ಆರೋಗ್ಯ-ಜೀವನಶೈಲಿ

ಒತ್ತಡದಿಂದ ಬಳಲುತ್ತಿದ್ದೀರಾ? ಹಾಗಾದ್ರೆ ಹಗ್ ಮಾಡಿ

Rashmi Kasaragodu

ನವದೆಹಲಿ: ಮಾನಸಿಕ ಒತ್ತಡ ಹಾಗೂ ಸೋಂಕಿನಿಂದ ಬಳಲುತ್ತಿದ್ದೀರಾ? ಹಾಗಾದರೆ ನಿಮ್ಮ ಪ್ರೀತಿ ಪಾತ್ರರನ್ನು ಆಲಿಂಗನ ಮಾಡಿ, ನಿಮ್ಮ ಒತ್ತಡ ಕಡಿಮೆಯಾಗುತ್ತದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಕಾರ್ನೆಗ್ ಮೆಲ್ಲನ್ ವಿಶ್ವವಿದ್ಯಾಲಯದ ಡೈಟ್ರಿಚ್ ಕಾಲೇಜ್ ಆಫ್ ಹ್ಯುಮಾನಿಟೀಸ್ ಆ್ಯಂಡ್ ಸೋಷಲ್ ಸಯನ್ಸ್‌ನ ವಿಜ್ಞಾನಿಗಳು ಆಲಿಂಗನದ ಮೂಲಕ ನಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಬಹುದೆಂದು ಕಂಡು ಹಿಡಿದಿದ್ದಾರೆ. ಅದೇ ವೇಳೆ ಸೋಂಕಿಗೆ ಒಳಗಾಗುವವರು ಕೂಡಾ ಆಲಿಂಗನ ಮಾಡುವ ಮೂಲಕ ಅನಾರೋಗ್ಯವನ್ನು ತಡೆಗಟ್ಟಬಹುದೆಂದು ವಿಜ್ಞಾನಿಗಳು ಹೇಳಿದ್ದಾರೆ.

ಪರಸ್ಪರ ಆಲಿಂಗನದಿಂದಾಗಿ ಪ್ರೀತಿ ಹಾಗು ಬೆಂಬಲ ಸಿಗುವುದರಿಂದ ಒತ್ತಡವನ್ನು ದೂರವಿರಿಸಬಹುದು. ವ್ಯಕ್ತಿಯೊಬ್ಬನಿಗೆ ಸಾಮಾಜಿಕ ಬೆಂಬಲ ಸಿಕ್ಕಿದರೆ ಆತ ಖಿನ್ನತೆ ಹಾಗೂ ಆತಂಕಗಳಿಂದ ಮುಕ್ತನಾಗಬಹುದು.  ವ್ಯಕ್ತಿಯೊಬ್ಬ ಅನುಭವಿಸುವ ಒತ್ತಡ ಆತ ಸಮಾಜದಲ್ಲಿ ಯಾವ ರೀತಿ ಬೆರೆಯುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಆತನಿಗೆ ಸಾಮಾಜಿಕ ಬೆಂಬಲ ಸಿಗದೇ ಇದ್ದಾಗಲೇ ಆತ ಹೆಚ್ಚು ಒತ್ತಡಗೊಳಗಾಗುತ್ತಾನೆ. ಅಂಥಾ ವ್ಯಕ್ತಿಗಳಿಗೆ ಆಲಿಂಗನ ಮಾಡುವ ಮೂಲಕ ಮನೋಧೈರ್ಯವನ್ನು ನೀಡಬಹುದು ಎಂದು  ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.
 
ವಿಶ್ವಾಸರ್ಹ ವ್ಯಕ್ತಿಯನ್ನು ಆಲಿಂಗನ ಮಾಡಿದಾಗ ನಮ್ಮ ಮನಸ್ಸಿಗೆ ಹೆಚ್ಚು ಧೈರ್ಯ ಸಿಗುತ್ತದೆ. ಹೆಚ್ಚು ಹೆಚ್ಚು ಆಲಿಂಗನ ಮಾಡುವ ಮೂಲಕ ನಮ್ಮನ್ನು ನಾವು ಒತ್ತಡದಿಂದ ದೂರವಿರಿಸಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಸ್ತುತ ಅಧ್ಯಯನ ವರದಿ ಸೈಕಾಲಾಜಿಕಲ್ ಸಯನ್ಸ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.

SCROLL FOR NEXT