ಆರೋಗ್ಯ-ಜೀವನಶೈಲಿ

ಚಳಿಗಾಲದ ಚರ್ಮ ಚಿಕಿತ್ಸೆ

Mainashree

ಚಳಿಗಾಲದಲ್ಲಿ ಚರ್ಮವನ್ನು ಅದೆಷ್ಟೇ ಆರೈಕೆ ಮಾಡಿದರೂ ಕಾಂತಿ ಕಳೆದುಕೊಳ್ಳುವುದು ಸಹಜ. ಕೆಲವು ಕ್ರೀಂಗಳನ್ನು ಬಳಸಿದರಂತೂ ಇರುವ ಕಾಂತಿಯನ್ನೂ ಚರ್ಮ ಕಳೆದುಕೊಳ್ಳುತ್ತದೆ. ಹಾಗಾದರೆ ಇದರ ಒಟ್ಟಾರೆ ರಕ್ಷಣೆಗೆ ಏನಿದೆ ಮನೆ ಮದ್ದು?

  • ಪಪ್ಪಾಯಿ, ಮಾವು, ಬಾಳೆಹಣ್ಣಿನ ಸಿಪ್ಪೆಗಳಿಂದ ಮುಖವನ್ನು ಚೆನ್ನಾಗಿ ಮಸಾಜ್ ಮಾಡಿ.
  • ಮೊಣಕೈ ಮೊಣಕಾಲು ಕಪ್ಪಾಗಿದ್ದರೆ ನಿಂಬೆಹಣ್ಣಿನ ರಸ ಹಿಂಡಿದ ನಂತರ ಸಿಪ್ಪೆಯನ್ನು ಎಸೆಯದೇ, ಕಪ್ಪಾದ ಭಾಗಕ್ಕೆ ಮಸಾಜ್ ಮಾಡಿ.
  • ಮಲ್ಲಿಗೆ, ಜಾಜಿ ಮುಂತಾದ ಸುವಾಸನಾಭರಿತ ಹೂಗಳನ್ನು ಒಣಗಿದ ನಂತರ ಎಸೆಯುವ ಬದಲು ಒಣಗಿದ ನಿಂಬೆಸಿಪ್ಪೆ, ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿಯೊಂದಿಗೆ ಹೆಸರುಹಿಟ್ಟು ಹಾಗೂ ಕಡಲೆ ಹಿಟ್ಟು ಸೇರಿಸಿ ವಾರಕ್ಕೊಮ್ಮೆ ಮುಖಕ್ಕೆ ಲೇಪಿಸಿ. 5 ನಿಮಿಷದ ನಂತರ ತೊಳೆಯಿರಿ. ನಿತ್ಯ ಮುಖ ತೊಳೆಯುವುದಕ್ಕೂ ಈ ಪುಡಿಯನ್ನು ಬಳಸಬಹುದು.
SCROLL FOR NEXT