ಸ್ಮಾರ್ಟ್ ಫೋನ್  
ಗ್ಯಾಡ್ಜೆಟ್ಸ್

ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗುತ್ತಿರುವ ಸ್ಮಾರ್ಟ್ ಫೋನ್ ಗಳಿವು...

ಗ್ಯಾಡ್ಜೆಟ್ ಪ್ರಿಯರಿಗೆ ಏಪ್ರಿಲ್ ತಿಂಗಳು ಅತ್ಯಂತ ಆಕರ್ಷಣೀಯವಾಗಿದೆ.

ಒನ್ ಪ್ಲಸ್ ನಾರ್ಡ್ ಸಿಇ4, ರಿಯಲ್ ಮೀ 12x 5G, ಮೋಟರೋಲಾ ಎಡ್ಜ್ 50 ಪ್ರೋ ಸೇರಿದಂತೆ ಈ ತಿಂಗಳಲ್ಲಿ ಹಲವು ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗುತ್ತಿವೆ. ಈ ಎಲ್ಲಾ ಹೊಸ ಶ್ರೇಣಿಯ ಮೊಬೈಲ್ ಫೋನ್ ಗಳು ಸ್ಲೀಕ್ ವಿನ್ಯಾಸ, ಹೆಚ್ಚಿನ ಕಾರ್ಯಕ್ಷಮತೆಯ ಬ್ಯಾಟರಿ ಮತ್ತು ಹಲವಾರು ಇತರ ಅತ್ಯಾಧುನಿಕ ವಿಶೇಷಣಗಳನ್ನು ಹೊಂದಿವೆ.

ಈ ತಿಂಗಳಲ್ಲಿ ಬಿಡುಗಡೆಯಾಗುತ್ತಿರುವ ಮೊಬೈಲ್ ಫೋನ್ ಗಳ ವಿವರ ಹೀಗಿದೆ.

ಒನ್ ಪ್ಲಸ್ ನೋರ್ಡ್ ಸಿಇ4: ಏ.1 ರಂದು ಈ ಸ್ಮಾರ್ಟ್ ಫೋನ್ ಬಿಡುಗಡೆಯಾಗಿದೆ. OnePlus Nord CE 4 ನ ಕೆಲವು ಪ್ರಮುಖ ವೈಶಿಷ್ಟ್ಯಗಳು ಮತ್ತು ವಿಶೇಷಣಗಳೆಂದರೆ ಅದು Qualcomm Snapdragon 7 Gen 3 ಪ್ರೊಸೆಸರ್, 100W SuperVOOC ಚಾರ್ಜಿಂಗ್ ನ್ನು ಹೊಂದಿದೆ. ಡಾರ್ಕ್ ಕ್ರೋಮ್ ಮತ್ತು Celadon ಮಾರ್ಬಲ್ ಬಣ್ಣಗಳಲ್ಲಿ ಆಯ್ಕೆಗಳು ಲಭ್ಯವಿದೆ. 8GB RAM ಮತ್ತು 256GB ಸ್ಟೋರೇಜ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳು ಲಭ್ಯವಿದೆ. ಮೂಲ ಮಾದರಿಯ ಆರಂಭಿಕ ಬೆಲೆ 24,999 ರೂಗಳಾಗಿವೆ.

Realme 12X 5G: ಈ ಹ್ಯಾಂಡ್‌ಸೆಟ್ ನ್ನು 2 ಏಪ್ರಿಲ್ 2024 ರಂದು ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಈ ಹ್ಯಾಂಡ್‌ಸೆಟ್‌ನ ಕೆಲವು ಪ್ರಮುಖ ವೈಶಿಷ್ಟ್ಯಗಳು ಮತ್ತು ವಿಶೇಷಣಗಳೆಂದರೆ 6.72-ಇಂಚಿನ Full HD+ LCD ಡಿಸ್ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್, Android 14 ಆಪರೇಟಿಂಗ್ ಸಿಸ್ಟಮ್, 5,000mAh ಬ್ಯಾಟರಿಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ 13,499 ರೂಪಾಯಿಗಳಾಗಿವೆ.

Realme C65: ಈ ಹ್ಯಾಂಡ್‌ಸೆಟ್ ನ್ನು ವಿಯೆಟ್ನಾಂನಲ್ಲಿ ಏಪ್ರಿಲ್ 2 ರಂದು ಬಿಡುಗಡೆ ಮಾಡಲಾಗಿದೆ. ಫಿಲಿಪೈನ್ಸ್, ಮಲೇಷ್ಯಾ, ಬಾಂಗ್ಲಾದೇಶ ಮತ್ತು ಇಂಡೋನೇಷ್ಯಾದಂತಹ ಇತರ ದೇಶಗಳಲ್ಲಿ ಶೀಘ್ರದಲ್ಲೇ ಅನಾವರಣಗೊಳ್ಳುವ ನಿರೀಕ್ಷೆಯಿದೆ. ಭಾರತದಲ್ಲಿ Realme C65 ಬಿಡುಗಡೆ ದಿನಾಂಕದ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಈ ಹ್ಯಾಂಡ್‌ಸೆಟ್‌ನ ಕೆಲವು ವೈಶಿಷ್ಟ್ಯಗಳು ಮತ್ತು ವಿಶೇಷಣಗಳೆಂದರೆ 6.67-ಇಂಚಿನ LCD ಪ್ಯಾನೆಲ್, MediaTek Helio G85 ಪ್ರೊಸೆಸರ್, 45W SuperVOOC ಫಾಸ್ಟ್ ಚಾರ್ಜಿಂಗ್ ಜೊತೆಗೆ 5000 mAh ಬ್ಯಾಟರಿಯನ್ನು ಈ ಮೊಬೈಲ್ ಒಳಗೊಂಡಿದೆ.

Infinix Note 40 Pro ಸರಣಿ: ಈ ಸ್ಮಾರ್ಟ್‌ಫೋನ್ ಏಪ್ರಿಲ್ 2024 ರಲ್ಲಿ ಭಾರತದಲ್ಲಿ ಬಿಡುಗಡೆಯಾಗುವುದು ಖಚಿತವಾಗಿದೆ. ನಿಖರವಾದ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ. ಈ ಹ್ಯಾಂಡ್‌ಸೆಟ್‌ನ ಆರಂಭಿಕ ಬೆಲೆ ರೂ 24,000 ಎಂದು ನಿರೀಕ್ಷಿಸಲಾಗಿದೆ. ಈ ಮೊಬೈಲ್ ನ ಕೆಲವು ನಿರೀಕ್ಷಿತ ವೈಶಿಷ್ಟ್ಯಗಳು ಮತ್ತು ವಿಶೇಷಣಗಳೆಂದರೆ 6.78-ಇಂಚಿನ FHD+ AMOLED ಡಿಸ್ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ 7020 SoC, 4,600mAh ಬ್ಯಾಟರಿಯನ್ನು ಈ ಮೊಬೈಲ್ ಹೊಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

Kabaddi World Cup 2025: ವಿಶ್ವಕಪ್ ಗೆದ್ದ ಭಾರತದ ವನಿತೆಯರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಶ್ಲಾಘನೆ

SCROLL FOR NEXT