ಗ್ಯಾಡ್ಜೆಟ್ಸ್

ಇನ್ನು ಮುಂದೆ ಗೂಗಲ್ ಅಸಿಸ್ಟೆಂಟ್ ಮೂಲಕ ವಾಟ್ಸ್ ಆಪ್ ಧ್ವನಿ, ವಿಡಿಯೋ ಕರೆಯೂ ಸಾಧ್ಯ! 

Srinivas Rao BV

ಗೂಗಲ್ ಅಸಿಸ್ಟೆಂಟ್ ಮೂಲಕ ಇನ್ನು ಮುಂದಿನ ದಿನಗಳಲ್ಲಿ ವಾಟ್ಸ್ ಆಪ್ ಧ್ವನಿ ಕರೆ, ವಿಡಿಯೋ ಕರೆಗಳನ್ನೂ ಮಾಡಬಹುದು ಎಂದು ಗೂಗಲ್ ತಿಳಿಸಿದೆ.

ಗೂಗಲ್ ಅಸಿಸ್ಟೆಂಟ್ ನ್ನು ಬಳಕೆ ಮಾಡಿಕೊಳ್ಳುವ ಮೂಲಕ ವಾಟ್ಸ್ ಆಪ್ ಹಾಗೂ ಅದರ ಇನ್ನಿತರ ಆಯ್ಕೆಗಳನ್ನು ಸುಲಭವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಈ ವರೆಗೂ ಗೂಗಲ್ ಅಸಿಸ್ಟೆಂಟ್ ಆಯ್ಕೆಯ ಮೂಲಕ ನೆಟ್ವರ್ಕ್ ಕರೆ ಅಥವಾ ಹ್ಯಾಂಗ್ಸ್ ಔಟ್, ಗೂಗಲ್ ಡಿಯೋ ಕರೆಗಳನ್ನು ಮಾಡುವುದಕ್ಕೆ ಮಾತ್ರ ಉಪಯೋಗಿಸಬಹುದಾಗಿತ್ತು. ಆಂಡಾಯ್ಡ್ ಮೊಬೈಲ್ ನಲ್ಲಿ ಗೂಗಲ್ ಅಸಿಸ್ಟೆಂಟ್ ಆಪ್ ಡೌನ್ ಲೋಡ್ ಮಾಡಿಕೊಂಡರೆ ಧ್ವನಿ ಸೂಚನೆಗಳ ಮೂಲಕ ಬೇಗಾಗಿರುವ ಆಪ್ ಗಳನ್ನು ಬಳಕೆ ಮಾಡಬಹುದಾಗಿದೆ. ಗೂಗಲ್ ಅಸಿಸ್ಟೆಂಟ್ ಮೂಲಕ ನಿರ್ದಿಷ್ಟ ಆಪ್ ನಿಂದ ನಿರ್ದಿಷ್ಟ ವ್ಯಕ್ತಿಗೆ ಧ್ವನಿ ಕರೆ ಅಥವಾ ವಿಡಿಯೋ ಕರೆ ಮಾಡಲು ನಿರ್ದೇಶನ ನೀಡಬಹುದಾಗಿದೆ. ಈ ಮೂಲಕವಾಗಿ ಸ್ವಯಂಚಾಲಿತವಾಗಿ ಕರೆ ಹೋಗಲಿದೆ.

SCROLL FOR NEXT