ಆರೋಗ್ಯ-ಜೀವನಶೈಲಿ

ಮನೆಯಲ್ಲೇ ತಯಾರಿಸಿ ತಂಪು ಪಾನೀಯ

Rashmi Kasaragodu

ಹೊರಗೆ ಉರಿ ಬಿಸಿಲು, ಗಂಟಲು ಒಣಗುತ್ತಿದೆ. ನಾವು ಹೊರಗಡೆ ಕುಡಿಯುವ ನೀರು ಶುದ್ಧವಾಗಿದೆ ಎಂದು ಹೇಳುವಂತೆಯೂ ಇಲ್ಲ. ಹಾಗಂತ ನೀರು ಕುಡಿಯದೇ ಇರಲು ಆಗುತ್ತಾ? ಬಾಯಾರಿಕೆಯಾದಾಗ ಬರೀ ನೀರು ಕುಡಿಯುವ ಬದಲು ಹಣ್ಣಿನ ರಸವನ್ನೂ ಕುಡಿದರೆ ಒಳ್ಳೆಯದು. ಹಣ್ಣಿನ ರಸ ಕುಡಿಯುವ ಬದಲು ಮನಸ್ಸು ತಂಪು ಪಾನೀಯಗಳನ್ನು ಕುಡಿಯಲು ಹಂಬಲಿಸುತ್ತದೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ತಂಪು ಪಾನೀಯಗಳು ಕುಡಿಯಲು ರುಚಿ ಎಂದೆನಿಸಿದರೂ ಅವುಗಳು ದೇಹಕ್ಕೆ ಹಾನಿಕರ. ಹೀಗಿರುವಾಗ ಕೆಲವೊಂದು ತಂಪು ಪಾನೀಯಗಳನ್ನು ಮನೆಯಲ್ಲೇ ತಯಾರಿಸಬಹುದು. ಪಾನೀಯಗಳನ್ನು ಮನೆಯಲ್ಲೇ ತಯಾರಿಸುವ ಮೂಲಕ ನೀರಿನಿಂದ ಹರಡುವ ರೋಗಗಳನ್ನೂ ತಡೆಗಟ್ಟಬಹುದು, ಹಣ ಕೂಡಾ ಉಳಿಸಬಹುದು.

ಕಲ್ಲಂಗಡಿ ಹಣ್ಣು: ಬೇಸಿಗೆ ಕಾಲದಲ್ಲಿ ಸುಲಭವಾಗಿ ಇದು ಸುಲಭವಾಗಿ ಸಿಗುತ್ತದೆ. ಕಲ್ಲಂಗಡಿ ಹಣ್ಣಿನ ಸೇವನೆ ದೇಹಕ್ಕೆ ತಂಪು. ಕಲ್ಲಂಗಡಿ ಹಣ್ಣಿನಲ್ಲಿ ಕಬ್ಬಿಣದ ಅಂಶ ಯಥೇಚ್ಛವಾಗಿ ಇರುವುದರಿಂದ ಬಿಸಿಲಿನ ಬೇಗೆಗೆ ನಷ್ಟವಾದ ದೇಹದಲ್ಲಿನ ನೀರಿನಂಶವನ್ನು ತುಂಬಲು ಇದು ಸಹಕಾರಿ.

ಮಜ್ಜಿಗೆ: ಮನೆಯಲ್ಲಿ ಸುಲಭವಾಗಿ ತಯಾರಿಸಬಲ್ಲ ಪಾನೀಯ ಇದು. ಗಟ್ಟಿ ಮೊಸರು, ತಂಪಾದ ನೀರು, ಹಸಿ ಮೆಣಸು, ಶುಂಠಿ, ಕರಿಬೇವು, ಉಪ್ಪು ಇಷ್ಟಿದ್ದರೆ ಸಾಕು ಮಸಾಲಾ ಮಜ್ಜಿಗೆಯನ್ನು ಮನೆಯಲ್ಲಿಯೇ ತಯಾರಿಸಬಹುದು. ಇದು ಬಾಯಾರಿಕೆಯನ್ನು ನೀಗಿಸುವುದರ ಜತೆಗೆ ದೇಹದ ಸುಸ್ತು ಕೂಡಾ ನಿವಾರಿಸುತ್ತದೆ.

ಎಳನೀರು: ಶುದ್ಧವಾದ ನೀರೆಂದರೆ ಅದು ಎಳನೀರು. ಗ್ಲುಕೋಸ್, ಪ್ರೊಟೀನ್ ಗಳಿಂದ ಕೂಡಿರುವ ಪ್ರಕೃತ್ತಿದತ್ತವಾದ ಈ ಪಾನೀಯ ಸೇವಿಸಿದರೆ ಸುಸ್ತು, ಉದರಬೇನೆ ಎಲ್ಲದಕ್ಕೂ ಪರಿಹಾರ ಸಿಗುತ್ತದೆ.

ಸೌತೆ ಕಾಯಿ/ಮುಳ್ಳುಸೌತೆ : ಸೌತೆ ಕಾಯಿಯನ್ನು ಸೇವಿಸುವ ಮೂಲಕ ದಾಹ ಶಮನ ಮಾಡಬಹುದು. ಕಣ್ಣು ಸುಸ್ತಾಗಿದ್ದರೆ ಸೌತೆ ಕಾಯಿಯನ್ನು ರೌಂಡ್ ಶೇಪ್‌ನಲ್ಲಿ ತೆಳು ತುಂಡು ಮಾಡಿ ಕಣ್ಣಿಗಿಟ್ಟರೆ ಒಳ್ಳೆಯದು.

SCROLL FOR NEXT