ಬೆನ್ನು ನೋವು 
ಆರೋಗ್ಯ-ಜೀವನಶೈಲಿ

ಬೆನ್ನು ನೋವಿನಿಂದ ಪಾರಾಗಲು ಒಂದಷ್ಟು ಟಿಪ್ಸ್

ಬೆನ್ನು ನೋವು ಈಗಿನ ಕಾಲದಲ್ಲಿ ವೃದ್ಧರು, ಯುವಕರು ಎಂಬ ಭೇದಭಾವವಿಲ್ಲದೆ ಎಲ್ಲರನ್ನೂ ಕಾಡುತ್ತಿದೆ. ಅದರಲ್ಲೂ ಕಂಪ್ಯೂಟರ್ ಎದುರು ಕುಳಿತು ಕೆಲಸ ಮಾಡುವವರಿಗೆ ಬಹಳ ಬೇಗ ಬೆನ್ನು ನೋವಿನ ಸಮಸ್ಯೆ ಕಾಡಲಾರಂಭಿಸುತ್ತದೆ...

ಬೆನ್ನು ನೋವು ಈಗಿನ ಕಾಲದಲ್ಲಿ ವೃದ್ಧರು, ಯುವಕರು ಎಂಬ ಭೇದಭಾವವಿಲ್ಲದೆ ಎಲ್ಲರನ್ನೂ ಕಾಡುತ್ತಿದೆ. ಅದರಲ್ಲೂ ಕಂಪ್ಯೂಟರ್ ಎದುರು ಕುಳಿತು ಕೆಲಸ ಮಾಡುವವರಿಗೆ ಬಹಳ ಬೇಗ ಬೆನ್ನು ನೋವಿನ ಸಮಸ್ಯೆ ಕಾಡಲಾರಂಭಿಸುತ್ತದೆ.

ಮಧ್ಯಾಹ್ನ ಭೋಜನದ ಹೊತ್ತಿಗೆ ಮುನ್ನ ಬೆನ್ನು ನೋವು ಕಾಡುವುದು ಹೆಚ್ಚು ಎಂದು ಸಂಶೋಧನೆಯೊಂದು ತಿಳಿಸಿದೆ. ಬೆಳಗ್ಗೆ ಎದ್ದು ಖುಷಿಯಾಗಿ ದಿನಚರಿಯನ್ನು ಆರಂಭಿಸಬೇಕು ಎಂದುಕೊಳ್ಳುತ್ತೀರಿ. ಆದರೆ ಯಾವುದೇ ಪೂರ್ವಸೂಚನೆ ನೀಡದೆ ಬೆನ್ನು ನೋವು ಕಾಡಲಾರಂಭಿಸುತ್ತದೆ. ಬೆನ್ನುನೋವಿಗೆ ಹೊತ್ತು ಗೊತ್ತು ಏನೂ ಇಲ್ಲ. `ಇದ್ದಕ್ಕಿದ್ದಂತೆ ಕಾಡುವ' ಈ ನೋವು ದಿನದ ಯಾವ ಹೊತ್ತಿನಲ್ಲಿ ಕರೆಯದ ಅತಿಥಿಯಾಗಿ ಬರುತ್ತದೆ ಎಂದು ಸಂಶೋಧಕರು ಬಹಳ ದಿನಗಳಿಂದ ತಲೆಕೆಡಿಸಿಕೊಳ್ಳುತ್ತಿದ್ದರು. ಕರೆಯದ ಈ ಅತಿಥಿ ಮಧ್ಯಾಹ್ನ ಭೋಜನ ವಿರಾಮಕ್ಕೆ ಮುನ್ನ ಹೆಚ್ಚು ಕಾಡುತ್ತದೆ ಎಂದು ಇದೀಗ ಅವರಿಗೆ ಉತ್ತರ ಸಿಕ್ಕಿದೆ.

ಒಂದಷ್ಟು ದೈಹಿಕ ವ್ಯಾಯಾಮವನ್ನು ಮಾಡುತ್ತಿರುತ್ತೀರಿ ಎಂದಿಟ್ಟುಕೊಳ್ಳೋಣ. ಇದ್ದಕ್ಕಿದ್ದಂತೆ ನಿಮ್ಮ ಗಮನ ಬೇರೆಡೆ ಸೆಳೆಯಿತು. ಇಂತಹ ಸಂದರ್ಭದಲ್ಲಿ ನಿಮ್ಮ ನೋವಿನ ಪ್ರಮಾಣ 25 ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ. ಬಹಳ ಬಳಲಿರುತ್ತೀರಿ ಎಂದಿಟ್ಟುಕೊಳ್ಳಿ. ಈ ಸಮಯದಲ್ಲಿ  ಯಾವುದಾದರೂ ವಸ್ತುವನ್ನು ಎತ್ತುವುದು ಅಥವಾ ಅಚಾನಕ್ ಆಗಿ ಆಚೀಚೆ ತಿರುಗುವುದರಿಂದ ಬೆನ್ನು ನೋವು ಉಂಟಾಗುವ ಸಾಧ್ಯತೆ ಮೂರು ಪಟ್ಟು ಹೆಚ್ಚಂತೆ. ಲೈಂಗಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಅಥವಾ ಮದ್ಯಪಾನ ಮಾಡುವುದು, ಆಕಸ್ಮಿಕ ಬೆನ್ನು ನೋವಿಗೆ ಕಾರಣವಾಗುವುದಿಲ್ಲ ಎಂದು ಆಸ್ಟ್ರೇಲಿಯಾದ ಸಂಶೋಧಕರು ಹೇಳುತ್ತಾರೆ.

ಬೆಳಗ್ಗೆ 7ರಿಂದ ಮಧ್ಯಾಹ್ನದವರೆಗೆ ನಮ್ಮ ಬೆನ್ನು ಬಹಳ ನಾಜೂಕಾಗಿ ಇರುತ್ತದೆ ಎಂದು ಈ ಸಂಶೋಧನೆ ಪತ್ತೆ ಹಚ್ಚಿದೆ. ಶೇ. 40ರಷ್ಟು ಉಳುಕು ಮತ್ತು ಸೆಳೆತ ಇತ್ಯಾದಿ ಬೆಳಗಿನ 8ರಿಂದ ಮಧ್ಯಾಹ್ನ 11 ಗಂಟೆ ಅವಧಿಯಲ್ಲಿ ಸಂಭವಿಸಿವೆ ಎಂದು ಅಧ್ಯಯನ ತಂಡದ ಮುಖ್ಯಸ್ಥೆ, ಜಾರ್ಜ್ ಇನ್‍ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ ಮತ್ತು ಸಿಡ್ನಿ ಮೆಡಿಕಲ್ ಶಾಲೆಯ ಮ್ಯಾನ್ಯುಯೆಲಾ ಫೆರಿರಾ ಹೇಳಿದ್ದಾರೆ. 18 ಅಥವಾ ಅದಕ್ಕೂ ಹೆಚ್ಚು ವಯಸ್ಸಿನ 999 ಬೆನ್ನುನೋವಿನ ರೋಗಿಗಳನ್ನು ಈ ಸಂಶೋಧನೆಯಲ್ಲಿ ಬಳಸಿಕೊಳ್ಳಲಾಗಿದೆ.

ಯಾವುದಾದರೂ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾಗ ಗಮನ ಬೇರೆಡೆಗೆ ಸೆಳೆದು ಅಚಾನಕ್ ಆಗಿ ತಿರುಗಿದಾಗ ಬೆನ್ನುನೋವು ಬರುವ ಸಾಧ್ಯತೆ 25 ಪಟ್ಟು ಹೆಚ್ಚು ಎಂದು ಸಂಶೋಧಕರು ಗುರುತಿಸಿದ್ದಾರೆ. ಇದರ ಜತೆಗೆ ಕೆಟ್ಟ ಭಂಗಿ ಮುಂತಾದವುಗಳು ಸಹ ಬೆನ್ನುನೋವಿಗೆ ಕಾರಣವಾಗಬಲ್ಲವು. ಬಳಲಿಕೆ ಮತ್ತು ಸುಸ್ತು ಸಹಾ ಇದಕ್ಕೆ ಕಾರಣವಾಗಬಲ್ಲದು. ಇದಕ್ಕೆ ತದ್ವಿರುದ್ಧ ಎಂಬಂತೆ 60 ವರ್ಷ ವಯಸ್ಸಿನ ವ್ಯಕ್ತಿ ಭಾರದ ವಸ್ತುವನ್ನು ಎತ್ತುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ತಿರುಗಿದಾಗ ಉಂಟಾಗುವ ಅಪಾಯ 20 ವರ್ಷದವರಿಗೆ ಹೋಲಿಸಿದರೆ ಐದು ಪಟ್ಟು ಕಡಿಮೆ! ಪ್ರಾಯಶಃ ಈ ಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಅವರು ಅರಿತಿರುತ್ತಾರೆ. ಈ ಸಂಶೋಧನೆ ವಿಶಿಷ್ಟವಾಗಿದೆ. ಇದೇ ಮೊದಲ ಬಾರಿಗೆ ಭಾರವಾದ ವಸ್ತುಗಳನ್ನು ಎತ್ತುವಾಗ ಗಮನ ಬೇರೆಡೆಗೆ ಹರಿಸಬಾರದು ಎಂದು ಇದು ಹೇಳಿದೆ.

ಅತಿಯಾದ ಭಾರ ಎತ್ತುವುದು,  ತಪ್ಪು ಭಂಗಿ ಅಥವಾ ಗಮನ ಬೇರೆಡೆಗೆ ಸೆಳೆದಾಗ ಬೆನ್ನುನೋವಿನ ಸಾಧ್ಯತೆ ಅಧಿಕ ಎಂಬುದನ್ನು ಈ ಸಂಶೋಧನೆ ಸಾರಿದೆ ಎಂದು ಅಮೆರಿಕನ್ ಕಾಲೇಜ್ ಆಫ್ ರ್ಯುಮೆಟಾಲಜಿಯ ನಿಯತಕಾಲಿಕೆಯಲ್ಲಿ ಪ್ರೊ. ಫೇರಿರಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

SCROLL FOR NEXT