ಆರೋಗ್ಯ-ಜೀವನಶೈಲಿ

ಶಸ್ತ್ರಚಿಕಿತ್ಸೆಗೊಳಗಾದವರು ಶೀಘ್ರವಾಗಿ ಚೇತರಿಸಿಕೊಳ್ಳಲು ಸಂಗೀತ ಕೇಳಿ!

Srinivas Rao BV

ಲಂಡನ್: ಶಸ್ತ್ರಚಿಕಿತ್ಸೆಗೊಳಗಾದವರು ಶೀಘ್ರವಾಗಿ ಚೇತರಿಸಿಕೊಳ್ಳಲು ಸಂಶೋಧಕರು ಹೊಸ ವಿಧಾನವನ್ನು ಕಂಡುಹಿಡಿದ್ದಾರೆ. ಶಸ್ತ್ರಚಿಕಿತ್ಸೆಗೆ ಮೊದಲು, ಶಸ್ತ್ರಚಿಕಿತ್ಸೆ ವೇಳೆ, ಅಥವಾ ನಂತರ ಸಂಗೀತವನ್ನು ಕೇಳುವುದರಿಂದ ರೋಗಿಗಳು ವೇಗವಾಗಿ ಚೇತರಿಸಿಕೊಳ್ಳುತ್ತಾರಂತೆ.

ಬ್ರುನೆಲ್ ವಿಶ್ವವಿದ್ಯಾಲಯದಲ್ಲಿ, ಶಸ್ತ್ರ ಚಿಕಿತ್ಸೆ ವೇಳೆ ಸಂಗೀತ ಕೇಳುವುದರ ಬಗ್ಗೆ 7000 ರೋಗಿಗಳನ್ನೊಳಗೊಂಡ ಸುಧೀರ್ಘವಾದ ಅಧ್ಯಯನ ನಡೆದಿದೆ. ಸಂಗೀತ ಕೇಳುವುದರಿಂದ ನೋವು ಮತ್ತು ಆತಂಕ ಕಡಿಮೆಯಾಗಿ ನೋವಿಗೆ  ಚಿಕಿತ್ಸೆ ನೀಡುವ ಅಗತ್ಯವೂ ಕಡಿಮೆಯಾಗುತ್ತದೆ.

ಸಾಮಾನ್ಯ ಅರವಳಿಕೆ ಮದ್ದು ನೀಡಿದಾಗಲೂ ಸಂಗೀತ ಆಲಿಸುವುದರಿಂದ ರೋಗಿಯ ನೋವು ಕುಗ್ಗುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸಂಗೀತ ಕೇಳುವ ಸೌಲಭ್ಯ ಒದಗಿಸಬೇಕು ಎಂದು ಖ್ಯಾತ ಲೇಖಕ ಡಾ ಕ್ಯಾಥರೀನ್ ಮೀಡ್ಸ್ ಹೇಳಿದ್ದಾರೆ. ಈ ಸಂಶೋಧನಾ ವರದಿ ಲಾನ್ಸೆಟ್  ನಲ್ಲಿ ಪ್ರಕಟವಾಗಿದೆ.

SCROLL FOR NEXT