ಅಲ್ಪ ನಿದ್ರೆಯ ರಹಸ್ಯ ಬಯಲು! (ಸಾಂದರ್ಭಿಕ ಚಿತ್ರ) 
ಆರೋಗ್ಯ-ಜೀವನಶೈಲಿ

ಅಲ್ಪ ನಿದ್ರೆಯ ರಹಸ್ಯ ಬಯಲು!

ಪೂರ್ವಜರಷ್ಟು ಒಳ್ಳೆಯ ನಿದ್ದೆ ಭಾಗ್ಯ ನಮಗ್ಯಾಕೆ ಸಿಗುತ್ತಿಲ್ಲ? ನಾವ್ಯಾಕೆ ಕಡಿಮೆ ನಿದ್ದೆ ಮಾಡುತ್ತಿದ್ದೇವೆ? ಸಂಶೋಧಕರ ಪ್ರಕಾರ ಇದಕ್ಕೆಲ್ಲ ಕಾರಣ ವಿದ್ಯುತ್...

ವಾಷಿಂಗ್ಟನ್: ಪೂರ್ವಜರಷ್ಟು ಒಳ್ಳೆಯ ನಿದ್ದೆ ಭಾಗ್ಯ ನಮಗ್ಯಾಕೆ ಸಿಗುತ್ತಿಲ್ಲ? ನಾವ್ಯಾಕೆ ಕಡಿಮೆ ನಿದ್ದೆ ಮಾಡುತ್ತಿದ್ದೇವೆ? ಸಂಶೋಧಕರ ಪ್ರಕಾರ ಇದಕ್ಕೆಲ್ಲ ಕಾರಣ ವಿದ್ಯುತ್.

ಹೌದು, ವಿದ್ಯುತ್ ಕಂಡು ಹಿಡಿದ ಬಳಿಕ ಮಾನವನ ಇತಿಹಾಸವೇ ಬದಲಾಯಿತು. ಅದರ ಜತೆಗೆ ನಮ್ಮ ನಿದ್ದೆಯ ಪ್ರಕ್ರಿಯೂ ಬದಲಾಯಿತು. ವಿದ್ಯುತ್ ನಿಂದಾಗಿ ನಾವು ಕೃತಕ ಬೆಳಕಿನ ದಾಸರಾಗಿ ಬಿಟ್ಟಿದ್ದೇವೆ. ಇದು ನಮ್ಮ ನಿದ್ದೆಯ ಮೇಲೆ ನೇರ ಪರಿಣಾಮ ಬೀಳುತ್ತಿದೆ. ವಿದ್ಯುತ್ ಬೆಳಕಿನಿಂದ ದೂರವೇ ಇದ್ದ ನಮ್ಮ ಪೂರ್ವಜರಿಗಿಂತ ಕಡಿಮೆ ನಿದ್ದೆ ಮಾಡುತ್ತಿದ್ದೇವೆ ಎಂದು ಸಂಶೋಧಕರು ಹೇಳಿದ್ದಾರೆ.

ಕಡಿಮೆ ನಿದ್ದೆಯ ಹಿಂದಿನ ರಹಸ್ಯ ಬಯಲಿಗೆ ಸಂಶೋಧಕರು ಎರಡು ಬೇಟೆಗಾರ ಸಮುದಾಯವನ್ನು ಆಯ್ಕೆಕು ಮಾಡಿದ್ದರು. ಅದು ಈಶಾನ್ಯ ಅರ್ಜೆಂಟೀನಾದ ಎರಡು ಟೊಬಾ/ಕೋಮ್ಗುಡ್ಡಗಾಡು ಜನಾಂಗ. ಸುಮಾರು 50 ಕಿ.ಮೀ. ಅಂತರದಲ್ಲಿ ಬದುಕುತ್ತಿರುವ ಈ ಎರಡು ಗುಂಪುಗಳಲ್ಲಿ ಒಂದಕ್ಕೆ 24 ಗಂಟೆ ಉಚಿತ ವಿದ್ಯುತ್ ನೀಡಿದರೆ, ಇನ್ನೊಂದಕ್ಕೆ ನೈಸರ್ಗಿಕ ಬೆಳಕನ್ನೇ ಬಳಸುವಂತೆ ಸೂಚಿಸಲಾಗಿತ್ತು.

ಇವರಲ್ಲಿ ವಿದ್ಯುತ್ ಬಳಸಿದ ಸಮುದಾಯ 1 ಗಂಟೆ ಕಡಿಮೆ ನಿದ್ದೆ ಮಾಡಿತ್ತು. 2012-13ರಲ್ಲಿ ನಡೆದ ಈ ಅಧ್ಯಯನದಿಂದ ಸಂಶೋಧಕರಿಗೆ ಈಗಿನ ಜನಾಂಗದ ನಿದ್ರಾ ಸಮಸ್ಯೆಯ ಹಿಂದಿನ ಸತ್ಯ ಬಯಲಾಯಿತು. ಇದಕ್ಕೆ ಸಂಬಂಧಿಸಿದ ಸಂಶೋಧನಾ ವರದಿ ಜರ್ನಲ್ ಆಫ್ ಬಯೊಲಾಜಿಕಲ್ ರಿದಮ್ಸ್ ಎನ್ನುವ ಆನ್‍ಲೈನ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

SCROLL FOR NEXT