ಸಾಂದರ್ಭಿಕ ಚಿತ್ರ 
ಸ್ನೇಹದ ಕಡಲಲ್ಲಿ...

ನನ್ನ ಆ ಸುಮಧುರ ದಿನಗಳು..!!

2012ರ ಸೆಪ್ಟೆಂಬರ್ ತಿಂಗಳಲ್ಲಿ ಫೇಸ್ಬುಕ್ ನಲ್ಲಿ ಪರಿಚಯವಾದ ಆ ಗೆಳೆತನ ಊಹಿಸಲಾಗದ ಉತ್ತುಂಗಕ್ಕೆ ತಲುಪಿತು.ಒಬ್ಬ...

2012ರ ಸೆಪ್ಟೆಂಬರ್ ತಿಂಗಳಲ್ಲಿ  ಫೇಸ್ಬುಕ್ ನಲ್ಲಿ ಪರಿಚಯವಾದ ಆ ಗೆಳೆತನ ಊಹಿಸಲಾಗದ ಉತ್ತುಂಗಕ್ಕೆ ತಲುಪಿತು.ಒಬ್ಬ ಹುಡುಗ ಮತ್ತು ಹುಡುಗಿ ಆತ್ಮೀಯ ಗೆಳೆಯರಾಗುವರೆ? ಎಂಬ ದೊಡ್ಡ ಪ್ರಶ್ನೆಗೆ ಉತ್ತರ ಸಿಕ್ಕದ್ದು ನಿನ್ನಿಂದಲೇ. ನಿನ್ನ ಜೊತೆ ಕಾಲೇಜಿನಲ್ಲಿ ಕಳೆದ ಆ ಮೂರು ವರ್ಷಗಳು ಮತ್ತೆ ನನ್ನ ಜೀವನದಲ್ಲಿ ಬಾರದ ದಿನಗಳು ನನ್ನ ಕೋಪ ಸಹಿಸಿಕೊಂಡು ನನ್ನಲ್ಲಿ ಒಳ್ಳೆಯ ಗುಣಗಳು ಇದೆ ಎಂದು ಹೇಳುತ್ತಾ ನನ್ನನ್ನು ಸಹಿಸಿಕೊಂಡು ಹೋದವಳು ನೀನು.

ನಮ್ಮ ಈ ಗೆಳೆತನ ಸಹಿಸಲಾಗದ ಅದೆಷ್ಟೋ ಜನ ಸಾವಿರಾರು ಚುಚ್ಚು ಮಾತನಾಡಿದರು ಅದನ್ನು ಲೆಕ್ಕಿಸದೇ ನಾವಿಬ್ಬರು ನಮ್ಮ ಸ್ನೇಹಲೋಕದಲ್ಲಿ ದಿನ ಕಳೆದೆವು. ನಮ್ಮ ಜಗಳಕ್ಕೆ ನಮ್ಮ ಸುತ್ತಲಿನ ಜನ ಖುಷಿಪಡುತ್ತಿದ್ದರು, ನಮ್ಮ ಸಂತೋಷಕ್ಕೆ ಜನ ಅಸೂಯೆ ಪಡುತ್ತಿದ್ದರು.

ಪ್ರತಿನಿತ್ಯ ಸಂಜೆ ನಿನ್ನ ಜೊತೆ ಕಳೆದ ಆ ಕ್ಷಣಗಳು ನೆನೆದರೆ ಅಬ್ಬಾ..!! ಅದೇನು ಸಂತೋಷ, ನನಗೆ ತಿಳಿಯದ ಹಾಗೆ ನನ್ನ ಮುಖದಲ್ಲಿ ಮುಗುಳ್ನಗೆ.
ನಿನ್ನಲ್ಲಿ ನಾ ಹೆಣ್ಣಿನ ಹಲವಾರು ಬಗೆಯನ್ನು ಕಂಡುಕೊಂಡೆ... ನಿಷ್ಕಲ್ಮಷ ಮನಸ್ಸಿನ ಸ್ನೇಹಿತೆ, ತಾಯಿ, ಅಕ್ಕ, ತಂಗಿ ಎಲ್ಲಾ ರೀತಿಯ ಸಹಕಾರ ನೀಡಿದ ನಿನಗೆ ನನ್ನ ಮನಪೂರ್ವಕ ಧನ್ಯವಾದಗಳು.
ಕಾಲೇಜಿನಲ್ಲಿ ನೀನಿಲ್ಲದ ದಿನಗಳು ಊಹಿಸಲಾಗದು, ನೀ ನನಗೆ ಕೊಟ್ಟ ಆತ್ಮಸ್ಥೈರ್ಯದಿಂದಲೇ ನಾನು ಇಂದು ಅಭಿಯಂತರನಾಗಿ ಪದವಿ ಪಡೆಯುವ ಸುದಿನ ಬಂದಿದೆ.

ನಿನ್ನ ಆ ಪುಟ್ಟ ಮಕ್ಕಳ ಮನಸ್ಸು, ಆ ಒಡನಾಟ, ಆ ಹಂಬಲ, ಆ ನಗು,  ಯಾವಾಗಲೂ ನಿನ್ನಲ್ಲಿ ನೋಡಲು ಆಶಿಸುವ ಈ ನನ್ನ ಮನಸ್ಸು. ಓ ನನ್ನ ಸ್ನೇಹಿತೆ ನಿನಗೆ ನಾ ಧನ್ಯ... ನಿನಗೆ ನನ್ನ ಹೃತ್ಪೂರ್ವಕ  ಧನ್ಯವಾದಗಳು ನಿನ್ನ ಋಣ ತೀರಿಸಲು ಸಾಧ್ಯವಿಲ್ಲ.

ನೀ ನನಗೆ ಕೊಟ್ಟ ಪ್ರೋತ್ಸಾಹ, ಬೆಂಬಲ, ಪ್ರೀತಿ, ವಾತ್ಸಲ್ಯ, ಮಮತೆ ಹಾಗೂ ವಿಶ್ವಾಸಕ್ಕೆ ನಾ ಇಂದು ಎಂದೆಂದಿಗೂ ಚಿರಋಣಿ, ನೀ ಯಾವಾಗಲೂ ಖುಷಿಯಾಗಿರಬೆಕೇಂದು ಬಯಸುವ  ಈ ನಿನ್ನ ಪೆದ್ದ (Idoit) ಸ್ನೇಹಿತನ ಮನದಾಳದ ಮಾತು

ಈ ನಾಲ್ಕು ಸಾಲುಗಳು ನಿನಗಾಗಿ ಓ ನನ್ನ ಸ್ನೇಹಿತೆ..!!
ಯಾವ ಜನುಮದ ನಂಟೋ ನನಗೆ ಗೊತ್ತಿಲ್ಲ,
ಈ ಜನುಮದಲ್ಲಿ ನೀನಾದೆ ನನ್ನ ಸ್ನೇಹಿತೆ.
ಮರೆಯಲಾಗದು ನಿನ್ನ ಜೊತೆ ಇದ್ದಾಗ,
ನನ್ನ ಮನಸ್ಸಿಗಾದ ಖುಷಿಯ.
ನನ್ನ ಎಸ್ಟೋ ಭಾವನೆಗಳಿಗೆ,
ಸ್ಪಂದಿಸಿದೆ ನಿನ್ನ ವಿಶಾಲವಾದ ಹೃದಯ.
ಕ್ಷಮಿಸು ನಾ ಯಾವುದಾದರು ಮಾಡಿದರೆ,
ನಿನ್ನ ಭಾವನೆಗಳಿಗೆ ಗಾಯ.
ನೀ ಯಾವಾಗಲೂ ಸಂತಸದಿಂದರ ಬೇಕೆಂಬುದೆ
ನನ್ನ ಮನಸ್ಸಿನ ಆಶಯ...!!
ಅದ್ಯಾವ ಜನುಮದ ಪುಣ್ಯವೋ ನಾ ಕಾಣೆ..!! ನನಗೆ ನಿನ್ನಂತ ಸ್ನೇಹಿತೆ ಈ ಜನುಮದಲ್ಲಿ ಸಿಕ್ಕೆ..!!
ನೀನಿಲ್ಲದ ಈ ಸಂಜೆ ಯಾಕೆ ಬರುತ್ತದೆ ಎಂದು ತಿಳಿಯದ ಈ ಪೆದ್ದ ಮನಸ್ಸು... ನಿನ್ನ ನೆನಪೆ ನನ್ನ ಚಲಿಸುವ ಗಡಿಯಾರವೆಂದು ದಿನ ಕಳೆಯುತ್ತಿದೆ.

-ತೌಸೀಫ್ ಅಹ್ಮದ್ ಆರ್ ಎ
ಎಸ್ ಎಸ್ ಐ ಟಿ ತುಮಕೂರು




Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT