ಸ್ನೇಹಿತರೊಂದಿಗೆ ಯಶಸ್ವಿನಿ 
ಸ್ನೇಹದ ಕಡಲಲ್ಲಿ...

ಈ ಸ್ನೇಹ ಮಧುರ ನೆನಪುಗಳ ಸಿಹಿ ಕಂತೆ

ಸರಿ ಸುಮಾರು ೨೦ ವರ್ಷಗಳ ಹಿಂದೆ, ಹತ್ತು ಜನ ವ್ಯೆದ್ಯ ಸ್ನೇಹಿತರು ಸೇರಿ ten's ಅಂತ ಒಂದು ಗ್ರೂಪ್ (ಈಗ ಫೇಸ್ಬುಕ್ ಅಲ್ಲಿ ಗ್ರೂಪ್ ...

ಸರಿ ಸುಮಾರು ೨೦ ವರ್ಷಗಳ ಹಿಂದೆ, ಹತ್ತು ಜನ ವ್ಯೆದ್ಯ ಸ್ನೇಹಿತರು ಸೇರಿ ten's ಅಂತ ಒಂದು ಗ್ರೂಪ್ (ಈಗ ಫೇಸ್ಬುಕ್ ಅಲ್ಲಿ ಗ್ರೂಪ್ ಅಂತಾರಲ್ಲ ) ಸ್ಟಾರ್ಟ್ ಮಾಡಿದ್ರು... ಎಲ್ಲರು ಒಂದೇ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದವರೇ. ಈ ಗ್ರೂಪ್ ನಲ್ಲಿ ಅವರೊಂದಿಗೆ ಅವರವರ ಹೆಂಡತಿ ಮಕ್ಕಳು ಕೂಡ ಇದ್ದರು. ಪ್ರತಿ ವಾರಾಂತ್ಯ ಒಬ್ಬಬ್ಬರ ಮನೆಯಲ್ಲಿ ಭೋಜನಕೂಟ ಏರ್ಪಡಿಸಲಾಗುತ್ತಿತ್ತು. ಆರು ತಿಂಗಳಿಗೊಮ್ಮೆ ಪಿಕ್ನಿಕ್ ಕೂಡ ಆಯೋಜಿಸುತ್ತಿದ್ದರು. ಅಂದೆಲ್ಲ ಮೆಟಡೋರ್ , ೨೦ ಜನ ದೊಡ್ಡವರು,೧೫ ಜನ ಮಕ್ಕಳು,ಆಟ ಬಿಟ್ಟರೆ ಬೇರೆ ಗೊತ್ತಿರ್ಲಿಲ್ಲ ಆ ಮಕ್ಕಳಿಗೆ. ಆಗೆಲ್ಲ ಇನ್ನು ಮೊಬೈಲ್ ಫೋನ್ ಇರಲಿಲ್ಲ ಲ್ಯಾಂಡ್ ಲೈನ್ ನಿಂದಲೇ ಎಲ್ಲ ಏರ್ಪಾಡುಗಳು ನಡೆಯುತ್ತಿದ್ದವು. ಅಂತ ಹೇಳಿಕೊಳ್ಳೋ ಹೋಟೆಲ್ ಗಳು ದಾರಿಯುದ್ದಕ್ಕೂ ಸಿಗುತ್ತಿರಲಿಲ್ಲ. ಹಾಗಾಗಿ ಆಸ್ಪತ್ರೆಯ ಕುಕ್ ಕೂಡ ಇರುತ್ತಿದ್ದ, ಒಮ್ಮೊಮ್ಮೆ  ಗಾಡಿ ಕೆಟ್ಟು ಹೋದರೆ ಎಲ್ಲಿ ಇರ್ತಿದ್ವೋ ಅಲ್ಲೇ ನಿದ್ರೆ. ಹುಷಾರು ತಪ್ಪಿದರೆ ಎಲ್ಲರೂ ಡಾಕ್ಟರುಗಳೇ. ಹೀಗೆ  ನಾವು ಸುತ್ತಿದ ಜಾಗಗಳುಳು ಒಂದೇ ಎರಡೇ ...

ಕನ್ಯಾಕುಮಾರಿ,ಎರೋಹಳ್ಳಿ,ಬಂಡಿಪುರ,ಬ್ನೆರ್ಘಟ್ ,ಕುದುರೆಮುಖ ,ಕಳತ್ಗಿರಿ ಫಾಲ್ಸ್ ,ಕೆಮ್ಮನಗುಂಡಿ ,ಊಟಿ, ಕೊಡೆಕೆನಲ್ ತಂಜೋರ್, ಮೈಸೂರ್, ಗೋವಾ, ಬೆಳಗಾಂ, ಮದುರೈ, ರಾಮೇಶ್ವರಂ. ಇನ್ನು ಹಲವರು ಐಬಿ ಗಳಿಗೆ ಹೋಗಿದುಂಟು. ಎಲ್ಲೇ ಹೋದರು ಆಟಗಳಿಗಂತೂ ಕೊರತೆ ಇರಲಿಲ್ಲ ಎಲ್ಲ ತರಹದ ಆಟ ಆಡಿಸುತ್ತಿದ್ರು . ಸಂಜೆ ಆದ್ರೆ ಬೋರ್ನ್ ಫೈರ್ ಹಾಕುತ್ತಿದರು.  ಅದರ ಸುತ್ತ ನಮ್ಮ ಹಾಡು,ಡಾನ್ಸ್ ಆಮೇಲೆ ಆ ರೀಲ್ ಕ್ಯಾಮೆರಾ. ಈಗಿನ ಹಾಗೆ ಸಿಕ್ಕಸಿಕ್ಕಿದ್ದನ್ನ  ಮನಸಿಗೆ ಬಂದಹಾಗೆ ಸೆರೆ ಹಿಡಿಯೋಕ್ಕೆ ಆಗ್ತಿರ್ಲಿಲ್ಲ ಆಗ.  ೩೦ ಇಲ್ಲ ೩೨ ಅಷ್ಟೇ ಒಂದು ರೀಲ್ ಕೆಪ್ಯಾಸಿಟಿ. ಹಾಗಾಗಿ ಯೋಚನೆ ಮಾಡಿಲ ಫೋಟೋ ತಗಿಬೇಕಿತ್ತು ಮತ್ತೆ ಅದನ್ನು  ಪ್ರಿಂಟ್ ಕೂಡ ಹಾಕಿಸಬೇಕಿತ್ತು. ಆದ ನಂತರವೇ ನಾವು ತೆಗೆದಿರೋ ಚಿತ್ರ ಹೇಗೆ ಬಂದಿದೆ ಅಂಥಾ ನಮಗೆ ತಿಳಿಯುತ್ತಿದ್ದದ್ದು. ಆ ಫೋಟೋಗಳು ಈಗಲೂ ಸಾವಿರ ನೆನಪುಗಳನ ನೆನಪು ಮಾಡಿಸುತ್ತೆ.  ಈ ಸ್ನೇಹ ಎಷ್ಟರ ಮಟ್ಟಿಗೆ ಇತ್ತು ಎಂದರೆ  ೧೦ ಜನ ಮಹಿಳೆಯರಿಗೆ ಒಂದೇ ತರಹದ ಚಿನ್ನದ ಬಳಯನ್ನು ಮಾಡಿಸಿದ್ದರು. vaccination  ಅಂದ್ರೆ ಸಹಜವಾಗಿಯೇ ಮಕ್ಕಳಿಗೆ ಭಯ. ನಮಗೆ  vaccination ಹಾಕುವ ಕಾರ್ಯಕ್ರಮ ಯಾರದಾದರೂ ಒಬ್ಬರ ಮನೆಯಲ್ಲಿ ನಡೆಯುತ್ತಿತ್ತು. ಅದರಿಂದ ತಪ್ಪಿಸಿಕೊಳ್ಳಲಿಕ್ಕೆ ಬೀರುವಿನ ಹಿಂದೆ ಬಚ್ಚಿತುಕೊಂಡ ನೆನಪು ಇಂದಿಗೂ ಚಿರಪರಿಚಿತ. ಹಿಂಗೆ ಒಂದು hill station ಗೆ ಹೋದಾಗ ಒಂದು ಗೆಸ್ಟ್ ಹೌಸ್ ನಲ್ಲಿ ಉಳಿದುಕೊಂಡಿದೆವು. ೩೫ ಜನರಲ್ಲಿ ೧೫ ಜನರ ಊಟ ಮುಗಿದಿತ್ತು ಹಾಗಾಗಿ ನಾವು ಗೆಸ್ಟ್ ಹೌಸ್ ಗೆ ಹೋಗಿರ್ತೇವೆ,  ನೀವು ನಂತರ ಬನ್ನಿ ಎಂದು ಹೇಳಿ ಅವರಿಂದ ಕೀಲಿಯನ್ನು ಪಡೆದು ನಾವು ಗೆಸ್ಟ್ ಹೌಸ್ ತಲುಪಿದೆವು.  ಅವರು ಕೊಟ್ಟ ಕೀಲಿ ಅವರ ಸೂಟ್ ಕೇಸ್ ನದಾಗಿತ್ತು. ಪುಣ್ಯಕ್ಕೆ ಆ ಗೆಸ್ಟ್ ಹೌಸ್ ನ ಕಿಟಕಿಗಳು ದೊಡ್ದದಾಗಿದ್ದವು. ನಾವೆಲ್ಲಾ ಅದರ ಮೂಲಕವೇ ಒಳಗೆ ಹೋಗಿ ಅವರು ಬರುವುದನ್ನೇ ಕಾದ್ದಿದ್ದು ಅವರನ್ನು  ಹೆದರಿಸಿದೆವು..
ಇತ್ತೀಚೆಗೆ ten's ಇಂದ ಯಾವುದೇ outing  ಹೋಗಿಲ್ಲ. ಕಾರಣ ಮಕ್ಕಳು ಬೆಳೆದಿದ್ದಾರೆ. ಅವರ ಅವರ ಕೆಲಸಗಳಿಗೆ ಸಮಯ ಸಾಲುತ್ತಿಲ್ಲ. ಆದರೆ ಅಂದಿನ ನೆನಪುಗಳು ಸದಾ ಕಾಡುತ್ತವೆ.

-ಯಶಸ್ವಿನೀ ಶ್ರೀನಿವಾಸ್
ಬೆಂಗಳೂರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT