ನೂಡಲ್ಸ್ ಪ್ರಿಯರಿಗೆ ಕಹಿ ಸುದ್ದಿ ನಿಮ್ಮ ಮಕ್ಕಳಿಗೆ ಮ್ಯಾಗಿ ಹೆಚ್ಚು ಪ್ರಿಯವೇ ಮಕ್ಕಳಿಗೆ ಅಚ್ಚು ಮೆಚ್ಚು ಎಂದು ಹೆಚ್ಚಾಗಿ ಮ್ಯಾಗಿ ಮಾಡಿಕೊಡುವ ತಾಯಂದಿರೆ ಸ್ವಲ್ಪ ಎಚ್ಚರ ವಹಿಸಿ, ನಿಮ್ಮ ಮಕ್ಕಳ ನೆಚ್ಚಿನ ಮ್ಯಾಗಿ ತಿನ್ನಲು ಯೋಗ್ಯವಲ್ಲ.
ಹೀಗಂತ ಭಾರತೀಯ ಆಹಾರ ಸಂರಕ್ಷಣ ಮತ್ತು ಗುಣಮಟ್ಟ ಪ್ರಾಧಿಕಾರ ನಡೆಸಿದ ಸಂಶೊಧನೆ ನಡೆಸಿದ ವರದಿಯಲ್ಲಿ ತಿಳಿದು ಬಂದಿದೆ. ಮ್ಯಾಗಿಯಲ್ಲಿ ಮೊನೋಸೋಡಿಯಂ ಗ್ಲುಕೋಮೇಟ್ ರಾಸಯನಿಕ ಹಾಗೂ ಸೀಸದ ಪ್ರಮಾಣ ಹೆಚ್ಚಾಗಿರುವುದರಿಂದ ಮ್ಯಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಉತ್ತರ ಪ್ರದೇಶದಲ್ಲಿ ಮ್ಯಾಗಿ ಮಾರಾಟವನ್ನು ನಿಷೇಧಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಕೆಲವೊಂದು ಪ್ರದೇಶಗಳಲ್ಲಿ ಮ್ಯಾಗಿಯ ಸ್ಯಾಂಪಲ್ ತೆಗೆದುಕೊಂಡು ಕೊಲ್ಕೋತ್ತಾದ ಲ್ಯಾಬೋರೇಟರಿಯಲ್ಲಿ ಪರೀಕ್ಷಿಸಿದಾಗ ಅದರಲ್ಲಿ ಅತಿ ಹೆಚ್ಚಿನ ಪ್ರಮಾಣದ ಸೀಸ ಮತ್ತು ಮೊನೋಸೋಡಿಯಂ ಗ್ಲುಕೋಮೇಟ್ ಇರುವ ಆಘಾತಕಾರಿ ಮಾಹಿತಿಯನ್ನು ಭಾರತೀಯ ಆಹಾರ ಸಂರಕ್ಷಣ ಮತ್ತು ಗುಣಮಟ್ಟ ಪ್ರಾಧಿಕಾರ ಹೊರ ಹಾಕಿದೆ. ಜೊತೆಗೆ ಉತ್ತರ ಪ್ರದೇಶದಲ್ಲಿ ನೆಸ್ಟ್ಲೆ ಕಂಪನಿಯ ಮ್ಯಾಗಿ ನಿಷೇಧಿಸಲು ಆದೇಶಿಸಿ, ಮ್ಯಾಗಿಯ ಪರವಾನಗಿ ರದ್ಧು ಪಡಿಸಲು ಸೂಚಿಸಿದೆ. ದೇಶದ ಇತರ ರಾಜ್ಯಗಳಿಂದಲೂ ಮ್ಯಾಗಿ ಸ್ಯಾಂಪಲ್ ತಂದು ಪರೀಕ್ಷಿಸಿಸುವಂತೆ ತಿಳಿಸಿದೆ
ಮ್ಯಾಗಿ ಎಷ್ಟು ಸೇಫ್?
ಮ್ಯಾಗಿಯ ಟೇಸ್ಟ್ ಬಿ...ಹೆಲ್ತ್ ಬಿ ಅನ್ನೋ ಶ್ಲೋಗನ್ ಹೆಸರಿಗೆ ಮಾತ್ರ. ಅದರಲ್ಲಿ ಟೆಸ್ಟ್ ಸ್ವಲ್ಪ ಮಟ್ಟಿಗಿದೆ, ತಿಂದರೆ ಆರೋಗ್ಯ ಹದಗೆಡುವುದು ಖಂಡಿತ. ಭಾರತೀಯ ಆಹಾರ ಸಂಸ್ಕರಣಾ ಮತ್ತು ಗುಣಮಟ್ಟ ಪ್ರಾಧಿಕಾರ ಮ್ಯಾಗಿಯಲ್ಲಿ 0.01 ಪಿಪಿಎಂ ಸೀಸವನ್ನು ಬಳಲು ಅನುಮತಿ ನೀಡಿದೆ. ಆದರೆ ನೆಸ್ಟ್ಲೆ ಕಂಪನಿ 17 ಪಿಪಿಎಂ ಪ್ರಮಾಣದ ಸೀಸವನ್ನು ಬಳಕೆ ಮಾಡುತ್ತಿದೆ,
ಇದರಿಂದ ಮಕ್ಕಳಿಗೆ ತಲೆ ನೋವು, ಹೊಟ್ಟೆನೋವು, ದೇಹದಲ್ಲಿ ಅಶಕ್ತತೆ ಹೆಚ್ಚಿ ಹಲವು ರೋಗಗಳಿಗೆ ರಹದಾರಿಯಾಗುತ್ತದೆ ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯ.
ಹೀಗಾಗಿ ಮಕ್ಕಳಿಗೆ ಮ್ಯಾಗಿ ಕೊಡುವ ಮುನ್ನ ಕೊಂಚ ಯೋಚಿಸಿ.