ಕವಿತಾ, ಮಂಜುಳಾ, ರೇಖಾ, ಪಂಕಜ, ರಾಧ, ಪಂಕಜ, ಯಶೋದ, ರಚನ ಮತ್ತು ಭಾಗ್ಯ 
ಸ್ನೇಹದ ಕಡಲಲ್ಲಿ...

ಹದಿನಾಲ್ಕು ವರುಷದ ಗೆಳೆತನ

ಮಟ ಮಟ ಮಧ್ಯಾಹ್ನದ ಜೂಲಾಜಿ ಕ್ಲಾಸಲ್ಲಿ (ದೂರ್ವಾಸಮುನಿ ಅಂತ ನಮ್ಮ ಹತ್ರ ...

ಮಟ ಮಟ ಮಧ್ಯಾಹ್ನದ ಜೂಲಾಜಿ  ಕ್ಲಾಸಲ್ಲಿ  (ದೂರ್ವಾಸಮುನಿ ಅಂತ ನಮ್ಮ ಹತ್ರ ಕರೆಸ್ಕೊತಿದ್ದ) ಮಲ್ಲಿಕಾರ್ಜುನ್ ಸರ್ ಕೂಗಿದ್ದ್ ತಕ್ಷಣ ಎಡಕ್ಕೆ ಕೂತ ಹುಡುಗರು ಬಲಕ್ಕೆ ಕೂತ ಹುಡುಗಿಯರನ್ನ  ಅಂಡ್ ವೈಸ್ ವೆರ್ಸ ಆಗಿ ನೋಡ್ತಾ ಇದ್ರೂ!!??

ಯಾರಗೂ ಏನೂ ಅರ್ಥ ಆಗಲಿಲ್ಲ, ಆದ್ರೆ ಗಪ್ಪು ಚುಪ್ಪಾಗಿ ಕೂತ್ಕೊಂಡು​ ಬಾವಲಿ ಬಗ್ಗೆ ಪಾಠ ಕೇಳಿದ್ರು.  ಪಾಠ ಮುಗ್ಸಿ ಹೊರಟ ಸರ್ ಗೆ,  ಲಾಸ್ಟ್ ಬೆನ್ಚಿಂದ ಒಂದು ಅಶರೀರವಾಣಿ ..... ಅಂ.... ಸಾರೀ........... ಸರ್!!!!!!! ಅಂತ ವೋಯ್ಸು! ಸರ್ ಮಾತಾಡದೆ ಹಾಗೆ ಹೋಗ್ಬಿಟ್ರು!!!

ಆಗಿದ್ದಿಷ್ಟು

​ ಮಧ್ಯಾಹ್ನ ೨-೩ರ ಒಂದು ಗಂಟೆಯ ಕ್ಲಾಸ್, ಅಂದು ಬಾವಲಿಯ ​ಬಗ್ಗೆ ಪಾಠ ಮಾಡಲು ಬಂದ ಸರ್​, ​ಲೈವ್ ಸ್ಪೆಸಿಮೆನ್ ನೋಡಿದ್ರ ಅಂದ್ರು, ​ತಾಲೂ​ಕಿಗೆ ಇದ್ದ ಒಂದೇ  ದೊಡ್ಡ ಪ್ರತಿಷ್ಟಿತ ಸೈನ್ಸ್ ಕಾಲೇಜು, ತಿಪಟೂರಿನ ಕಲ್ಪತರು ವಿಜ್ಞಾನ  ಕಾಲೇಜಿಗೆ ಮಣ್ಣು ಹೊರತಾ ಇದ್ದ  ಕಾಲದಾಗೆ,  ಹೋಗೋ ಬರೋ ದಾರಿಯಲ್ಲಿ  ತಲೆ ಕೆಳಗ್ ನೇತಾಡ್ತಾತಿದ್ದ   ಬಾವಲಿಯ ನೋಡ್ತಾ ಇದ್ದದನ್ನು , ಅದುನ್ನೇ ಪಕ್ಕದ ಹುಡುಗಿ ಹತ್ರ ಹೇಳತಿದ್ದವರಿಗೆ ಸರ್ ಬೈದದ್ದು.

​ಸೆಪ್ಟೆಂಬರ್ ೫, ಟೀಚರ್ಸ್ ಡೇ, ಅವತ್ತೇ ಗೆಳತಿ ರೇಖಾಳ ಹುಟ್ಟುಹಬ್ಬ ಕೂಡ. ಒಂದು ಕನ್ನಡ ಕ್ಲಾಸ್ ಬಂಕ್ ಮಾಡಿ, ಒಂದೂವರೆ ಕಿಲೋ ಮೀಟರ್ ದೂರದ ಬಸ್ ಸ್ಟ್ಯಾಂಡ್ ಹತ್ರದ ಪೈ ಹೋಟ್ಲಲ್ಲಿ, ರೇಖಾನ ಬರ್ತ್ ಡೇ ಸೇಲಿಬ್ರಶಂಗೆ ತಿಂದ, ಮಸಾಲೆ ದೋಸೆ, ಜಾಮೂನು, ಹಂಚಿ ತಿಂದ ಗುಡ್ ಬಡ ಐಸ್ ಕ್ರೀಮು ಎಲ್ಲಾ ಸಪ್ಪೆ ಸಪ್ಪೆ ಆಗಿ ಹೋಗಿತ್ತು ​!!!!  ನೋಡಿದ ಬಾವಲಿ  ಹೇಳತ ಇದ್ದೆ ರೇಖಂಗೆ,  ಈ ಯಪ್ಪಾ  ನಾನೇನೋ ಬೇರೆ ಮಾತಾಡ್ತಾ ಇದ್ದೀನಿ ಅಂತ ತಿಳ್ಕೊಂಡು ನನ್ನ ಕಿಕ್ಕ್ ಯು ಔಟ್ ಅಂದು ಬಿಡದ!!!! ಅದ್ಯಾವ ಗ್ರಹಚಾರನೋ ಕಾಣೆ ಅವತ್ತು ಬರ್ತು ಡೇ ಹುಡುಗಿ, ನಾನು  ಇಬ್ಬರು ಬೈಸ್ಕೋ ಬೇಕಾಯ್ತು...

 ಬೆಂಗಳೂರಿಗೆ ವಾಪಸ್ ಬರ್ಬೇಕಾದ್ರೆ ಅದ್ಯಾಕೋ ಮೊಬೈಲ್ ತಗದು ನೋಡುದ್ರೆ ರಚನಾ ಬರ್ತ್ ಡೇ  ಅಂತ ರೆಮೈನ್ದೆರ್ ಹೊಡ್ಕೋತ ಇತ್ತು, ನೋಡಿದ್ರೆ
​ ​
​ಬೆಳಗ್ಗೆ ೭ ಗಂಟೆಗೆ ಫೋನು ಮಾಡಿ ವಿಶ್ ಮಾಡಿದ್ರೆ ಅವ್ಳು ಇವತ್ತು ಕವಿತಂದು ಕಣೆ ಬರ್ತ್ ಡೇ, ನನ್ನ ಬರ್ತ್ ಡೇ ಅಕ್ಟೋಬರ್ ಅಂದ್ಲು (ಅದು ಪ್ರತಿ ವರ್ಷನೂ ನಾನು  ಮಾಡೋ ತಪ್ಪು)

ಈ ಬರ್ತ್ ಡೇ ವಿಷಯಕ್ಕೆ ಇಸ್ಟೆಲ್ಲಾ  ನೆನಪಾಗೊಯ್ತು..... ಪ್ರತಿ ವರ್ಷ ನಾನು,  ರೇಖಾ ಈ ವಿಷ್ಯ ನೆನಪಿಸ್ಕೊತಿವಿ, ಬೈಸ್ಕೊಂಡಿದ್ದು ತುಂಬಾ ನೆನಪಾಗುತ್ತೆ, ನಮ್ಮ ಮಲ್ಲಿಕಾರ್ಜುನ್ ಸರ್ ಕೂಡ,  ಅಂದಹಾಗೆ ಬರ್ತ್ ಡೇ ಹುಡುಗಿ ರೇಖಂದು ಸೆಪ್ಟೆಂಬರ್ ೫ ಕ್ಕೆ ಹುಟ್ಟು ಹಬ್ಬ, ಆವತ್ತೇ ಶಿಕ್ಷಕರ ದಿನ, ಕಾಂಟಾಕ್ಟ್ ಇಲ್ಲದೆ ಸರ್ ಗೆ ವಿಶ್ ಮಾಡೋಕೆ ಆಗಲ್ಲ ​ಅಂತ ವಿಷಾದ ಆಗತ್ತೆ.

ನಮ್ಮ ಈ ಗೆಳೆತನಕ್ಕೆ ಬರೋಬ್ಬರಿ ೧೪ ವರ್ಷಗಳ ಸಂಬಂಧ ಇದೆ. ಎಲ್ಲರು ಈಗಲೂ ನೆನಪುಗಳನ್ನ  ಉಳಿಸಿಕೊಂಡಿದ್ದೇವೆ, ಅವರವರ ಸಂಸಾರಗಳ ತಾಪತ್ರಯದಲ್ಲಿ ಒಮೊಮ್ಮೆ ಟೈಮ್ ಸಿಕ್ಕಾಗೆಲ್ಲ ಮಾತಾಡ್ತೇವೆ, ವಾಟ್ಸ್ ಅಪ್ಪು, ಎಫ್ ಬಿ ಗಳಲ್ಲಿ ಆಕ್ಟಿವ್ ಆಗಿದ್ದೇವೆ. ಗೆಳೆತನ ಮಾಗಿದೆ, ಆದರೆ ಲವಲವಿಕೆಯಿಂದ ಕೂಡಿದೆ. ನೆನಪುಗಳು ಮುಖದಲ್ಲೊಂದು ಮಂದಹಾಸ ತರುತ್ತೆ . ಆಗೆಲ್ಲ ನಮ್ಮ ಗ್ರೂಪಿನ ಹೆಸರು ಕೂಡ ನೈನ್ ಪ್ಲಾನೆಟ್ಸ್  ಅಂತ ಹೆಸರು ಇತ್ತು.   ​

ಮಿಸ್ಸಿಂಗ್ ಯು ಪೀಪಲ್ ಅಂಡ್ ಅವರ್ ಕ್ಯಾಂಟೀನ್, ಪಾರ್ಕ್ ಸಂಗೀತ... ಇತ್ಯಾದಿ ಇತ್ಯಾದಿ

-ತ್ರಿವೇಣಿ ಟಿ.ಸಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT