ಗ್ಯಾಡ್ಜೆಟ್ಸ್

ಒನ್‌ಪ್ಲಸ್‌ನ ಸಂಭವನೀಯ ದೋಷಗಳನ್ನು ಕಂಡುಹಿಡಿಯಿರಿ, 7 ಸಾವಿರ ಡಾಲರ್ ವರೆಗೆ ಬಹುಮಾನ ಪಡೆಯಿರಿ!

Prasad SN

ನೀವು ಮೊಬೈಲ್ ಫೋನ್ ದೋಷಗಳನ್ನು ಆಗಾಗ್ಗೆ ವರದಿ ಮಾಡುವ ಭದ್ರತಾ ತಜ್ಞರಾಗಿದ್ದೀರಾ? ಹಾಗಾದರೆ, ನಿಮಗಾಗಿ ಒಳ್ಳೆಯ ಸುದ್ದಿ ಇಲ್ಲಿದೆ. ದೋಷಗಳ ವರದಿಗಳಿಗಾಗಿ ಒನ್‌ಪ್ಲಸ್ ಗುರುವಾರ 7 ಸಾವಿರ ಡಾಲರ್ ವರೆಗೆ ಬಹುಮಾನ ಘೋಷಿಸಿತು.

ಮೊಬೈಲ್ ಫೋನ್ ಕಂಪನಿಯು ಭದ್ರತಾ ಪ್ರತಿಕ್ರಿಯೆ ಕೇಂದ್ರವನ್ನು ಸ್ಥಾಪಿಸಿದೆ. ಅದು ಕಂಪನಿಯ ಸಿಸ್ಟಮ್ ಗಳಿಗೆ ಸಂಭವನೀಯ ಬೆದರಿಕೆಗಳನ್ನು ಕಂಡುಹಿಡಿದು ವರದಿ ಮಾಡುವ ಭದ್ರತಾ ತಜ್ಞರಿಗೆ ಬಹುಮಾನ ನೀಡುತ್ತದೆ. ಅರ್ಹತಾ ದೋಷಗಳ ವರದಿಗಳಿಗೆ ಬಹುಮಾನವು ಬೆದರಿಕೆಯ ಸಂಭಾವ್ಯ ಪರಿಣಾಮವನ್ನು ಅವಲಂಬಿಸಿ 50 ರಿಂದ 7 ಸಾವಿರ ಡಾಲರ್ ವ್ಯಾಪ್ತಿಯಲ್ಲಿರುತ್ತದೆ.

ಜಾಗತಿಕ ಒನ್‌ಪ್ಲಸ್ ಭದ್ರತಾ ಪ್ರತಿಕ್ರಿಯೆ ಕೇಂದ್ರವು ಕಂಪನಿಯ ಸಿಸ್ಟಮ್ ಗಳ ಸುರಕ್ಷತೆಯ ಮೇಲೆ ಪರಿಣಾಮ ಬೀರಬಹುದಾದ ಸಮಸ್ಯೆಗಳನ್ನು ಕಂಡುಹಿಡಿಯಲು, ಬಹಿರಂಗಪಡಿಸಲು ಮತ್ತು ಪರಿಹರಿಸಲು ಶಿಕ್ಷಣ ತಜ್ಞರು ಮತ್ತು ಭದ್ರತಾ ವೃತ್ತಿಪರರನ್ನು ತೊಡಗಿಸುತ್ತದೆ ಮತ್ತು ಬಳಕೆದಾರರ ಸುರಕ್ಷತೆಗೆ ಸಂಭವನೀಯ ಬಾಹ್ಯ ಬೆದರಿಕೆಗಳನ್ನು ಎದುರಿಸಲು ಅವರಿಗೆ ಸಹಾಯ ಮಾಡುತ್ತದೆ.

ಭದ್ರತಾ ವೃತ್ತಿಪರರನ್ನು, ಭದ್ರತಾ ಸಮಸ್ಯೆಗಳನ್ನು ವರದಿ ಮಾಡಲು ಮತ್ತು ಪೂರ್ಣ ಕಾರ್ಯಕ್ರಮದ ನಿಯಮಗಳಿಗಾಗಿ security.oneplus.com ಗೆ ಭೇಟಿ ನೀಡಲು ಆಹ್ವಾನಿಸಲಾಗಿದೆ. ಚೀನಾದ ಸ್ಮಾರ್ಟ್‌ಫೋನ್ ತಯಾರಕರಾದ ಒನ್‌ಪ್ಲಸ್‌, ಹ್ಯಾಕರ್ ಒನ್ ಎಂಬ ಪ್ರಸಿದ್ಧ ಕಂಪನಿಯ ಜೊತೆ ಪಾಲುದಾರಿಕೆಗೆ ಸಹಿ ಹಾಕಿದೆ. ಇದು ಹ್ಯಾಕರ್-ಶಕ್ತ ಭದ್ರತಾ ಪ್ಲ್ಯಾಟ್ ಫಾರ್ಮ್ ಆಗಿದೆ.

ಹ್ಯಾಕರ್‌ಒನ್ ಸಹಯೋಗವು ಪ್ರಾಯೋಗಿಕ ಕಾರ್ಯಕ್ರಮವಾಗಿ ಪ್ರಾರಂಭವಾಗಲಿದ್ದು, ಸಂಭಾವ್ಯ ಬೆದರಿಕೆಗಳ ವಿರುದ್ಧ ಒನ್‌ಪ್ಲಸ್‌ನ ಸಿಸ್ಟಮ್ ಗಳನ್ನು ಪರೀಕ್ಷಿಸಲು ಆಯ್ದ ಸಂಶೋಧಕರನ್ನು ಆಹ್ವಾನಿಸುತ್ತದೆ. ಕಾರ್ಯಕ್ರಮದ ಸಾರ್ವಜನಿಕ ಆವೃತ್ತಿಯನ್ನು 2020 ರಲ್ಲಿ ಚಾಲನೆಗೆ ತರಲು ನಿರ್ಧರಿಸಲಾಗಿದೆ. ಎಲ್ಲಾ ಆಹ್ವಾನಿತ ಸಂಶೋಧಕರು ತಮ್ಮ ವರದಿಗಳನ್ನು ಹ್ಯಾಕರ್‌ಒನ್ ಮೂಲಕ ಸಲ್ಲಿಸುತ್ತಾರೆ.

'ಒನ್‌ಪ್ಲಸ್ ನಮ್ಮ ಗ್ರಾಹಕರು ನಮಗೆ ಒಪ್ಪಿಸಿರುವ ಎಲ್ಲಾ ಮಾಹಿತಿಯ ಗೌಪ್ಯತೆಯನ್ನು ಗೌರವಿಸುತ್ತದೆ' ಎಂದು ಒನ್‌ಪ್ಲಸ್‌ನ ಸಿಇಒ ಮತ್ತು ಸ್ಥಾಪಕ ಪೀಟ್ ಲಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

SCROLL FOR NEXT