ಸಾಂದರ್ಭಿಕ ಚಿತ್ರ 
ಆರೋಗ್ಯ-ಜೀವನಶೈಲಿ

ದಿನಕ್ಕೊಂದು ಮೊಟ್ಟೆ...ತುಂಬುವುದು ಹೊಟ್ಟೆ...

ಕೋಳಿ ಮೊದಲೋ...ಮೊಟ್ಟೆ ಮೊದಲೋ... ಎಂಬುದು ಹಳೇಯ ತರ್ಕ. ಆದರೆ ಎರಡು ಮನುಷ್ಯನ ಆಹಾರ. ಮೊಟ್ಟೆ ನಾವು ತಿನ್ನುವ ಆಹಾರಗಳಲ್ಲಿ ಸೂಪರ್ ಫುಡ್ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಕೋಳಿ ಮೊದಲೋ...ಮೊಟ್ಟೆ ಮೊದಲೋ... ಎಂಬುದು ಹಳೇಯ ತರ್ಕ. ಆದರೆ ಎರಡು ಮನುಷ್ಯನ ಆಹಾರ.  ಮೊಟ್ಟೆ ನಾವು ತಿನ್ನುವ ಆಹಾರಗಳಲ್ಲಿ ಸೂಪರ್ ಫುಡ್ ಎಂಬ ಖ್ಯಾತಿಗೆ ಪಾತ್ರವಾಗಿದೆ. ಅತಿ ಹೆಚ್ಚು ಪ್ರಮಾಣದ ಪೋಷಕಾಂಶ ಹಾಗೂ ವಿಟಮಿನ್ ಗಳು ಸಿಗುತ್ತವೆ. ಹೀಗಾಗಿ ಪ್ರತಿ ನಿತ್ಯ ಬೇಯಿಸಿದ ಮೊಟ್ಟೆ ತಿಂದರೆ ಆರೋಗ್ಯಕ್ಕೆ ಬಹಳ ಉತ್ತಮ. ಬೆಳೆಯುವ ಮಕ್ಕಳಿಗೆ ಹಾಗೂ ಡಯಟ್ ಮಾಡುವವರಿಗೆ ಮೊಟ್ಟೆ ಬಹಳ ಉತ್ತಮ. ಇನ್ನು ಪ್ರತಿ ಮೊಟ್ಟೆಯಲ್ಲಿ ಶೇ.6 ರಷ್ಟು ವಿಟಮಿನ್ ಎ, ವಿಟಮಿನ್ ಬಿ5 ಶೇ,7. ವಿಟಮಿನ್ ಬಿ12, ಶೇ15 ಹಾಗೂ ಪ್ರಾಸ್ಪರಸ್ ಶೇ9 ರಷ್ಟು ಇರುತ್ತದೆ. ಜೊತೆಗೆ ವಿಟಮಿನಿ ಇ.  ಪಾಲಿಕ್ ಆಸಿಡ್, ಒಮೆಗಾ 3 ಸೇರಿದಂತೆ ಹಲವು ಅಂಶಗಳು ಮೊಟ್ಟೆಯಲ್ಲಿವೆ. ಹೀಗಾಗಿ ಮೊಟ್ಟೆ ಒಂದು ಪೂರ್ಣ ಪ್ರಮಾಣದ ಆಹಾರ.

ಮೊಟ್ಟೆಯಲ್ಲಿ ಅಧಿಕ ಕೊಲೆಸ್ಟ್ರಾಲ್ ಇದೆ. ಆದರೆ ಇದು ಮನುಷ್ಮನ ದೇಹದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ.  ಈ ಕೊಲೆಸ್ಟ್ರಾಲ್ ರಕ್ತದಲ್ಲಿರುವ ಕೊಬ್ಬನ್ನು ಹೆಚ್ಚಿಸಲ್ಲ. ದೇಹದಲ್ಲಿ ಅತಿ ಹೆಚ್ಚು ಸಾಂದ್ರತೆಯುಳ್ಳ ಲಿಪ್ರೋಪ್ರೋಟೀನ್ ಎಂಬ ಅಂಶವಿರುತ್ತದೆ. ಮೊಟ್ಟೆಯಲ್ಲಿರುವ ಕೊಲೆಸ್ಟ್ರಾಲ್ ಇದರ ಪ್ರಮಾಣವನ್ನು ಕಡಿಮೆ ಮಾಡಿ. ಹೃದಯ ರೋಗ ಮತ್ತು ಪಾರ್ಶ್ವ ವಾಯುಗಳಂತ ರೋಗಗಳಿಂದ ಕಾಪಾಡುತ್ತದೆ.
ಪ್ರತಿ ನಿತ್ಯ ಒಂದು ಮೊಟ್ಟೆ ತಿಂದರೆ ಮಾಂಸಖಂಡಗಳು ಬಲವಾಗುತ್ತವೆ. ಮೊಟ್ಟೆ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ
ಮೊಟ್ಟೆ ಮಾನವನ ಮಿದುಳನ್ನು ಆರೋಗ್ಯವಾಗಿಡುತ್ತದೆ. ಮೊಟ್ಟೆಯಲ್ಲಿ ಅಗತ್ಯವಾಗಿರುವ ವಿಟಮಿನ್ ಹಾಗೂ ಮಿನರಲ್ಸ್ ಇರುವುದರಿಂದ ಮಿದುಳು ಬೆಳೆಯಲು ಸಹಕರಿಸಿ ಬುದ್ದಿವಂತರನ್ನಾಗಿಸುತ್ತದೆ.
ಮೊಟ್ಟೆಯಲ್ಲಿ ವಿಟಮಿನ್ ಬಿ12 ಹೇರಳವಾಗಿರುವುದರಿಂದ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಗರ್ಭಿಣಿಯರು ಮೊಟ್ಟೆ ತಿನ್ನುವುದರಿಂದ ಗರ್ಭದಲ್ಲಿರುವ ಶಿಶುವಿಗೆ ಪೋಷಕಾಂಶ ಹಾಗೂ ಖನಿಜಾಂಶ ಪೂರೈಕೆಯಾಗಿ ಆರೋಗ್ಯಯುತವಾಗಿ ಬೆಳೆಯಲು ಸಹಾಯವಾಗುತ್ತದೆ.
ಮೊಟ್ಟೆ ದೃಷ್ಟಿ ದೋಷವನ್ನು ತಡೆಗಟ್ಟುತ್ತದೆ. ತೀವ್ರ ನಿಶಕ್ತತೆ ಹಾಗೂ ಸಣಕಲು ದೆೇಹದಿಂದ ಬಳಲುತ್ತಿರುವವರು ಪ್ರತಿನಿತ್ಯ ಮೊಟ್ಟೆ ತಿನ್ನುವುದರಿಂದ ಸದೃಢರಾಗಿ ಆರೋಗ್ಯಯುತ ದೇಹ ಹೊಂದಬಹುದು.
ಮಹಿಳೆಯರು ವಾರಕ್ಕೆ 4 ರಿಂದ 5 ಮೊಟ್ಟೆ ತಿನ್ನುವುದರಿಂದ ಸ್ತನ ಕ್ಯಾನ್ಸರ್ ನಿಂದ ದೂರ ವಿರುಬಹುದು.ಇನ್ನು ಡಯಟ್ ಮಾಡುವವರಿಗೂ ಮೊಟ್ಟೆ ಉತ್ತಮ ಆಹಾರ. ಇದರಲ್ಲಿರುವ ವಿಟಮಿನ್ಸ್ ಹಾಗೂ ಮಿನರಲ್ಸ್ ದೇಹಕ್ಕೆ ಬೇಕಾದ ಅವಶ್ಯಕ ಅಂಶಗಳನ್ನು ಪೂರೈಸುವುದರಿಂದ ಆಹಾರ ಸಮತೋಲನ ಕಾಪಾಡಬಹುದು.

ಇನ್ನು ಅನುವಂಶಿಕ ಕಾಯಿಲೆಯಿಂದ ಬಳಲುತ್ತಿರುವವರಿಗೆ ಮೊಟ್ಟೆಯಿಂದ ಕೆಲವು ಅಲರ್ಜಿ ಸಮಸ್ಯೆಗಳು ಉಂಟಾಗಬಹುದು. ಅಂಥ ಸಮಸ್ಯೆ ಇರುವವರು ವೈದ್ಯರ ಸಲಹೆ ಮೇರೆಗೆ ಮೊಟ್ಟೆ ಬಳಸುವುದು ಉತ್ತಮ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT