ಭವಾನಿಲೋಕೇಶ್ ಮತ್ತು ಗೆಳತಿ ಸುಜಾತ 
ಸ್ನೇಹದ ಕಡಲಲ್ಲಿ...

ಸ್ನೇಹ ಅತಿಮಧುರ !

ಬಾಲ್ಯದ ದಿನಗಳವು...ನಮ್ಮ ಮನೆಯ ಪಕ್ಕದಲ್ಲೆ ಶಿಶುವಿಹಾರ. ಅಲ್ಲಿದ್ದವರು ವಿಮಲಾ ಮಿಸ್. ಮೊದಲಿಗೆ ..

ಬಾಲ್ಯದ ದಿನಗಳವು...ನಮ್ಮ ಮನೆಯ ಪಕ್ಕದಲ್ಲೆ  ಶಿಶುವಿಹಾರ. ಅಲ್ಲಿದ್ದವರು ವಿಮಲಾ ಮಿಸ್.  ಮೊದಲಿಗೆ ಅಕ್ಷರ ಕಲಿಸಿದವರು. ನಮಗಂತೂ ಉದ್ದನೆ ಹಿಡಿಕೆಯ ಪಾಟೀಚೀಲ ಹೆಗಲಿಗೇರಿಸಿ ಶಾಲೆಗೆ ಹೋಗುವುದೇ ಒಂದು ಖುಷಿ. ಇವತ್ತಿಗೂ ಆ ನೆನಪು ಹಸಿಹಸೀ. ಶಿಶುವಿಹಾರದ ಪಕ್ಕದ ಓಣಿಯಿಂದ 'ಅವಳು' ಬರುತ್ತಿದ್ದಳು. ನಾನ್ಯಾಕೆ ಅವಳಿಗೆ ಇಷ್ಟವಾಗುತ್ತಿದ್ದೆನೋ ತಿಳಿಯದು. ಆದರೆ ಆರಂಭದ ದಿನಗಳಿಂದಲೂ ನನ್ನ ಜೊತೆಯೇ ಇರಬೇಕು. ಪಕ್ಕದಲ್ಲೇ ಕೂರಬೇಕು ಅಂತ ಬಯಸುತ್ತಿದ್ದಳು. ಆ ಸ್ನೇಹ ಅಲ್ಲಿಂದ ಶುರುವಾಗಿ ಪಿ.ಯುಸಿವರೆಗೂ ಮುಂದುವರೆದಿತ್ತು. ಮನೆಯೂ ಹತ್ತಿರವೇ ಇದ್ದುದರಿಂದ ಶಾಲೆಯ ನಂತರ ಮನೆಯಲ್ಲೂ ಭೇಟಿಯಾಗುತ್ತಿತ್ತು.

ಆದರೆ ನನ್ನ ಮನೆಯಲ್ಲಿ ನಾವು (ಹೆಣ್ಣುಮಕ್ಕಳು) ಬೇರೆಯವರ ಮನೆಗೆ ಹೋಗುವಂತಿರಲಿಲ್ಲ. ಬೇರೆಯವರು ಬಂದು ಹೆಚ್ಚು ಹೊತ್ತು ಕೂತರೂ ಕಣ್ಣು ಕೆಂಪಾಗುತ್ತಿದ್ದವು. ನಾನೋ ಜನ ಬಿಟ್ಟು ಬದುಕಲಾರೆ ಅನ್ನುತ್ತಿದ್ದವಳು. ಗದ್ದೆ ಕೆಲಸಕ್ಕೆ ಬರುತ್ತಿದ್ದ ಆಳುಮಕ್ಕಳನ್ನೇ ಮಾತಾಡಿಸಿಕೊಳ್ಳುತ್ತಿದ್ದೆ. ಅವರೊಂದಿಗೆ ಭಜನೆಯ ರಾಗಕ್ಕೆ ಜತೆಯಾಗುತ್ತಿದ್ದೆ.

ಅವೆಲ್ಲ ಮನೆಯ ಜಗುಲಿಯಲ್ಲೇ ಮುಗಿಯುತ್ತಿದ್ದವು. ಯಾವ ಸ್ನೇಹಿತರ ಮನೆಗೂ ಗೊತ್ತಾಗುವಂತೆ ಹೋಗಿದ್ದು ನೆನಪಿಲ್ಲ. ಅಪ್ಪ ಅಸಾಧ್ಯ ಸಿಟ್ಟಿನ ಗಿರಾಕಿ. ಹೋದೆವೆಂದು ಗೊತ್ತಾಗಿಬಿಟ್ಟರೆ ಹಸಿಕೋಲಿನ ರುಚಿ ತೋರುತ್ತಿದ್ದವ. ಇಂಥಾ ಸಂದರ್ಭದೊಳಗೆ ಅವಳು ನಮ್ಮ ಮನೆಗೇ ಬರಬೇಕಿತ್ತು. ಬರುತ್ತಿದ್ದಳು.ನನ್ನ ಮನೆಯವರಿಂದ ಕೊಂಚ ಇರುಸುಮುರುಸಾದರೂ ಅವಳ್ಯಾವತ್ತೂ ಆ ಬಗ್ಗೆ ಬೇಸರಿಸಿಕೊಳ್ಳಲಿಲ್ಲ. ನಾನೇ ಆ ಹೊತ್ತು ಅವಳು ತೋರುತ್ತಿದ್ದ ಪ್ರೀತಿಯನ್ನು ಹಿಂದಿರುಗಿಸುತ್ತಿರಲಿಲ್ಲವೇನೊ ಅನ್ನಿಸುತ್ತದೆ ಈಗೀಗ. ಅವಳೇನು ಸುಮ್ಮನೆ ಬರುತ್ತಿರಲಿಲ್ಲ ಬರುವಾಗ ಅವರಮ್ಮ ಮಾಡಿದ್ದ ಏನೋ ಒಂದು ಕುರುಕಲು ಹಿಡಿದು ತರೋಳು. ನಮ್ಮ ಮನೆಯ ಕೊಟ್ಟಿಗೆಯ ಕಟ್ಟೆ ಮೂಲೆಯಲ್ಲೇ ನಮ್ಮ ಮಾತುಕತೆ. ಅದೆಷ್ಟೋ ಹೊತ್ತು ಹಾಗೇ ಮಾತಾಡುತ್ತಾ ಕುಳಿತಿರುತ್ತಿದ್ದೆವು. ಹೈಸ್ಕೂಲಿನ ದಿನಗಳಲ್ಲಂತೂ ಅವಳೂ ನಾನು ಇನ್ನಷ್ಟು ಹತ್ತಿರಾದೆವು. ದೇವರಿಗೆ ಹೂಪತ್ರೆ ತರುವ ಕೆಲಸದಿಂದ ಮೊದಲುಗೊಂಡು ಕಾಲುವೆಯಲ್ಲಿ ಬಟ್ಟೆ ತೊಳೆಯಲೂ ಜೊತೆಯಾಗಿಯೇ ಹೋಗುತ್ತಿದ್ದೆವು. ನಿಜಕ್ಕೂ ಅದೊಂದು ಚಂದದ ನೆನಪು.

ಪಿಯುಸಿ ಮುಗಿಸಿ ನಾನು ಮಂಡ್ಯದ ಕಾಲೇಜಿಗೆ ಬಿ.ಎಸ್ಸಿ ಸೇರಿಕೊಂಡೆ . ಅವಳು ಊರಲ್ಲೇ ಉಳಿದಳು. ಮದುವೆಯಾದ ಮೇಲಂತೂ ಅಷ್ಟೂ ವರ್ಷ ಜತೆಯಿದ್ದ ನಾವು ದೂರವಾಗಬೇಕಾಯಿತು. ಆಗೆಲ್ಲ ಈಗಿನಂತೆ ಫೇಸ್ ಬುಕ್ಕು ವಾಟ್ಸಾಪು ಇರಲಿಲ್ಲವಲ್ಲ. ಹಾಗಾಗಿ ನಾನು ಊರಿಗೆ ಬಂದಾಗ ಅವಳ ಭೇಟಿ. ವಿಷಾದ ಅಂದ್ರೆ ನಾನವಳ ಮದುವೆಗೂ ಹೋಗಲಾಗಲಿಲ್ಲ. ಆಮೇಲೆ ಅವರ ಕುಟುಂಬವೂ ಬೆಂಗಳೂರಿನತ್ತ ವಲಸೆ ಹೋಗಿತ್ತು. ಇನ್ನೇನು ಮರೆತೇಹೋಗುತ್ತಿದ್ದಳೇನೋ . ..ಆದರೆ ಆಮೇಲಿನದ್ದೇ ಖುಷಿಯ ಸಂಗತಿ. . ಇಷ್ಟು ವರ್ಷಗಳ ನಂತರ ಅವಳು ನನಗೆ ಫೇಸ್ ಬುಕ್ ನಲ್ಲಿ ಸಿಕ್ಕಳು. ನನಗೋ ಬಾಲ್ಯದಲ್ಲಿ ಕಳೆದುಕೊಂಡ ಖುಷಿಯನ್ನು ಮತ್ತೆ ಪಡೆದ ಸಂಭ್ರಮ. ಅಬ್ಬ ! ಸಿಕ್ಕ ಮೇಲಂತೂ ಬ್ರಹ್ಮಾಂಡದಷ್ಟು ಮಾತಾಡಿದ್ದೇವೆ. . ಸುಖ ದುಃಖ ಹಂಚಿಕೊಂಡಿದ್ದೇವೆ. .! ಅದೂ ಬೆಳದಿಂಗಳ ದಿನ ಅವಳದ್ದೇ ಮನೆಯ ಟೆರೇಸಿನ ಮೇಲೆ ಮಲಗಿ ಮುಗಿಯಲಾರದಷ್ಟು ಮಾತುಗಳನ್ನು ಹಂಚಿಕೊಂಡಿದ್ದೇವೆ. ಈಗಂತೂ ಖುಷೀ ಖುಷೀ.. ಅವಳು ಸಿಕ್ಕಳು. ..ಅಂದ ಹಾಗೆ ಅವಳ ಹೆಸರು ಸುಜೀ . . ಸುಜಾತಾ   . ಬಾಲ್ಯದ ಗೆಳತಿ ! ಸ್ನೇಹದ ಸವಿಭಾವ ಲಹರಿಯಲ್ಲಿ ನನ್ನ ಮೀಯಿಸಿದವಳು. . ! ಸ್ವಾರ್ಥವಿಲ್ಲದ ಜೀವ .  ! ಎರಡು ಮಕ್ಕಳ ತಾಯಿ. . ! ಈಗಲೂ ನನ್ನಂತೆ ಒಂದಿಲ್ಲೊಂದು ಕಲಿಯುವ ಆಸಕ್ತಿ.  ಬ್ಯೂಟಿಷಿಯನ್. .! ಸ್ನೇಹದ ಮಾತು ಬಂದ ನಾನೊಂಥರಾ ಪಾಪಿ ಅಂದುಕೊಳ್ಳುತ್ತಿದ್ದೆ  ..ಯಾಕೆಂದರೆ ಸ್ನೇಹ ಬಯಸಿ ಹೋದೆಡೆಯಲ್ಲೆಲ್ಲ ಬೆನ್ನಿಗೆ ಚೂರಿ ಹಾಕಿಸಿಕೊಂಡಿದ್ದೇನೆ. ಜತೆಯಲ್ಲಿದ್ದವರೇ ವಿಷವುಣಿಸಿದ್ದಾರೆ. .ಹೀಗಿರುವಾಗ ಮತ್ತೆ ಸುಜೀ ನನ್ನ ಬದುಕಿಗೆ ಬಂದದ್ದು ಭಾಗ್ಯವೇ ಅನ್ನುತ್ತೇನೆ.
ಲವ್ಯೂ ಸುಜಿ.. !!! ಯಾವತ್ತೂ ನಮ್ಮ ಸ್ನೇಹ ಹೀಗೇ ಇರಲಿ.

-ಭವಾನಿಲೋಕೇಶ್, ಮಂಡ್ಯ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT