ಸಾಂದರ್ಭಿಕ ಚಿತ್ರ 
ಆರೋಗ್ಯ-ಜೀವನಶೈಲಿ

ಸಾಮಾಜಿಕ ಅಂತರ್ಜಾಲ ಚಟದಿಂದ ಯುವ ಭಾರತೀಯರ ಲೈಂಗಿಕ ಜೀವನ ಹಾಳು: ತಜ್ಞರು

ಹಾಸಿಗೆಯ ಮೇಲಿನ ನಿಜವಾದ ಕ್ರಿಯೆಯನ್ನು ತಮ್ಮ ಸಂಗಾತಿಗಳಿಗೆ ವಾಟ್ಸ್ ಆಪ್ ಮೂಲಕ 'ಕಿಸ್'ಗಳನ್ನು ಕಳುಹಿಸುವುದು, ಫೇಸ್ ಬುಕ್ ನಲ್ಲಿ ಎಮೋಟಿಕಾನ್ ಗಳನ್ನು ಕಳುಹಿಸುವುದು

ಹಾಸಿಗೆಯ ಮೇಲಿನ ನಿಜವಾದ ಕ್ರಿಯೆಯನ್ನು ತಮ್ಮ ಸಂಗಾತಿಗಳಿಗೆ ವಾಟ್ಸ್ ಆಪ್ ಮೂಲಕ 'ಕಿಸ್'ಗಳನ್ನು ಕಳುಹಿಸುವುದು, ಫೇಸ್ ಬುಕ್ ನಲ್ಲಿ ಎಮೋಟಿಕಾನ್ ಗಳನ್ನು ಕಳುಹಿಸುವುದು ಬದಲಿಸಿದೆಯೇ? ಹೌದೆನ್ನುತ್ತಾರೆ ಲೈಂಗಿಕ ಮತ್ತು ನಡವಳಿಕೆ ವಿಜ್ಞಾನದ ತಜ್ಞರು.

ಈ ತಜ್ಞರ ಪ್ರಕಾರ ದುಡಿಮೆ ಮಾಡುತ್ತಿರುವ ಹಲವಾರು ಸಂಗಾತಿಗಳು ತಮ್ಮ ಮಲಗುವ ಕೋಣೆಯೊಳಗೂ ಸ್ಮಾರ್ಟ್ ಫೋನುಗಳು ಮತ್ತು ಟ್ಯಾಬ್ಲೆಟ್ಟುಗಳಿಗೆ ಅಂಟಿಕೊಂಡೇ ಇರುತ್ತಾರೆ ಇದು ಅವರ ಲೈಂಗಿಕ ಜೀವನದ ಮೇಲೆ ಆಘಾತಕಾರಿ ಪರಿಣಾಮ ಬೀರುತ್ತಿದೆ ಎಂದಿದ್ದಾರೆ.

ತಾಂತ್ರಿಕ ಸನಿಹತೆ ಲೈಂಗಿಕವಾಗಿ ಸಕ್ರಿಯವಾಗಿರಬೇಕಾದ ಯುವ ಸಂಗಾತಿಗಳ ನಡುವಿನ ನಿಜವಾದ ಕೂಡಿಕೆಯನ್ನು ತಿಳಿಗೊಳಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

"ಯುವ ಸಂಗಾತಿಗಳು ಅದರಲ್ಲೂ ದುಡಿಮೆಗೆ ತೊಡಗಿಸಿಕೊಂಡಿರುವ ಸಂಗಾತಿಗಳು ದುರ್ಬಲ ಲೈಂಗಿಕ ಆಸಕ್ತಿ ತೊಂದರೆಯನ್ನು ಹೊತ್ತು ನನ್ನಲ್ಲಿಗೆ ಸಲಹೆಗೆ ಬರುವುದು ಬಹಳ ಹೆಚ್ಚಾಗಿದೆ. ಇದು ತಡ ರಾತ್ರಿಯಲ್ಲಿ ಸಾಮಾಜಿಕ ಅಂತರ್ಜಾಲ ಮಾಧ್ಯಮದ ಕಾರಣದಿಂದ" ಎನ್ನುತ್ತಾರೆ ದೇಶದ ಪ್ರಖ್ಯಾತ ಲೈಂಗಿಕ ತಜ್ಞ ಮುಂಬೈನ ಡಾ. ಪ್ರಕಾಶ್ ಕೊಠಾರಿ.

"ದುರ್ಬಲ ಲೈಂಗಿಕ ಕ್ರಿಯೆಗೆ ತಡರಾತ್ರಿಯಲ್ಲಿ ತಾವು ಬಳಸುವ ಸಾಮಾಜಿಕ ಅಂತರ್ಜಾಲ ತಾಣಗಳನ್ನು ದೂರಿ ಬಂದಿರುವ ಸುಮಾರು ೨೦ ಯುವ ಸಂಗಾತಿಗಳಿಗೆ ನಾನು ಸಲಹೆ ನೀಡುತ್ತಿದ್ದೇನೆ" ಎಂದು ಮುಂಬೈನ ಕೆಇಎಂ ಆಸ್ಪತ್ರೆ ಮತ್ತು ಸೇಠ್ ಜಿಎಸ್ ವೈದ್ಯಕೀಯ ಕಾಲೇಜಿನಲ್ಲಿ ಲೈಂಗಿಕ ಔಷಧೀಯ ವಿಭಾಗದ ಸಂಸ್ಥಾಪಕ ಪ್ರೊಫೆಸರ್ ಕೊಠಾರಿ ತಿಳಿಸುತ್ತಾರೆ.

"ಮನೆಗೆ ಕಚೇರಿಯ ಕೆಲಸವನ್ನು ತರುವುದು ಹಾಗು ಸ್ಮಾರ್ಟ್ ಫೋನುಗಳ ನಿರಂತರ ಬಳಕೆ ತಮ್ಮ ಸಂಗಾತಿಯೊಂದಿಗೆ ಸಂವಹನ ಮತ್ತು ಸಂಬಂಧವನ್ನು ಹಾಳುಗೆಡವುತ್ತದೆ" ಎಂದು ನವದೆಹಲಿಯ ಫೋರ್ಟಿಸ್ ಆಸ್ಪತ್ರೆಯ ಮಾನಸಿಕ ಸ್ವಾಸ್ಥ್ಯ ಮತ್ತು ನಡವಳಿಕಾ ವಿಜ್ಞಾನದ ನಿರ್ದೇಶಕ ಸಮೀರ್ ಪಾರಿಖ್ ತಿಳಿಸುತ್ತಾರೆ,

ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ೨೪ ಸಾವಿರ ಮದುವೆಯಾದ ಸಂಗಾತಿಗಳೊಂದಿಗೆ ನಡೆಸಿದ ಅಧ್ಯಯನದಲ್ಲಿ ಇತರ ಜನರ ಉತ್ಸಾಹಭರಿತ ಜೀವನದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚೆಚ್ಚು ಓದಿದಂತೆ ತಮ್ಮ ಜೀವನದ ಬಗ್ಗೆ ಬೇಸರ ಮೂಡಿ ಅದು ತಮ್ಮ ಲೈಂಗಿಕ ಜೀವನವನ್ನು ಹಾಳುಗೆಡವುತ್ತದೆ ಎಂದು ತಿಳಿಸಲಾಗಿತ್ತು.

ಕೊನೆ ಹನಿ:  ಒಳ್ಳೆಯ ಲೈಂಗಿಕ ಜೀವನಕ್ಕೆ ಬೇಕಾದ ಮಂತ್ರ ಇಷ್ಟೇ; ಮನೆಗೆ ಕೆಲಸದೊತ್ತಡಗಳನ್ನು ಕೊಂಡೊಯ್ಯಬೇಡಿ. ರಾತ್ರಿಯ ವೇಳೆಯಲ್ಲಿ ಸಾಮಾಜಿಕ ಅಂತರ್ಜಾಲದ ಬಳಕೆ ಕಡಿಮೆ ಮಾಡಿ. ನಿಮ್ಮ ಸಂಗಾತಿಯ ಜೊತೆಗಿನ ಲೈಂಗಿಕ ಕ್ರಿಯೆಗಳನ್ನು ಚುರುಕುಗೊಳಿಸಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಮೀಸಲಾತಿ ಮುಂದುವರೆಯಲಿ: IAS ಅಧಿಕಾರಿ ವಿವಾದಾತ್ಮಕ ಹೇಳಿಕೆ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

SCROLL FOR NEXT