ವಾಟ್ಸ್ ಆಪ್ ತನ್ನ ಹೊಸ ಆವೃತ್ತಿಯಲ್ಲಿ ಸ್ಪ್ಯಾಮ್ ನಿಯಂತ್ರಣಕ್ಕೆ ಕೆಲವು ಕ್ರಮಗಳನ್ನು ಕೈಗೊಂಡಿದೆ.
ಮೆಸೇಜಿಂಗ್ ವೇದಿಕೆ ಎದುರಿಸುತ್ತಿರುವ ಸ್ಪ್ಯಾಮ್ ಸಮಸ್ಯೆಯನ್ನು ನಿಯಂತ್ರಿಸುವುದಕ್ಕಾಗಿ ವಾಟ್ಸ್ ಆಪ್ ಹೊಸ ಗೌಪ್ಯತೆ ಫೀಚರ್ ಪರಿಚಯಿಸಿದೆ. ಆಂಡ್ರಾಯ್ಡ್ ಗಾಗಿ ಅಭಿವೃದ್ಧಿಪಡಿಸಿರುವ ಬೀಟಾ ಆವೃತ್ತಿ 2.24.18.2 ಯಲ್ಲಿ ಭದ್ರತೆಯನ್ನು ಹೆಚ್ಚಿಸಿ ಅನಗತ್ಯ ಮೆಸೇಜ್ ಗಳನ್ನು ತಪ್ಪಿಸುವುದಕ್ಕೆ ಬಳಕೆದಾರಹೆಸರು ಪಿನ್ ವ್ಯವಸ್ಥೆ ಪರಿಚಯಿಸಲಾಗಿದೆ ಎಂದು ಜಿಎಸ್ಎಂ ಅರೇನಾ ವರದಿ ಮಾಡಿದೆ.
ಈ ಹೊಸ ಫೀಚರ್ WhatsApp ಬಳಕೆದಾರರಿಗೆ ತಮ್ಮ ಬಳಕೆದಾರರ ಹೆಸರಿನ ಜೊತೆಗೆ ನಾಲ್ಕು-ಅಂಕಿಯ PIN ಹೊಂದಲು ಅನುವು ಮಾಡಿಕೊಡಲಾಗುತ್ತದೆ. PIN ಹೆಚ್ಚುವರಿ ಭದ್ರತೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಹಿಂದೆ ನಿಮ್ಮೊಂದಿಗೆ ಸಂವಹನ ನಡೆಸದ ಬಳಕೆದಾರರು ನಿಮ್ಮ ಬಳಕೆದಾರಹೆಸರನ್ನು ತಿಳಿದುಕೊಳ್ಳುವ ಮೂಲಕ ನಿಮಗೆ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗದೇ ಇರುವುದನ್ನು ಖಚಿತಪಡಿಸುತ್ತದೆ.
ಜಿಎಸ್ಎಂ ಅರೆನಾ ಪ್ರಕಾರ, ಈ ಕ್ರಮವು ಸ್ಪ್ಯಾಮ್ ಅನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಮತ್ತು WhatsApp ಬಳಕೆದಾರರಿಗೆ ಗೌಪ್ಯತೆಯನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.