ಆರೋಗ್ಯ-ಜೀವನಶೈಲಿ

ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರವಿಡಲು ಚಾಕೊಲೆಟ್ ತಿನ್ನಿ!

Srinivas Rao BV

ವಾಷಿಂಗ್ ಟನ್: ನೀವು ಹೃದಯ ಸಂಬಂಧಿ ಸಮಸ್ಯೆಗಳಿಂದ ದೂರವಿರಬೇಕಾ ಹಾಗಾದರೆ ಚಾಕೊಲೆಟ್ ತಿನ್ನಿ! ಪ್ರತಿದಿನವೂ 100  ಗ್ರಾಂ ನಷ್ಟು ಚಾಕೊಲೆಟ್ ತಿಂದರೆ ಹೃದ್ರೋಗ ಹಾಗೂ ಪಾರ್ಶ್ವವಾಯುವಿನಿಂದ ದೂರವಿರಬಹುದು ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

ಇ.ಪಿ.ಐ.ಸಿ ನಾರ್ಫೋಕ್ ಸಹಭಾಗಿಗಳು ನಡೆಸಿರುವ 12 ವರ್ಷಗಳ ಅಧ್ಯಯನದಲ್ಲಿ ಚಾಕೊಲೆಟ್ ತಿಂದವರು ಹೃದಯ ಸಂಬಂಧಿತ ಸಮಸ್ಯೆ ಹಾಗೂ ಪಾರ್ಶ್ವವಾಯುವಿನ ಸಮಸ್ಯೆಗೀಡಾಗುವ ಸಾಧ್ಯತೆ ಕಡಿಮೆ ಇದೆ ಎಂಬುದನ್ನು ಕಂಡುಕೊಂಡಿದ್ದಾರೆ.

ಚಾಕೊಲೆಟ್ ತಿನ್ನದೇ ಇದ್ದವರು ಹೃದ್ರೋಗಕ್ಕೆ ಸಂಬಂಧಿಸಿದಂತೆ ಶೇ.11 ರಷ್ಟು ಕಡಿಮೆ ಅಪಾಯ ಎದುರಿಸುತ್ತಾರೆ ಹಾಗೂ ಸಂಬಂಧಿಸಿದಂತೆ ಸಾವಿಗೆ ಶೇ.25 ರಷ್ಟು  ಕಡಿಮೆ ಅಪಾಯವನ್ನು ಎದುರಿಸುತ್ತಾರೆ ಎಂದು ಅಧ್ಯಯನ ವರದಿ ತಿಳಿಸಿದೆ.

ಅಂತೆಯೇ ಅತಿ ಹೆಚ್ಚು ಚಾಕೊಲೆಟ್ ತಿನ್ನುವವರು, ಇತರ ಸಂಭಾವ್ಯ ಅಪಾಯಕಾರಿ ಅಂಶಗಳನ್ನು ಪರಿಗಣಿಸಿದರೂ ಪಾರ್ಶ್ವವಾಯುವಿಗೆ ಸಂಬಂಧಿಸಿದಂತೆ ಶೇ.23 ರಷ್ಟು ಕಡಿಮೆ ಅಪಾಯ ಎದುರಿಸುತ್ತಾರಂತೆ. ಅತಿ ಹೆಚ್ಚು ಚಾಕೊಲೆಟ್ ಸೇವೆನೆ ಮಾಡುವುದರಿಂದ ಮುಂದೆ ಎದುರಾಗಬಹುದಾದ ಹೃದಯ ಸಂಬಂಧಿತ ಸಮಸ್ಯೆಗಳನ್ನು ದೂರವಿಡಬಹುದಾಗಿದೆ.  
ಪ್ರಸ್ತುತ ಹೃದಯ ಸಂಬಂಧಿ ಕಾಯಿಲೆ ಎದುರಿಸುತ್ತಿರುವವರು ಚಾಕೊಲೆಟ್ ನಿಂದ ದೂರವಿರಬೇಕು ಎಂಬ ಅಂಶವೇನು ಅಧ್ಯಯನದಲ್ಲಿ ಕಂಡುಬಂದಿಲ್ಲ ಎಂದು  ವರದಿ ತಿಳಿಸಿದೆ. ಚಾಕೊಲೆಟ್ ತಿಂದರೆ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ ಎಂಬ ವರದಿ ಜರ್ನಲ್ ಹಾರ್ಟ್ ನಲ್ಲಿ ಪ್ರಕಟವಾಗಿದೆ.

SCROLL FOR NEXT