ಔಷಧ ಸಂಸ್ಕೃತಿಯಲ್ಲಿ ಶುಂಠಿ (ಸಂಗ್ರಹ ಚಿತ್ರ) 
ಆರೋಗ್ಯ-ಜೀವನಶೈಲಿ

ಸರಳ ಮದ್ದು ಶುಂಠಿ

ಸಾವಿರಾರು ವರ್ಷಗಳಿಂದಲೂ ಶುಂಠಿ ನಮ್ಮ ಆಹಾರ ಸಂಸ್ಕೃತಿ ಮತ್ತು ಔಷಧ ಸಂಸ್ಕೃತಿ ಎರಡರಲ್ಲೂ ಮಹತ್ವದ ಸ್ಥಾನ ಗಳಿಸಿಕೊಂಡಿದೆ.

ಸಾವಿರಾರು ವರ್ಷಗಳಿಂದಲೂ ಶುಂಠಿ ನಮ್ಮ ಆಹಾರ ಸಂಸ್ಕೃತಿ ಮತ್ತು ಔಷಧ ಸಂಸ್ಕೃತಿ ಎರಡರಲ್ಲೂ ಮಹತ್ವದ ಸ್ಥಾನ ಗಳಿಸಿಕೊಂಡಿದೆ. ಭಾರತ ಸೇರಿದಂತೆ ಏಷ್ಯಾದ ರಾಷ್ಟ್ರಗಳಲ್ಲಿ ಇದರ ಬಳಕೆ ಹೆಚ್ಚು.

ಶೀತವಾಗಲಿ, ಅಜೀರ್ಣವಾಗಲಿ, ತಲೆನೋವಾಗಲಿ... ಮನೆಮದ್ದುಗಳ ಪೈಕಿ ತಕ್ಷಣ ನೆನಪಿಗೆ ಬರುವುದು ಶುಂಠಿ. ಅರ್ಧಕಪ್ ಶುಂಠಿ ಕಷಾಯ ಕುಡಿದರೆ ಸಣ್ಣಪುಟ್ಟ ತೊಂದರೆಗಳೆಲ್ಲಾ ಮಾಯ. ಹೀಗಾಗಿಯೇ ನಮ್ಮ ಹಿತ್ತಲುಗಳಲ್ಲಿ ಶುಂಠಿಗಿಡಕ್ಕೆ ಕಾಯಂ ಸ್ಥಾನ. ಶಹರಗಳಲ್ಲಿಯೂ ಮಡಿಕೆಗಳಲ್ಲಿ ಇದನ್ನು ಸುಲಭವಾಗಿ ಬೆಳೆಯಬಹುದು. ಶುಂಠಿ ತೀವ್ರ ಥರದ ಸಂಧಿವಾತವನ್ನೂ ನಿಯಂತ್ರಣಕ್ಕೆ ತರುತ್ತದೆ ಎನ್ನುತ್ತಾರೆ ಡೆನ್ಮಾರ್ಕ್ನ ಒಡೆನ್ಸ್ ವಿಶ್ವವಿದ್ಯಾಲಯದ ಡಾ.ಕೃಷ್ಣ ಶ್ರೀವಾತ್ಸವ.

ಸಂಧಿವಾತದಿಂದ ಬಳಲುತ್ತಿದ್ದ ವ್ಯಕ್ತಿಗೆ ಅವರು ನಿತ್ಯ 50 ಗ್ರಾಂ ನಷ್ಟು ಶುಂಠಿಯನ್ನು ಒಂದು ತಿಂಗಳು ಸೇವಿಸಲು ಸಲಹೆ ಮಾಡಿದ್ದರು. ಮೂರು ತಿಂಗಳ ಬಳಿಕ ಅವರನ್ನು ಪರೀಕ್ಷಿಸಿದಾಗ ಸಂಧಿವಾತದಿಂದ ಸಂಪೂರ್ಣ ಗುಣಮುಖರಾಗಿದ್ದರು. ಇದು ಹತ್ತು ವರ್ಷ ಹಿಂದಿನ ಘಟನೆ. ಆನಂತರ ಒಮ್ಮೆಯೂ ಆ ವ್ಯಕ್ತಿಯನ್ನು ವಾತ ಕಾಡಿಲ್ಲ ಎನ್ನುತ್ತಾರೆ ಡಾ.ಕೃಷ್ಣ. ಸಂಧಿವಾತದಿಂದ ಬಳಲುತ್ತಿರುವವರು ಒಂದು ಸಲಕ್ಕೆ 5 ಗ್ರಾಂ ನಂತೆ ದಿನಕ್ಕೆ ಮೂರು ಸಲ, ಒಂದು ತಿಂಗಳ ಕಾಲ ಶುಂಠಿ ಸೇವಿಸುವುದು ಉತ್ತಮ ಎನ್ನುವುದು ಅವರ ಸಲಹೆ.

ಶುಂಠಿಯನ್ನು ಕಿತ್ತು ತಂದು ಹಾಗೆಯೇ ಸೇವಿಸಬೇಡಿ. ಅದು ಅಪಾಯಕಾರಿ ಸಹ. ಅದರ ಖಾರಕ್ಕೆ ಬಾಯಿ ಸುಟ್ಟು  ಹೋಗಬಹುದು. ಶುಂಠಿಯನ್ನು ನಿತ್ಯದ ಅಡುಗೆಯಲ್ಲಿ ಬಳಸಬಹುದು ಅಥವಾ ಶುಂಠಿ ಕಷಾಯ ಮಾಡಿಕೊಂಡು ಕುಡಿಯಬಹುದು. ಇದಾವುದೂ ಆಗದಿದ್ದರೆ ಚಹಾದಲ್ಲಿ ಡಿಕಾಕ್ಷನ್ ಮಾಡುವಾಗಲೇ ಚೂರು ಶುಂಠಿ ಹಾಕಿಕೊಂಡರೆ ಚೆನ್ನಾಗಿ ಕುದಿಯುತ್ತದೆ. ಚಹಾ ರುಚಿಯೂ ಹೆಚ್ಚುತ್ತದೆ.

ಔಷಧವನ್ನೂ ಸೇವಿಸಿಂದತಾಗುತ್ತದೆ. ಔಷಧವಾಗಿ ಬಳಸುವವರು ಸಾಧ್ಯವಾದಷ್ಟೂ ತಾಜಾ ಅಂದರೆ ಹಸಿ ಶುಂಠಿಯನ್ನೇ ಬಳಸುವುದು ಒಳ್ಳೆಯದು. ಒಣ ಶುಂಠಿಗಿಂತಲೂ ಇದರಲ್ಲಿ ಪರಿಣಾಮ ಹೆಚ್ಚು. ಆರೋಗ್ಯವಂತರೂ ನಿಯಮಿತವಾಗಿ ಶುಂಠಿ ಬಳಸುತ್ತಿದ್ದರೆ ವಾತದ ಸಮಸ್ಯೆ ಮಾತ್ರವಲ್ಲ, ಹಲವು ಆರೋಗ್ಯ ತೊಂದರೆಗಳನ್ನು ದೂರ ಇಡಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ತಮ್ಮದೇ ಜನರ ಮೇಲೆ ಬಾಂಬ್ ದಾಳಿ': ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ AIRSTRIKE ಕುರಿತು ಭಾರತ ವ್ಯಂಗ್ಯ

ವಿಶ್ವಸಂಸ್ಥೆ ನಿರ್ಣಯಗಳ ಆಧಾರದ ಮೇಲೆ ಕಾಶ್ಮೀರ ಸಮಸ್ಯೆ ಪರಿಹರಿಸಬೇಕು: ಭಾರತದ ವಿರುದ್ಧ ಮತ್ತೆ ಕ್ಯಾತೆ ತೆಗೆದ ಟರ್ಕಿ ಅಧ್ಯಕ್ಷ..!

ಗಾಝಾ ಯುದ್ಧ ನಿಲ್ಲಿಸಿದ್ರೆ ಮಾತ್ರ ಟ್ರಂಪ್'ಗೆ ನೊಬೆಲ್ ಪ್ರಶಸ್ತಿ; ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್

ಜಾತಿಗಳಿದ್ದ ಮಾತ್ರಕ್ಕೆ ಧರ್ಮ ಒಡೆಯುತ್ತದೆಯೇ? ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ಬಿಂಬಿಸುವುದು ಬಿಜೆಪಿಯ ಏಕೈಕ ಅಜೆಂಡಾ!

"ನನ್ನನ್ನು ರಸ್ತೆಯಲ್ಲಿ ತಡೆದಿದ್ದಾರೆ": ಟ್ರಂಪ್‌ಗೇ ಮ್ಯಾಕ್ರನ್ ಫೋನ್ ಕಾಲ್, ನ್ಯೂಯಾರ್ಕ್‌ ಬೀದಿಯಲ್ಲಿ ಹೈಡ್ರಾಮಾ...!

SCROLL FOR NEXT