ಆರೋಗ್ಯ-ಜೀವನಶೈಲಿ

ಮಧುಮೇಹ ರೋಗಿಗಳಿಗೆ ರಾಮಭಾಣ ಮೀನೆಣ್ಣೆ ಮಾತ್ರೆ

Shilpa D

ಮೀನೆಣ್ಣೆ ಮಾತ್ರೆ. ಕಳೆದ 10 ವರ್ಷಗಳಿಂದ ಬಹಳವಾಗಿ ಕೇಳಿ ಬರುತ್ತಿರುವ ಔಷಧಿ. ಅಮೆರಿಕನ್ನರು ಈ ಮೀನೆಣ್ಣೆ ಮಾತ್ರೆಯನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ.  ಇಂದಿನ ಯಾಂತ್ರೀಕೃತ ಬದುಕಿನಲ್ಲಿ ನಮ್ಮ ಆಹಾರ ಪದ್ಧತಿಯಲ್ಲಿ ಎಲ್ಲಾ ಪೋಷಕಾಂಶಗಳು ಸಿಗಲ್ಲ. ಹೀಗಾಗಿ  ಮೀನೆಣ್ಣೆ ಕ್ಯಾಪ್ಸೂಲ್ ಅವಶ್ಯಕ. ಇನ್ನು ಮೀನೆಣ್ಣೆ ಮಾತ್ರೆ ನಾರ್ಮಲ್ ಆಗಿರುವವರು ಸೇವಿಸಿದರೇ, ಚರ್ಮ ಕಾಯಿಲೆಗಳಿಂದ ದೂರವಿರಬಹುದು.

ಮಧುಮೇಹ ರೋಗಿಗಳಿಗೆ ಇದು ರಾಮಬಾಣ. ಮೀನೆಣ್ಣೆ ಮಾತ್ರೆಯಲ್ಲಿರುವ ಓಮೆಗಾ-3 ನರರೋಗಗಳಿಗೆ ತುಂಬಾ ಉಪಯುಕ್ತ. ಮಧುಮೇಹದಿಂದ ಉಂಟಾಗಿರುವ ನರ ದೌರ್ಬಲ್ಯಕ್ಕೆ ಉತ್ತಮ ಮದ್ದು. ಡ್ಯಾಮೇಜ್ ಆಗಿರುವ ನರಗಳಿಗೆ ಶಕ್ತಿ ತುಂಬುತ್ತದೆ. ಮಧುಮೇಹ ನರದೌರ್ಬಲ್ಯ ಚಿಕಿತ್ಸೆಗೆ ತುಂಬಾ ಹಣ ಖರ್ಚಾಗುತ್ತದೆ. ಹೀಗಾಗಿ ಪ್ರತಿನಿತ್ಯ ಮೀನೆಣ್ಣೆ ಕ್ಯಾಪ್ಸೂಲ್ಸ್  ಸೇವಿಸಿದರೇ ಹೆಚ್ಚು ಉಪಯೋಗ. ಮೀನೆಣ್ಣೆಯಿಂದ ಮಸಾಜ್ ಮಾಡಿದ್ರೆ  ಕಾಲಿನಲ್ಲಿ ಉಂಟಾಗುವ ಅಲ್ಸರ್ ಅನ್ನು ಕೂಡ ದೂರ ಮಾಡುತ್ತದೆ. ನರಗಳ ಜೀವಕೋಶಗಳು ಬೆಳೆಯಲು ಸಹಾಯವಾಗುತ್ತದೆ.

ಹೃದಯ ಸಂಬಂಧಿ ರೋಗಗಳಿಂದ ನರಳುತ್ತಿರುವರು, ವೈದ್ಯರ ಸಲಹೆ ಪಡೆದು ನಿಯಮಿತ ಪ್ರಮಾಣದಲ್ಲಿ ಈ ಕ್ಯಾಪ್ಸೂಲ್ ಸೇವಿಸಬೇಕು. ಇದರಿಂದ ಹೃದಯ ಬಡಿತದ ಏರಿಳಿತವನ್ನು ನಿಯಂತ್ರಿಸಿ ಹಾರ್ಟ್ ಅಟ್ಯಾಕ್, ಪಾರ್ಶ್ವವಾಯುಗಳಿಂದ ದೂರ ಇರಬಹುದು.

ಇನ್ನು ಡಯಟ್ ಮಾಡುವವರು ಕೂಡ ಮೀನೆಣ್ಣೆ ಮಾತ್ರೆ ಸೇವಿಸಿದರೇ ಆಹಾರ ಸಮತೋಲನ ಕಾಪಾಡಬಹುದು. ಮೀನನ್ನು ತಿನ್ನಲು ಇಷ್ಟ ಪಡದವರು ಈ ಮಾತ್ರೆ ಸೇವಿಸಿದರೇ ಮೀನು ತಿಂದರೇ ಸಿಗುವಷ್ಟು ಪೋಷಕಾಂಶಗಳು ಇದರಲ್ಲಿ ಸಿಗುತ್ತದೆ. ಜೊತೆಗೆ ಹೃದಯವನ್ನು ಆರೋಗ್ಯವಾಗಿ ಇಡುತ್ತದೆ.

ಆದರೆ ಈ ಮಾತ್ರೆಯನ್ನು ಲಿಮಿಟ್ ಆಗಿ ಸೇವಿಸಬೇಕು. ಅಂದರೆ ಪ್ರತಿದಿನ 3 ಗ್ರಾಂ ಅಷ್ಟು ಮಾತ್ರ ಸೇವಿಸಬೇಕು. ಅಗತ್ಯಕ್ಕಿಂತ ಹೆಚ್ಚಾಗಿ ಸೇವಿಸಿದರೇ ರಕ್ತ ಸ್ರಾವವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ವೈದ್ಯರ ಸಲಹೆ ಮೇರೆಗೆ ಮಾತ್ರೆ ಸೇವಿಸುವುದು ಅವಶ್ಯಕ.

SCROLL FOR NEXT