ಆರೋಗ್ಯ-ಜೀವನಶೈಲಿ

ಬೀಟ್ರೋಟ್ ಜ್ಯೂಸ್ ಸೇವೆನೆ ಹೆಚ್ಚಿಸಲಿದೆ ಸಿಒಪಿಡಿ ರೋಗಿಗಳ ದೈಹಿಕ ಸಾಮರ್ಥ್ಯ

ಕೊಬ್ಬು ಕೊಲ್ಲುವಂತಹ ಶಕ್ತಿ ಬೀಟ್ರೋಟ್ ಜ್ಯೂಸ್‌ಗೆ ಇದೆ ಎಂದು ಹೇಳಲಾಗುತ್ತದೆ. ಆದರೆ, ಇದು ಸಿಒಪಿಡಿ(ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗ) ರೋಗದಿಂದ...

ಕೊಬ್ಬು ಕೊಲ್ಲುವಂತಹ ಶಕ್ತಿ ಬೀಟ್ರೋಟ್ ಜ್ಯೂಸ್‌ಗೆ ಇದೆ ಎಂದು ಹೇಳಲಾಗುತ್ತದೆ. ಆದರೆ, ಇದು ಸಿಒಪಿಡಿ(ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗ) ರೋಗದಿಂದ ಬಳಲುತ್ತಿರುವವರಿಗೂ ಸಹಕಾರಿಯಾಗಲಿದೆಯಂತೆ.

ಬೀಟ್ರೋಟ್ ಜ್ಯೂಸ್ ಸೇವೆನೆಯಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗ(ಸಿಒಪಿಡಿ)ದಿಂದ ನರಳುತ್ತಿರುವವರ ವ್ಯಾಯಾಮದ ಸಾಮರ್ಥ್ಯ ಹೆಚ್ಚಿಸಲಿದೆ ಎಂದು ನೂತನ ಅಧ್ಯಯನ ಹೇಳುತ್ತದೆ.

ವೇಕ್ ಫಾರೆಸ್ಟ್ ವಿಶ್ವವಿದ್ಯಾಲಯ ಸಿಒಪಿಡಿ ರೋಗಕ್ಕೆ ಸಂಬಂಧಿಸಿದಂತೆ ನಡೆಸಿದ ಸಂಶೋಧನೆಯ ಪ್ರಕಾರ ಸಿಒಪಿಡಿ ರೋಗಿಗಳು ಬೀಟ್ರೋಟ್ ಜ್ಯೂಸ್ ಕುಡಿಯುವುದರಿಂದ ಅವರ ವ್ಯಾಯಾಮ ಮಾಡುವ ಸಾಮರ್ಥ್ಯ ಹೆಚ್ಚಿಸಲಿದೆ ಎಂದು ತಿಳಿದು ಬಂದಿದೆ.

ಬೀಟ್‌ರೋಟ್ ವಿಟಮಿನ್ ಎ ಮತ್ತು ವಿಟಮಿನ್ ಸಿಯನ್ನು ಒಳಗೊಂಡಿದೆ, ಇವು ದೈಹಿಕ ವ್ಯಾಯಾಮವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಬೀಟ್ರೋಟ್ ಜ್ಯೂಸ್ ಸೇವನೆಯಿಂದ ನೇಟ್ರೇಟ್ ಹೆಚ್ಚಾಗಲಿದ್ದು, ವ್ಯಾಯಾಮ ಮಾಡುವ ಶಕ್ತಿಯನ್ನು ವೃದ್ಧಿಸುತ್ತದೆ. ಸಿಒಪಿಡಿ ರೋಗದಿಂದ ನರಳುತ್ತಿರುವವರನ್ನು ಸಂಶೋಧನೆಗೆ ಒಳಪಡಿಸಿದಾಗ ಈ ಸತ್ಯ ತಿಳಿದಿದೆ ಎಂದು ಸಂಶೋಧನೆಯ ಮುಖ್ಯಸ್ಥ ಮಿಚೆಲ್ ಬೆರ್ರಿ ಹೇಳಿದ್ದಾರೆ.

ಸಿಒಪಿಡಿ ಒಬ್ಬರಿಂದ ಒಬ್ಬರಿಗೆ ಹರಡದ ಕಾಯಿಲೆಯಾಗಿದ್ದು, ತೊಂದರೆಗೆ ಒಳಗಾದವರು ಉಸಿರಾಡಲು ಕಷ್ಟಪಡಬೇಕಾಗುತ್ತದೆ. ಹೆಚ್ಚು ಕಾಲ ಉಳಿದುಕೊಳ್ಳುವ ಕೆಮ್ಮು, ಕಫ ತುಂಬುವುದು, ನಡೆಯುವಾಗ ಮತ್ತು ಮೆಟ್ಟಿಲು ಹತ್ತುವಂತಹ ದೈಹಿಕ ಶ್ರಮದ ಸಂದರ್ಭಧಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದು ಈ ರೋಗದ ಮುಖ್ಯ ಲಕ್ಷಣವಾಗಿದೆ.

ಬೀಟ್ರೋಟ್ ಜ್ಯೂಸ್ ಕುಡಿಯುವುದರಿಂದ ದೈಹಿಕ ಶ್ರಮದ ಸಂದರ್ಭದಲ್ಲಿ ಉಂಟಾಗುವ ಉಸಿರಾಟದ ತೊಂದರೆ ಕಡಿಮೆಯಾಗುವುದಲ್ಲದೆ, ರಕ್ತದೊತ್ತಡ ನಿವಾರಣೆಯಾಗಲಿದೆ.

17 ಸಿಒಪಿಡಿ ರೋಗಿಗಳನ್ನು ಸಂಶೋಧನೆಗೆ ಒಳಪಡಿಸಲಾಗಿದೆ. ಅವರಿಗೆ ಬ್ರೀಟ್ರೋಟ್ ಜ್ಯೂಸ್ ನೀಡುವುದರ ಜೊತೆಗೆ ಪ್ರತಿನಿತ್ಯ ಅವರ ಆರೋಗ್ಯದಲ್ಲಿ ಉಂಟಾಗುವ ಬದಾಲವಣೆಯನ್ನು ಗಮನಿಸಲಾಯಿತು. ಈ ಮುಖಾಂತರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ವ್ಯಾಯಾಮದ ಸಾಮರ್ಥ್ಯ ಹೆಚ್ಚಿಸಿದೆ ಎಂದು ವರದಿ ಹೇಳುತ್ತದೆ.

-ಮೈನಾಶ್ರೀ.ಸಿ


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT