ನವದೆಹಲಿ: ರಿಲಾಯನ್ಸ್ ಜಿಯೋ ಭಾರತದ ಮೊದಲ ಸ್ಮಾರ್ಟ್ ಟಿವಿ ಆಪರೇಟಿಂಗ್ ಸಿಸ್ಟಮ್ ನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ಈ ಒ.ಎಸ್ ಗೆ ಜಿಯೋ ಟೆಲಿ ಒಎಸ್ ಎಂದು ಹೆಸರು ನೀಡಲಾಗಿದ್ದು, ಇದು ಸ್ಮಾರ್ಟ್ ಟಿವಿಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಟಿವಿ ಒಇಎಂಗಳಿಗೆ ಕೈಗೆಟುಕುವ ಬೆಲೆಯಲ್ಲಿ ಅನುಭವವನ್ನು ಒದಗಿಸಲು ಅನುವು ಮಾಡಿಕೊಡುತ್ತದೆ.
ಇದನ್ನು "ಮುಂದಿನ ಪೀಳಿಗೆಯ ವೇದಿಕೆ" ಎಂದು ಹೇಳಿರುವ ಜಿಯೋ, ಭಾರತೀಯ ಗ್ರಾಹಕರ ಅಗತ್ಯಗಳನ್ನು ಪೂರೈಸುವ ಮೂಲಕ ಮನರಂಜನಾ ಅನುಭವದ ವ್ಯಾಖ್ಯಾನವನ್ನೇ ಈ ಒಎಸ್ ಬದಲಿಸಿದೆ ಎಂದು ಹೇಳಿದೆ.
ಜಿಯೋಟೆಲಿ ಓಎಸ್ ನಿಂದ ನಡೆಸಲ್ಪಡುವ ಸ್ಮಾರ್ಟ್ ಟಿವಿ ಸೆಟ್‌ಗಳು ಫೆಬ್ರವರಿ 21, 2025 ರಿಂದ ಲಭ್ಯವಿರಲಿದ್ದು, ಥಾಮ್ಸನ್, ಕೊಡಾಕ್, ಬಿಪಿಎಲ್ ಮತ್ತು ಜೆವಿಸಿಯಂತಹ ಬ್ರ್ಯಾಂಡ್‌ಗಳಿಗೆ ಪೈಪೋಟಿ ನೀಡುತ್ತಿದೆ.
ಭಾರತದಲ್ಲಿ ಸುಮಾರು 35 ಮಿಲಿಯನ್ ಸಂಪರ್ಕಿತ ಟಿವಿ ಮನೆಗಳೊಂದಿಗೆ, ಜಿಯೋ ಡಿಜಿಟಲ್ ಮನರಂಜನೆಗಾಗಿ ಬೇಡಿಕೆ ಹೆಚ್ಚಾಗುವುದನ್ನು ನಿರೀಕ್ಷಿಸುತ್ತಿದೆ.
ಜಿಯೋಟೆಲಿ ಓಎಸ್ ಭಾರತೀಯ ಮನೆಗಳನ್ನು ವೇಗದ, ಪ್ರೀಮಿಯಂ ಮತ್ತು ವಿಷಯ-ಭರಿತ ಸ್ಮಾರ್ಟ್ ಟಿವಿ ಪ್ಲಾಟ್‌ಫಾರ್ಮ್‌ನೊಂದಿಗೆ ಪರಿವರ್ತಿಸುವ ಗುರಿಯನ್ನು ಹೊಂದಿದೆ.