿ.

  • ಒಂದು ಪ್ಯಾನ್‌ನಲ್ಲಿ ಬೆಣ್ಣೆ ಹಾಕಿ ಕರಗಲು ಬಿಡಿ. ಬಳಿಕ ಕಾರ್ನ್ ಫ್ಲೋರ್ ಹಾಕಿ, ಅರ್ಧ ನಿಮಿಷ ಕೈಯಾಡಿಸಿ.

  • ನಂತರ ಹಾಲು ಸೇರಿಸಿ ಚೆನ್ನಾಗಿ ಕಲಸಿ. ಮಿಶ್ರಣ ಗಟ್ಟಿಯಾಗುತ್ತಿದ್ದಂತೆಯೇ ಉಪ್ಪು, ಕಾಳು ಮೆಣಸಿನ ಪುಡಿ, ಒರೆಗ್ಯಾನೋ, ಚಿಲ್ಲಿ ಫ್ಲೇಕ್ಸ್ ಹಾಕಿ ಮಿಶ್ರಣ ಮಾಡಿ.

  • ಅದಕ್ಕೆ ಬೇಯಿಸಿದ ಕಾರ್ನ್ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. ಈಗ ತುರಿದ ಚೀಸ್ ಸೇರಿಸಿ ನಿಧಾನವಾಗಿ ಕಲಸಿ.

  • ಚೀಸ್ ಕರಗಿ ಕಾರ್ನ್ ಜೊತೆ ಚೆನ್ನಾಗಿ ಬೆರೆಯುವವರೆಗೆ ಬೇಯಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿದರೆ ರುಚಿಕರವಾದ ಚೀಸಿ ಕಾರ್ನ್ ಸವಿಯಲು ಸಿದ್ಧ.

ಟಿಪ್ಸ್:

ಇನ್ನಷ್ಟು ಕ್ರೀಮಿ ರುಚಿಗೆ ಸ್ವಲ್ಪ ಫ್ರೆಶ್ ಕ್ರೀಮ್ ಕೂಡ ಸೇರಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!

ರಾಮ ಮಂದಿರ ದೇಣಿಗೆ ಕಳ್ಳತನ: ಚಂಪತ್ ರಾಯ್, ಅನಿಲ್ ಮಿಶ್ರಾಗೆ ಉತ್ತರಪ್ರದೇಶ SIT ಕ್ಲೀನ್ ಚಿಟ್!

PM CARES ನಿಧಿ ವಿವರ ಬಹಿರಂಗ; ದೇಣಿಗೆಗಳಲ್ಲಿ ತೀವ್ರ ಕುಸಿತ ವಿದೇಶಿ ದೇಣಿಗಗಳ ಬಗ್ಗೆ ಕೇಂದ್ರ ಹೇಳಿದ್ದೇನು?

ಸಚಿವ ನಾಗೇಂದ್ರ ರಾಜೀನಾಮೆಗೆ ವಿಪಕ್ಷಗಳ ಪಟ್ಟು: ಗದ್ದಲ, 2ನೇ ದಿನವೂ ವಿಧಾನಸಭೆಯ ಕಲಾಪ ಬಲಿ!

India vs Sri Lanka: ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ರಿಷಭ್ ಪಂತ್; ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟರ್!