ವಿಘ್ನ ದೂರಾಗಿಸೋ ಗಣಪತಿ ಶ್ಲೋಕ 
ಗಣೇಶ ಚತುರ್ಥಿ

ವಿಘ್ನ ನಿವಾರಕ ಗಣಪತಿ ಶ್ಲೋಕ

ಉದ್ಭವ ಮೂರ್ತಿ ವಿಘ್ನಗಳನ್ನು ದೂರಾಗಿಸೋ ಗಣಪತಿ ಶ್ಲೋಕಗಳು...

ಶ್ರೀಮನ್ಮಹಾಗಣಾಧಿಪತಯೇ |
ಅರ್ಥ: ಗಣಗಳ ನಾಯಕನಾದ ಶ್ರೀ ಗಣಪತಿಗೆ ನಾನು ನಮಸ್ಕರಿಸುತ್ತೇನೆ||

ಇಷ್ಟದೇವತಾಭ್ಯೋ ನಮಃ |
ಅರ್ಥ
: ನನ್ನ ಆರಾಧ್ಯ ದೇವತೆಗೆ ನಾನು ನಮಸ್ಕರಿಸುತ್ತೇನೆ ||


ಕುಲದೇವತಾಭ್ಯೋ  ನಮಃ |

ಅರ್ಥ: ಕುಲದೇವತೆಗೆ ನಾನು ನಮಸ್ಕರಿಸುತ್ತೇನೆ ||

ಗ್ರಾಮದೇವತಾಭ್ಯೋ  ನಮಃ |

ಅರ್ಥ: ಗ್ರಾಮದೇವತೆಗೆ ನಾನು ನಮಸ್ಕರಿಸುತ್ತೇನೆ ||

ಸ್ಥಾನದೇವತಾಭ್ಯೋ  ನಮಃ |

ಅರ್ಥ: ಸ್ಥಾನದೇವತೆಗೆ ನಾನು ನಮಸ್ಕರಿಸುತ್ತೇನೆ ||

ಆದಿತ್ಯಾದಿ ನವಗ್ರಹದೇವತಾಭ್ಯೋ  ನಮಃ |
ಅರ್ಥ: ಸೂರ್ಯಾದಿ ಒಂಬತ್ತು ಗ್ರಹದೇವತೆಗಳಿಗೆ ನಾನು ನಮಸ್ಕರಿಸುತ್ತೇನೆ ||

ಸರ್ವೇಭ್ಯೋ ದೇವೇಭ್ಯೋ  ನಮಃ |

ಅರ್ಥ: ಎಲ್ಲ ದೇವರಿಗೆ ನಾನು ನಮಸ್ಕರಿಸುತ್ತೇನೆ ||

ಸರ್ವೇಭ್ಯೋ ಬ್ರಾಹ್ಮಣೇಭ್ಯೋ ನಮೋ  ನಮಃ |
ಅರ್ಥ: ಎಲ್ಲ ಬ್ರಾಹ್ಮಣರಿಗೆ (ಬ್ರಹ್ಮನನ್ನು ತಿಳಿದಿರುವವರಿಗೆ)ನಾನು ನಮಸ್ಕರಿಸುತ್ತೇನೆ ||

ಅವಿಘ್ನಮಸ್ತು |

ಅರ್ಥ: ಎಲ್ಲ ಸಂಕಟಗಳ ನಾಶವಾಗಲಿ ||



ವಕ್ರತುಂಡ ಮಹಾಕಾಯ ಕೋಟಿ ಸೂರ್ಯಸಮಪ್ರಭ|
ನಿರ್ವಿಘ್ನಂ ಕುರುಮೇ ದೇವ ಸರ್ವಕಾರ್ಯೇಷು ಸರ್ವದಾ||


ಅರ್ಥ: ಕೆಟ್ಟ ಮಾರ್ಗದಲ್ಲಿ ಹೋಗುವವರನ್ನು ಸರಿದಾರಿಗೆ ತರುವ, ಪ್ರಚಂಡ ಶರೀರವಿರುವ ಮತ್ತು ಕೋಟಿ ಸೂರ್ಯರ ತೇಜವಿರುವ ಹೇ ಗಣಪತಿದೇವಾ, ನನ್ನ ಕಾರ್ಯಗಳಲ್ಲಿನ ವಿಘ್ನಗಳನ್ನು ನೀನು ಶಾಶ್ವತವಾಗಿ ದೂರಗೊಳಿಸು, ನಾನು ನಿನಗೆ ನಮಸ್ಕರಿಸಿ, ನಿನ್ನ ಧ್ಯಾನ ಮಾಡುತ್ತೇನೆ.



ಕಾರ್ಯಂ ಮೇ ಸಿದ್ಧಿಮಾಯಾತು ಪ್ರಸನ್ನೇ ತ್ವಯಿ ಧಾತರಿ|
ವಿಘ್ನಾನಿ ನಾಶಮಾಯಾಂತು ಸರ್ವಾಣಿ ಗಣನಾಯಕ||


ಅರ್ಥ: ಹೇ ಗಣನಾಯಕಾ, ನೀನು ನನ್ನ ಮೇಲೆ ಪ್ರಸನ್ನನಾಗು. ಹಾಗೆಯೇ ನನ್ನ ಕಾರ್ಯದಲ್ಲಿನ ಎಲ್ಲ ವಿಘ್ನಗಳನ್ನು ದೂರಗೊಳಿಸಿ ನೀನೇ ನನ್ನ ಕಾರ್ಯವನ್ನು ಪೂರ್ಣಗೊಳಿಸು.


ಏಕದಂತಂ ಶೂರ್ಪಕರ್ಣಂ ಗಜವಕ್ತ್ರಂ ಚತುರ್ಭುಜಮ್|
ಪಾಶಾಂಕುಶಧರಂ ದೇವಂ ಧ್ಯಾಯೇತ್ ಸಿದ್ಧಿವಿನಾಯಕಮ್||


ಅರ್ಥ: ಯಾರ ಮುಖ ಕಮಲದಲ್ಲಿ ಒಂದೇ ದಂತವಿದೆ, ಕಿವಿಗಳು ಮೊರದಗಲವಾಗಿವೆ, ಮುಖವು ಆನೆಯಾಗಿದೆ, ನಾಲ್ಕು ಕೈಗಳಿವೆ ಮತ್ತು ಕೈಗಳಲ್ಲಿ ಅಂಕುಶ ಮತ್ತು ಪಾಳವನ್ನು ಹಿಡಿದಿದ್ದಾನೆ, ಇಂತಹ ಶ್ರೀ ಸಿದ್ಧಿವಿನಾಯಕ ದೇವರನ್ನು ನಾನು ಧ್ಯಾನಿಸುತ್ತೇನೆ.




ಶುಕ್ಲಾಂ ಬರಧರಂ ವಿಷ್ಣು ಶಶಿವರ್ಣಂ ಚತುರ್ಭುಜಂ|
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪ ಶಾಂತಯೇ||


ಶುಕ್ಲಾಂ ಬರಧರಂ- ಬಿಳಿಯಾದ ಬಟ್ಟೆಯನ್ನು ಧರಿಸಿರುವ
ವಿಷ್ಣುಂ- ಲಕ್ಷ್ಮೀಪತಿಯಾದ ನಾರಾಯಣನನ್ನು
ಶಶಿವರ್ಣಂ - ಬೆಳ್ಳಗಿನ ಬಣ್ಣದ
ಚತುರ್ಭುಜಂ- 4 ಭುಜಗಳುಳ್ಳ
ಪ್ರಸನ್ನ ವದನಂ- ಪ್ರಸನ್ನವಾದ ಮುಖವುಳ್ಳ
ಧ್ಯಾಯೇತ್- ಧ್ಯಾನ ಮಾಡಬೇಕು ಯಾಕೆಂದರೆ
ಸರ್ವ ವಿಘ್ನೋಪಶಾಂತಯೇ- ಕೆಲಸದಲ್ಲಿ ಯಾವುದೇ ವಿಘ್ನಗಳು ಒದಗಿದಾಗ ಪರಿಹಾರಕ್ಕಾಗಿ ಧ್ಯಾನ ಮಾಡಬೇಕು.


ಬಿಳಿಯಾದ ಬಟ್ಟೆಯನ್ನು ಧರಿಸಿರುವ, ಲಕ್ಷ್ಮೀಪತಿಯಾದ ನಾರಾಯಣನನ್ನು, ಬೆಳ್ಳಗಿನ ಬಣ್ಣದ, 4 ಭುಜಗಳುಳ್ಳ ಪ್ರಸನ್ನವಾದ ಮುಖವುಳ್ಳ ದೇವನನ್ನು ಧ್ಯಾನ ಮಾಡಬೇಕು. ಯಾಕೆಂದರೆ ಕೆಲಸದಲ್ಲಿ ಯಾವುದೇ ವಿಘ್ನಗಳು ಬಂದೊದಗದಿರಲಿ ಎಂದು ಪರಿಹಾರಕ್ಕಾಗಿ ಧ್ಯಾನ ಮಾಡಬೇಕು.

-ಮಂಜುಳ.ವಿ.ಎನ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT