ಗ್ಯಾಡ್ಜೆಟ್ಸ್

ಕಣ್ಣ ಮುಂದೆಯೇ ತೆರೆದುಕೊಳ್ಳಲಿದೆ 3ಡಿ ಜಗತ್ತು: ರಿಲಯನ್ಸ್ ನಿಂದ ಜಿಯೋ ಗ್ಲಾಸ್ ಬಿಡುಗಡೆ 

Raghavendra Adiga

ಕಣ್ಣ ಮುಂದೆಯೇ  3ಡಿ ಸಂವಹನ, ಹೊಲೊಗ್ರಾಫಿಕ್  ಗಳನ್ನು ವೀಕ್ಷಿಸುವ ಸಲುವಾಗಿ  ರಿಲಯನ್ಸ್ ಸಂಸ್ಥೆ ಹೊಸದಾಗಿ ಜಿಯೀಗ್ಲಾಸ್ ಸಲಕರಣೆಯನ್ನು ಬಿಡುಗಡೆ ಮಾಡಿದೆ,

ರಿಲಯನ್ಸ್ ಜಿಯೋ ಜಿಯೋಗ್ಲಾಸ್ ಎಂಬ ಹೊಸ ಉತ್ಪನ್ನವನ್ನುಬಿಡುಗಡೆ ಮಾಡಿದ್ದು ಇದರಿಂದ 3ಡಿ ಸಂವಹನ, ಹೊಲೊಗ್ರಾಫಿಕ್ ಕಂಟೆಂಟ್ ಮತ್ತು ಸಾಮಾನ್ಯ ವೀಡಿಯೊ ಕಾನ್ಫರೆನ್ಸಿಂಗ್ ವೈಶಿಷ್ಟ್ಯಗಳನ್ನು ಹೊಂದಬಹುದಾಗಿದೆ. 

ಜಿಯೋ ಗ್ಲಾಸ್ ಕೇವಲ 75 ಗ್ರಾಂ ತೂಕವಿರುತ್ತದೆ ಮತ್ತುಪರ್ಸನಲೈಸ್ ಗೊಳಿಸಲಾದ ಆಡಿಯೊ ಸಹ ಒಳಗೊಂಡಿರಲಿದೆ. ಈ ಸಾಧನದ ಮೂಲಕ  ಸ್ಮಾರ್ಟ್‌ಫೋನ್‌ಗೆ ಸಂಪರ್ಕಿಸಬಹುದಾದ ಸರಳ ಕೇಬಲ್ ಅನ್ನುಸಹ ಜಿಯೀಗ್ಲಾಸ್ ಜತೆಗೆ  ಒದಗಿಸಲಾಗುತ್ತದೆ. 

ಕಂಪನಿಯ ಪ್ರಕಾರ, ಜಿಯೋ ಗ್ಲಾಸ್ ಇದೀಗ 25 ಅಪ್ಲಿಕೇಶನ್‌ಗಳಿಂದ ಕೂಡಿದೆ,. . ಹೊಲೊಗ್ರಾಫಿಕ್ ಕಂಟೆಂಟ್ ಗಳನ್ನು ಬಳಸಿಕೊಂಡು ಗ್ಲಾಸ್ ಅನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಬಳಸಬಹುದಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಹೊಸ ಪಾಲುದಾರರನ್ನು ಘೋಷಿಸಿದ್ದು ಕಂಪನಿಯು ಗೂಗಲ್ ನ್ನು ಹೊಸ ಕಾರ್ಯತಂತ್ರದ ಪಾಲುದಾರ ಎಂದು ಘೋಷಿಸಿದೆ. ಸರ್ಚ್ ಇಂಜಿನ್ ದೈತ್ಯ ಸಂಸ್ಥೆ ಗೂಗಲ್ ರಿಲಯನ್ಸ್ ಜಿಯೀನಲ್ಲಿ , 7 33,737 ಕೋಟಿ ಹೂಡಿಕೆ ಮಾಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಮಧ್ಯಸ್ಥಗಾರರ ಒಟ್ಟು ಹೂಡಿಕೆಯನ್ನು .5 1,52,056 ಕೋಟಿಗೆ  ತೆಗೆದುಕೊಂಡು ಹೋಗಲಿದೆ. 

SCROLL FOR NEXT