ಬೇಸಿಗೆಯಲ್ಲಿ ಎಷ್ಟೇ ಮಳೆ ಸುರಿದರೂ ಶೆಖೆ ಹಾಗೂ ಬಿಸಿಲಿನ ತಾಪ ಮಾತ್ರ ಕಡಿಮೆಯಾಗುವುದಿಲ್ಲ. ಉರಿ ಬಿಸಿಲಿನಿಂದ ಬಳಲಿ ಬೆಂಡಾಗುವುದು...ಹೀಗಾಗಿ ಬೇಸಿಗೆಯಲ್ಲಿ ಆರೋಗ್ಯ ಮತ್ತು ಚರ್ಮದ ರಕ್ಷಣೆಗೆ ಒಂದಷ್ಟು ಗಮನ ಕೊಡುವುವು ಸೂಕ್ತ.
ಬೇಸಿಗೆಯಲ್ಲಿ ಸೂರ್ಯನ ಪ್ರಖರತೆ ಹೆಚ್ಚಿರುತ್ತದೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ. ಹೀಗಾಗಿ ಕೆಲವರು ಉಷ್ಣಾಘಾತಕ್ಕೊಳಗಾಗಿ ಸಾವನ್ನಪ್ಪುವ ಸಾಧ್ಯತೆಗಳು ಇರುತ್ತವೆ. ದೇಹಕ್ಕೆ ಹೆಚ್ಚಿನ ನೀರು ಪೂರೈಸುವುದು ಅಗತ್ಯ. ಪ್ರತಿದಿನ 5 ರಿಂದ 6 ಲೀಟರ್ ನೀರು ಕುಡಿಯಬೇಕು ಎಂಬುದು ಆರೋಗ್ಯ ತಜ್ಞರ ಸಲಹೆ.
ಅತ್ಯಧಿಕ ಬಿಸಿಲು ಹಾಗೂ ಏರುತ್ತಿರುವ ತಾಪಮಾನದಿಂದಾಗಿ ಎಲ್ಲ ವಯಸ್ಸಿನವರಲ್ಲೂ ಅಂದರೆ ಮಕ್ಕಳಿಂದ ಹಿಡಿದು ವಯೋವೃದ್ಧರ ವರೆಗೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಈ ಅತ್ಯಧಿಕ ಬಿಸಿಲಿನ ತಾಪ ಮಾರಕವಾಗಿಯೂ ಪರಿಣಿಸುತ್ತದೆ. ಈ ಬಿಸಿಲಿನ ತಾಪ ಹೆಚ್ಚಾಗಿ ವೃದ್ಧರು, ಕ್ರೀಡಾಪಟುಗಳು ಬಿಸಿಲಿನಲ್ಲಿ ಕೆಲಸ ಮಾಡುವವರ ಜೊತೆಗೆ ಹೃದಯ ಮತ್ತು ಶ್ವಾಸಕೋಶ ಸಂಬಂದ ರೋಗಗಳಿಂದ ಬಳಲುತ್ತಿರುವವರ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುತ್ತದೆ.
- ದೇಹದ ಉಷ್ಣಾಂಶದಲ್ಲಿ ಏರಿಕೆಯಾಗುತ್ತದೆ. ಪದೇ ಪದೇ ತಲೆನೋವು ಕಾಣಿಸಿಕೊಳ್ಳುವುದು, ಆಯಾಸ, ವಾಕರಿಕೆ, ನಿಶಕ್ತತತೆ, ಸ್ನಾಯು ಸೆಳೆತ, ಉಸಿರಾಟದಲ್ಲಿ ಏರುಪೇರಾಗುವುದು, ಪ್ರಜ್ಞೆ ಹೀನರಾಗುತ್ತಾರೆ. ಇಂತಹ ಯಾವುದೇ ಲಕ್ಷಣಗಳು ಮಕ್ಕಳಲ್ಲಿ ಅಥವಾ ವಯಸ್ಕರಲ್ಲಿ ಇಲ್ಲವೇ ವಯಸ್ಸಾದವರಲ್ಲಿ ಕಂಡು ಬಂದರೇ ಶೀಘ್ರವೇ ಅವರಿಗೆ ಚಿಕಿತ್ಸೆ ಕೊಡಿಸುವುದು ಸೂಕ್ತ.
- ಬಿಸಿಲಿನ ತಾಪದ ಆಘಾತ ತಡೆದುಕೊಳ್ಳಲು ಹೀಗೆ ಮಾಡಿ
- ಬೇಸಿಗೆಯಲ್ಲಿ ನೀರನ್ನು ಹೆಚ್ಚೆಚ್ಚು ಕುಡಿಯಬೇಕು.
- ತೆಳುವಾದ, ಹಗುರವಾದ, ಸಡಿಲವಾದ ಬಟ್ಟೆ ಧರಿಸಿ.
- ಅನಾನುಕೂಲಾವಾದ ವಾತಾವರಣ ಅಂದರೆ ಅತಿ ಹೆಚ್ಚು ಬಿಸಿಲಿರುವಾಗ ವ್ಯಾಯಾಮ ಮಾಡಬೇಡಿ, ಇದರಿಂದ ಬೆವರು ಹೆಚ್ಚಾಗಿ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾಗುತ್ತದೆ.
- ಕಾಫಿ, ಆಲ್ಕೋಹಾಲ್ ಸೇವನೆ ನಿಯಂತ್ರಿಸಿ, ಅದರ ಬದಲು ಎಳನೀರು, ಹಸಿ ತರಕಾರಿ ಹಾಗೂ ಹಣ್ಣು ಸೇವಿಸಿ, ಆದಷ್ಟು ಸಾತ್ವಿಕ ಆಹಾರ ಸೇವಿಸಿ
- ಮನೆಯಿಂದ ಹೊರ ಬರುವ ಮುನ್ನ ಸನ್ ಸ್ಕ್ರೀನ್ ಲೋಷನ್ ಹಚ್ಚುವುದರಿಂದ ಚರ್ಮ ಕಪ್ಪಾಗುವದನ್ನು ತಡೆಯಬಹುದು.
- ಬಿಸಿಲಿ ನಿಂದ ರಕ್ಷಿಸಿಕೊಳ್ಳಲು ಮೈತುಂಬಾ ಬಟ್ಟೆ ಧರಿಸವುದು ಉತ್ತಮ.
- ಸ್ನಾನಕ್ಕೆ ತುಂಬಾ ಬಿಸಿ ಬಿಸಿ ನೀರಿನ ಬದಲು ಉಗುರು ಬೆಚ್ಚಗಿನ ನೀರನ್ನು ಬಳಸಿ
- ಶಿಲ್ಪ. ಡಿ. ಚಕ್ಕೆರೆ