ಕೈಗೆಟುಕುವ ದರದಲ್ಲಿ ಇನ್ಫಿನಿಕ್ಸ್‌ ಹಾಟ್‌ 9, ಹಾಟ್‌ 9 ಪ್ರೋ ಸ್ಟಾರ್ಟ್‌ಫೋನ್‌ ಬಿಡುಗಡೆ 
ಗ್ಯಾಡ್ಜೆಟ್ಸ್

ಕೈಗೆಟುಕುವ ದರದಲ್ಲಿ ಇನ್ಫಿನಿಕ್ಸ್‌ ಹಾಟ್‌ 9, ಹಾಟ್‌ 9 ಪ್ರೋ ಸ್ಟಾರ್ಟ್‌ಫೋನ್‌ ಬಿಡುಗಡೆ

ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಮೊಬೈಲ್‌ ಫೋನ್‌ ದೊರಕಿಸುವ ಉದ್ದೇಶದಿಂದ ಇನ್ಫಿನಿಕ್ಸ್‌ ಸಂಸ್ಥೆಯು ಹಾಟ್‌ 9 ಮತ್ತು ಹಾಟ್‌ 9 ಪ್ರೋ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕೃತಕ ಬುದ್ದಿವಂತಿಕೆ ಆಧಾರಿತ 13 ಎಂಪಿ ಕ್ವಾಡ್‌ ಹಿಂಬದಿ ಕ್ಯಾಮರಾವನ್ನು ಈ ಸ್ಮಾರ್ಟ್‌ಫೋನ್‌ ಹೊಂದಿದೆ.

ಬೆಂಗಳೂರು: ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಮೊಬೈಲ್‌ ಫೋನ್‌ ದೊರಕಿಸುವ ಉದ್ದೇಶದಿಂದ ಇನ್ಫಿನಿಕ್ಸ್‌ ಸಂಸ್ಥೆಯು ಹಾಟ್‌ 9 ಮತ್ತು ಹಾಟ್‌ 9 ಪ್ರೋ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕೃತಕ ಬುದ್ದಿವಂತಿಕೆ ಆಧಾರಿತ 13 ಎಂಪಿ ಕ್ವಾಡ್‌ ಹಿಂಬದಿ ಕ್ಯಾಮರಾವನ್ನು ಈ ಸ್ಮಾರ್ಟ್‌ಫೋನ್‌ ಹೊಂದಿದೆ.

ಎಚ್‌ಡಿ+ ಡಿಸ್ಪೆ ಹೊಂದಿದ್ದು ಸೌಡ್‌ ಬಹಳ ಶಕ್ತಿಶಾಲಿ ಆಗಿದೆ. 6.6 ಇಂಚಿನ ಬೆಜೆಲ್‌-ಲೆಸ್‌ ದಿಸ್ಪೆ ಹೊಂದಿದೆ. ಶೇಕಡ 90.5 ಸ್ಕ್ರೀನ್‌ ಟು ಬಾಡಿ ರೇಶಿಯೋ ಹೊಂದಿದೆ. ಹಾಟ್‌ 9 ಪ್ರೋ ಸ್ಮಾರ್ಟ್‌ಫೋನ್‌ ಕೃತಕ ಬುದ್ದಿವಂತಿಕೆ ಆಧಾರಿತ 48 ಎಂಪಿ ಸ್ವ್ಕಾಡ್‌ ಹಿಂಬದಿ ಕ್ಯಾಮರಾ ಹೊಂದಿದೆ. 64 ಜಿಬಿ ಆಂತರಿಕ ಸಂಗ್ರಹದೊಂದಿಗೆ 4 ಜಿಬಿ ಡಿಡಿಆರ್ 4 ರಾಮ್, ಹೆಲಿಯೊ ಪಿ 22 ಆಕ್ಟಾ-ಕೋರ್ ಪ್ರೊಸೆಸರ್, ಮತ್ತು ಫಿಂಗರ್ಪ್ರಿಂಟ್ ಅಥವಾ ಫೇಸ್ ಅನ್ಲಾಕ್ ಜೊತೆಗೆ ಡ್ಯುಯಲ್ ವೋಲ್ಟ್/‌ವೈಫೈ/ಒಟಿಜಿ ಇದೆ.

14 ದಿನಗಳ ತಡೆರಹಿತ ವೀಡಿಯೊ ಪ್ಲೇಬ್ಯಾಕ್, 40 ಗಂಟೆಗಳ 4 ಜಿ ಟಾಕ್‌ಟೈಮ್ ಮತ್ತು 13 ಗಂಟೆಗಳ ಗೇಮಿಂಗ್ ಅನ್ನು ಒದಗಿಸುವ 19 ದಿನಗಳ ಸ್ಟ್ಯಾಂಡ್‌ಬೈ ಸಮಯದೊಂದಿಗೆ 5,000 ಎಂಎಹೆಚ್ ಬ್ಯಾಟರಿ‌ ಹೊಂದಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಜೂನ್ 5 ರಿಂದ ಜೂನ್ 8 ರಿಂದ ಮಧ್ಯಾಹ್ನ 12 ಗಂಟೆಗೆ ಈ ಎರಡು ಫೋನ್‌ಗಳು ಲಭ್ಯವಿರುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಗೆ ರೂ.10 ಕೋಟಿ: ಸುರಂಗ ರಸ್ತೆ ಯೋಜನೆಯಿಂದ 'ಸಸ್ಯೋದ್ಯಾನ'ದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ- ಡಿಕೆ ಶಿವಕುಮಾರ್

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

SCROLL FOR NEXT