ಆರೋಗ್ಯ-ಜೀವನಶೈಲಿ

ಕೆಲಸದಲ್ಲಿ ಫ್ಲೆಕ್ಸಿಬಲ್ ಟೈಮಿಂಗ್ ಇದ್ರೆ ನೌಕರರು ಖುಷಿಯಾಗಿರ್ತಾರಂತೆ!

Rashmi Kasaragodu

ಲಂಡನ್: ಕಚೇರಿಯಲ್ಲಿ ಇಂತಿಷ್ಟೇ ಸಮಯಕ್ಕೆ ಹಾಜರಾಗಬೇಕು, ಇಂತಿಷ್ಟೇ ಸಮಯ ಕೆಲಸ ಮಾಡಬೇಕು ಎಂಬ ಕಟ್ಟುಪಾಡು ಇಲ್ಲದೆ ಸಮಯ ಬದಲಾವಣೆ ಇದ್ದರೆ ನೌಕರರೂ ಖುಷಿ ಅನುಭವಿಸುತ್ತಾರೆ. ಕಚೇರಿ ಕೆಲಸಗಳಲ್ಲಿ ಫ್ಲೆಕ್ಸಿಬಲ್ ಟೈಮಿಂಗ್ ಇದ್ದರೆ ಕೆಲಸ ಮಾಡಲು ನೌಕರರು ಉತ್ಸಾಹ ತೋರಿಸುತ್ತಾರೆ ಎಂದು ಇಂಗ್ಲೆಂಡ್‌ನ ಲಾಬರೋಗ್ ವಿವಿ ನಡೆಸಿದ ಅಧ್ಯಯನ ತಂಡ ತಮ್ಮ ವರದಿಯಲ್ಲಿ ಹೇಳಿದೆ.

ತುಂಬಾ ಹೆಚ್ಚು ಹೊತ್ತು ಕೆಲಸ ಮಾಡುವ ನೌಕರರು ಕೆಲಸದಲ್ಲಿ ಸಂತೃಪ್ತಿ ಕಂಡುಕೊಳ್ಳಲಾಗದೆ ಮಾನಸಿಕ ಹಾಗೂ ಶಾರೀರಿಕ ಒತ್ತಡವನ್ನು ಅನುಭವಿಸುತ್ತಾರೆ.
ಅದೇ ವೇಳೆ  ಕೆಲಸವನ್ನು ನೌಕರರು ಬಯಸುವಾಗ ಮಾಡಿದರೆ ಮಾತ್ರ ಅವರಿಗೆ ಅದು ಖುಷಿ ನೀಡುತ್ತದೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ವಾರದಲ್ಲಿ 40 ರಿಂದ 49 ಗಂಟೆಗಳ ಕಾಲ ಕೆಲಸ ಮಾಡುವವರು ಶೇ. 40 ಮಂದಿ ಇದ್ದರೆ,  50 ಮತ್ತು ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವ ಶೇ.55 ಜನರು ಇದ್ದಾರೆ. ಇದರಲ್ಲಿ  50 ಗಂಟೆಗಿಂತ ಹೆಚ್ಚು ಕೆಲಸ ಮಾಡುವವರು ಕಡಿಮೆ ಹೊತ್ತು ಕೆಲಸ ಮಾಡಲು ಇಚ್ಛಿಸುತ್ತಾರೆ. ನೌಕರರಿಗೆ ಮಿತಿಯಿಂದ ಹೆಚ್ಚು ಕೆಲಸ ನೀಡಿದರೆ ಅವರು ಜೀವನದಲ್ಲಿ ನೆಮ್ಮದಿ ಕಳೆದುಕೊಳ್ಳುತ್ತಾರೆ ಎಂದು ಅಧ್ಯಯನ ತಂಡ ಸಾಬೀತು ಪಡಿಸಿದೆ.

ಆದಾಗ್ಯೂ,  ಸರ್ಕಾರ ಮತ್ತು ಸಂಘ ಸಂಸ್ಥೆಗಳು ತಮ್ಮ  ನೌಕರರಿಗೆ ಕೆಲಸದ ಸಮಯದಲ್ಲಿ ಫ್ಲೆಕ್ಸಿಬಿಲಿಟಿ ಅನುವು ಮಾಡಿದರೆ ನೌಕರರಿಗೆ ನೆಮ್ಮದಿ ಸಿಗುತ್ತದೆ ಎಂದು ಅಧ್ಯಯನ ತಂಡ ಹೇಳಿದೆ.

SCROLL FOR NEXT