ಆರೋಗ್ಯ-ಜೀವನಶೈಲಿ

ಮಹಾಮಾರಿ ಹೆಚ್1ಎನ್1ಗೆ 92 ಬಲಿ

ರಾಜಸ್ತಾನ: ದೇಶಾದಾದ್ಯಂತ ಮರಣ ಮೃದಂಗ ಮುಂದುವರೆಸಿರುವ ಮಾರಕ ರೋಗ ಹೆಚ್1ಎನ್1 24 ಗಂಟೆಗಳಲ್ಲಿ 11 ಮಂದಿಯನ್ನು ಬಲಿತೆಗೆದುಕೊಂಡಿದ್ದು, ರಾಜಸ್ತಾನ ಒಂದರಲ್ಲೇ ಒಟ್ಟು 92 ಮಂದಿ ಸಾವನ್ನಪ್ಪಿದ್ದಾರೆ.

2011ರಿಂದೀಚೆಗೆ ಭಾರತದಲ್ಲಿ ವ್ಯಾಪಕವಾಗಿ ಹರಡಿ ಭೀತಿ ಸೃಷ್ಠಿಸಿದ್ದ ಮಹಾಮಾರಿ ಹಂದಿಜ್ವರ ಮತ್ತೆ ವಕ್ಕರಿಸಿದ್ದು, ರಾಜಸ್ತಾನ ಒಂದರಲ್ಲೇ  897 ಮಂದಿಯಲ್ಲಿ ಹಂದಿ ಜ್ವರದ ಸೋಂಕು ಪತ್ತೆಯಾಗಿದೆ. ಕೇವಲ ತಿಂಗಳ ಅವಧಿಯಲ್ಲೇ 92 ಮಂದಿ ಸಾವನ್ನಪ್ಪಿದ್ದಾರೆ.

ಹೆಚ್1 ಎನ್1 ಮಾರಕ ರೋಗಕ್ಕೆ ಈಗಾಗಲೇ ರಾಜ್ಯ ಸಾಕಷ್ಟು ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡಿದೆ. ಎಚ್ಚರಿಕೆಯ ಕ್ರಮಗಳ ಕುರಿತು ನಮಗೆ ತೃಪ್ತಿಯಿದ್ದು, ಹೆಚ್1ಎನ್1 ಕುರಿತಂತೆ ಜನರಿಗೆ ಅರಿವು ಮೂಡಿಸುವ ಜಾಗೃತಿ ಅಭಿಯಾನ ಕಾರ್ಯಕ್ರಮಗಳನ್ನು ಮತ್ತಷ್ಟು ಬಲಪಡಿಸಬೇಕಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಹೇಳಿದ್ದಾರೆ.

ಹಂದಿ ಜ್ವರ ತಡೆಗಟ್ಟುವ ಸಲುವಾಗಿ ಅಗತ್ಯವಿರುವ ಎಲ್ಲಾ ವೈದ್ಯಕೀಯ ಸೌಲಭ್ಯಗಳನ್ನು ರಾಜ್ಯಕ್ಕೆ ನೀಡುತ್ತಿದ್ದು, ರಾಷ್ಟ್ರೀಯ ಉನ್ನತ ತಜ್ಞ ವೈದ್ಯರನ್ನು ಕಳುಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ವೈದ್ಯಕೀಯ ಮತ್ತು ಆರೋಗ್ಯ ನಿರ್ದೇಶಾನಾಲಯದ ಪ್ರಕಾರ ರಾಜಸ್ತಾನದ 33 ಜಿಲ್ಲೆಗಳಲ್ಲಿ ಈಗಾಗಲೇ ಸುಮಾರು 29 ಜಿಲ್ಲೆಗಳು ಎಚ್1ಎನ್1 ಮಾರಕ ರೋಗಕ್ಕೆ ತುತ್ತಾಗಿದೆ. ಉಳಿದ ಡೊಲ್ಪುರ, ಹನುಮಾನ್‌ಗರ್, ಸಿರೊಹಿ ಮತ್ತು ಬರನ್ 4 ಜಿಲ್ಲೆಗಳು ರೋಗ ಮುಕ್ತ ಜಿಲ್ಲೆಗಳಾಗಿದ್ದು, ಈ ವರೆಗೂ ಯಾವುದೇ ಸೋಂಕು ಪತ್ತೆಯಾಗಿರುವುದಾಗಿ ತಿಳಿದು ಬಂದಿಲ್ಲ ಎಂದು  ರಾಜಸ್ತಾನ ರಾಜ್ಯ ಸರ್ಕಾರದ ವಕ್ತಾರ ರಾಥೋರ್ ಹೇಳಿದ್ದಾರೆ.   

SCROLL FOR NEXT