ಆರೋಗ್ಯ-ಜೀವನಶೈಲಿ

ನಿರಂತರವಾಗಿ ಡಯಟ್ ಮಾಡುತ್ತಿದ್ರೂ ತೆಳ್ಳಗಾಗುತ್ತಿಲ್ಲ ಏಕೆ?

Shilpa D

ಅವಸರದ ಬದುಕಿನಲ್ಲಿ ಎಲ್ಲವೂ ಫಾಸ್ಟ್ ಆಗಿ ಆಗಬೇಕೆಂಬ ಹೆಬ್ಬಯಕೆ ಎಲ್ಲರದ್ದೂ.  ಹಾಗೆಯೇ ಸ್ಥೂಲ ಕಾಯದವರು ತಕ್ಷಣವೇ ತಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕೆಂಬ ಆಸೆ. ನಿರಂತರವಾಗಿ ಡಯಟ್ ಮಾಡುತ್ತಿದ್ದರೂ ತೂಕ ಮಾತ್ರ ಕಡಿಮೆಯಾಗುತ್ತಿಲ್ಲ ಎಂಬುದು ಹಲವರ ಆರೋಪ.

ಆದರೆ ಈ ಆರೋಪ ಮಾಡುವ ಮುನ್ನ ನಾವು ತಿನ್ನುವ ಆಹಾರ ಹಾಗೂ ನಮ್ಮ ಅಭ್ಯಾಸಗಳ ಬಗ್ಗೆ ಕೊಂಚ ಗಮನ ಹರಿಸಬೇಕಾಗುತ್ತದೆ. ತೂಕ ಕಡಿಮೆ ಮಾಡಿಕೊಳ್ಳುವ ಪ್ರಕ್ರಿಯೆ ಕೇವಲ ಒಂದೆರಡು ವಾರದಲ್ಲಾಗುವ ಕೆಲಸವಲ್ಲ. ಅದಕ್ಕೆ ಅದರದ್ದೇ ಆದ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಡಯಟ್ ಮಾಡಿದ ತಕ್ಷಣವೇ ಸಣ್ಣಗಾಗಲು ಸಾಧ್ಯವಿಲ್ಲ. ಹಾಗೊಂದು ವೇಳೆ ಆದರೆ ಅದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಸಣ್ಣಗಾಗಬೇಕೆಂದು ಬಯಸುವವರು ಕೇವಲ ಡಯಟ್ ಮಾಡಿದರೇ ಸಾಲದು. ಜೊತೆಗೆ ದೇಹವನ್ನು ದಂಡಿಸಬೇಕು. ವ್ಯಾಯಾಮ, ವಾಕಿಂಗ್, ಮಾಡಿದಾಗ ಮಾತ್ರ ಡಯಟ್ ವರ್ಕ್ ಔಟ್ ಆಗುತ್ತದೆ.

ಡಯಟ್ ಮಾಡುತ್ತಿದ್ದೇನೆ ಅಂತಾ ಹೇಳಿ ಸಿಕ್ಕ ಸಿಕ್ಕ ಸಮಯದಲ್ಲಿ ಸ್ವಲ್ಪ ಸ್ವಲ್ಪವೇ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಬೇಡಿ.ಯಾವಾಗ. ಯಾವ ಆಹಾರವನ್ನು ಸೇವಿಸಬೇಕು ಎಂಬುದರ ಬಗ್ಗೆ ಗಮನ ಅಗತ್ಯ. ನಿಯಮಿತವಾಗಿ ನೀರು ಕಡಿಯಬೇಕು. ಸಮಯಕ್ಕೆ ಸರಿಯಾಗಿ ನಿದ್ರೆ ಮಾಡುವುದು ಕೂಡ ದೇಹದ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

SCROLL FOR NEXT