ವಾರದಲ್ಲಿ 55 ಗಂಟೆಗಿಂತ ಹೆಚ್ಚು ಕೆಲಸ: ಪಾರ್ಶ್ವವಾಯುವಿಗೆ ದಾರಿ 
ಆರೋಗ್ಯ-ಜೀವನಶೈಲಿ

ವಾರದಲ್ಲಿ 55 ಗಂಟೆಗಿಂತ ಹೆಚ್ಚು ಕೆಲಸ; ಪಾರ್ಶ್ವವಾಯುವಿಗೆ ದಾರಿ

ಕೆಲಸದಲ್ಲಿ ಮಗ್ನರಾದವರಿಗೆ ನಾವು ಎಷ್ಟು ಸಮಯ ಆ ಕೆಲಸದಲ್ಲಿ ಕಳೆಯುತ್ತಿದ್ದೇವೆಂಬುದು ತಿಳಿಯುವುದೇ ಇಲ್ಲ. ಈ ಬಗ್ಗೆ ಆಲೋಚನೆ ಮಾಡುವುದು ಬೆರಳೆಣಿಕೆಯಷ್ಟು ಜನರು ಮಾತ್ರ. ದುಡ್ಡು ಸಂಪಾದಿಸಿ ಬೇಗ ಲೈಫ್ ಸೆಟ್ಲ್ ಆಗಿಬಿಡಬೇಕೆಂದು ಆಲೋಚಿಸುವವರೇ ಹೆಚ್ಚು...

ಕೆಲಸದಲ್ಲಿ ಮಗ್ನರಾದವರಿಗೆ ನಾವು ಎಷ್ಟು ಸಮಯ ಆ ಕೆಲಸದಲ್ಲಿ ಕಳೆಯುತ್ತಿದ್ದೇವೆಂಬುದು ತಿಳಿಯುವುದೇ ಇಲ್ಲ. ಈ ಬಗ್ಗೆ ಆಲೋಚನೆ ಮಾಡುವುದು ಬೆರಳೆಣಿಕೆಯಷ್ಟು ಜನರು ಮಾತ್ರ. ದುಡ್ಡು ಸಂಪಾದಿಸಿ ಬೇಗ ಲೈಫ್ ಸೆಟ್ಲ್ ಆಗಿಬಿಡಬೇಕೆಂದು ಆಲೋಚಿಸುವವರೇ ಹೆಚ್ಚು. ಇಂತಹ ಜನರಿಗೆ ಆತಂಕ ಹುಟ್ಟಿಸುವ ವಿಷಯವೊಂದನ್ನು ಸಂಶೋಧನೆಯೊಂದು ಹೊರಹಾಕಿದೆ. ವಾರದಲ್ಲಿ 55 ಗಂಟೆಗಿಂತ ಹೆಚ್ಚು ಕೆಲಸ ಮಾಡುವವರಿಗೆ ಪಾರ್ಶ್ವವಾಯು ದಾಳಿಯಾಗುತ್ತಂತೆ.

ಈ ವರದಿಯನ್ನು ಲ್ಯಾನ್ಸೆಟ್ ಹೊರಹಾಕಿದ್ದು, ವರದಿಯಲ್ಲಿ ವಾರದಲ್ಲಿ 55 ಗಂಟೆಗಿಂತ ಹೆಚ್ಚು ಕೆಲಸ ಮಾಡಿದರೆ ದೇಹಕ್ಕೆ ಪಾರ್ಶ್ವವಾಯುವಿನ ದಾಳಿಯಾಗುತ್ತದೆ. ಅಲ್ಲದೆ, ಹೃದಯ ಸಂಬಂಧಿ ಖಾಯಿಲೆಗಳು ಹೆಚ್ಚಾಗುತ್ತದೆ ಎಂದು ಹೇಳಿದೆ. ಕೆಲಸದ ಅವಧಿಯಿಂದ ಆರೋಗ್ಯದ ಮೇಲಾಗುವ ಪರಿಣಾಮದ ಕುರಿತಂತೆ ಈಗಾಗಲೇ ಹಲವು ದೇಶಗಳು ಸಂಶೋಧನೆ ನಡೆಸಿದ್ದು, ಈ ವರೆಗೂ 17 ಸಂಶೋಧನೆಯನ್ನು ನಡೆಸಲಾಗಿದೆ. ಸಂಶೋಧನೆಗೆ ಪುರುಷ ಹಾಗೂ ಮಹಿಳೆ ಸೇರಿ 528,908 ಮಂದಿಯನ್ನು ಬಳಸಿಕೊಳ್ಳಲಾಗಿದ್ದು, 7.2ವರ್ಷದವರೆಗೂ ಸುಧೀರ್ಘವಾಗಿ ಅಧ್ಯಯನ ಮಾಡಲಾಗಿದೆ.

ಅಧ್ಯಯನದಲ್ಲಿ ಪಾರ್ಶ್ವವಾಯುವಿಗೆ ಧೂಮಪಾನ ಹಾಗೂ ಮಧ್ಯಪಾನ, ದೈಹಿಕ ಚಟುವಟಿಕೆ ಇಲ್ಲದಿರುವಿಕೆಗಳು ಪ್ರಮುಖ ಕಾರಣವಾದಂತೆ ಅಧಿಕ ಸಮಯದ ಕೆಲಸವೂ ಕಾರಣವಾಗುತ್ತದೆ ಎಂದು ತಿಳಿದುಬಂದಿದೆ. ವಾರದಲ್ಲಿ 41-48 ಗಂಟೆಗಳ ಕಾಲ ಕೆಲಸ ಮಾಡುವವರಿಗೆ ಶೇ.10, 49-54 ಗಂಟೆಗಳ ಕಾಲ ಕೆಲಸ ಮಾಡುವವರಿಗೆ ಶೇ.27 ಹಾಗೂ 55 ಕ್ಕಿಂತ ಹೆಚ್ಚು ಕೆಲಸ ಮಾಡುವವರಿಗೆ ಶೇ.33 ರಷ್ಟು ಪಾರ್ಶ್ವವಾಯುವಿನ ದಾಳಿಯಾಗಲಿದೆ ಎಂದು ಅಧ್ಯಯನ ಹೇಳಿದೆ. ಅಲ್ಲದೆ, ಹೆಚ್ಚು ಕೆಲಸ ಮಾಡುವ ವ್ಯಕ್ತಿಗಳಲ್ಲಿ ಒತ್ತಡ ಹೆಚ್ಚಿರುವುದರಿಂದ ಅದು ಶೇ.13 ರಷ್ಟು ಹೃದಯ ಸಂಬಂಧಿ ಖಾಯಿಲೆಗಳನ್ನು ವೃದ್ಧಿಸುತ್ತದೆ ಎಂದು ಹೇಳಿದೆ.



ಧೀರ್ಘಾವಧಿ ಕೆಲಸ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳ ಕುರಿತಂತೆ ಮಾತನಾಡಿರುವ ಲಂಡನ್ ವಿಶ್ವವಿದ್ಯಾಲಯದ ಸೋಂಕುಶಾಸ್ತ್ರಜ್ಞೆ ಮಿಕಾ ಕಿವಿಮಕಿ ಅವರು, ಈ ಕುರಿತಂತೆ ಯುನೈಟೆಡ್ ಸ್ಟೇಟ್ಸ್ ಹಾಗೂ ಆಸ್ಟ್ರೇಲಿಯಾದಲ್ಲಿ 25 ಅಧ್ಯಯನಗಳು ನಡೆದಿವೆ. 603,838 ಪುರುಷ ಹಾಗೂ ಮಹಿಳೆಯರನ್ನು ಅಧ್ಯಯನಕ್ಕೊಳಪಡಿಸಲಾಗಿತ್ತು. 8.5 ವರ್ಷಗಳ ಕಾಲ ಅಧ್ಯವನ್ನು ನಡೆಸಲಾಯಿತು. ವರದಿಯಲ್ಲಿ ಪಾರ್ಶ್ವವಾಯು ಹಾಗೂ ಹೃದಯ ಸಂಬಂಧಿ ತೊಂದರೆಗಳಿಗೆ ಅನುವಂಶಿಕ, ಪರಿಸರ ಹಾಗೂ ವಾತಾವರಣಗಳು ಪ್ರಮುಖ ಕಾರಣವಾಗುತ್ತದೆ ಎಂದು ತಿಳಿದುಬಂದಿತು. ದೈಹಿಕವಾಗಿ ಚಟುವಟಿಕೆಯಿಲ್ಲದ, ಮಧ್ಯಪಾನ ಹಾಗೂ ಧೂಮಪಾನ ಮಾಡುವುದು, ಅಧಿಕ ಒತ್ತಡಗಳು ಹೃದಯ ಹಾಗೂ ಪಾರ್ಶ್ವವಾಯು ದಾಳಿಗೆ ಹೆಚ್ಚು ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

ವಿಶ್ವದಾಖಲೆ ಬರೆದ ಸ್ಮೃತಿ ಮಂದಾನ: ಕ್ಯಾಲೆಂಡರ್ ವರ್ಷದಲ್ಲಿ ODI ಕ್ರಿಕೆಟ್ ನಲ್ಲಿ 1,000 ರನ್ ಪೂರೈಸಿದ ಜಗತ್ತಿನ ಮೊದಲ ಬ್ಯಾಟರ್!

ಯಾವುದೇ ಸಂಪರ್ಕ ಕಡಿತಗೊಳ್ಳದೇ ಎಲ್ಲಾ ಇ-ಮೇಲ್ ಗಳನ್ನು Gmail ನಿಂದ Zoho Mail ಗೆ ವರ್ಗಾವಣೆ ಮಾಡುವುದು ಹೇಗೆ? ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

SCROLL FOR NEXT