ಆರೋಗ್ಯ-ಜೀವನಶೈಲಿ

ಅಪಘಾತದಲ್ಲಿ ತಲೆ ಬುರುಡೆ ಕತ್ತರಿಸಿಹೋದರು ಬದುಕುಳಿದ ಬ್ರಿಟಿಶ್ ನಿವಾಸಿ

Guruprasad Narayana

ಲಂಡನ್: ಕಾರ್ ಅಪಘಾತವೊಂದರಲ್ಲಿ ಬ್ರಿಟಿಶ್ ನಾಗರಿಕನೋಬ್ಬನ ತಲೆಬುರುಡೆ ತನ್ನ ಬೆನ್ನುಹುರಿಯಿಂದ ಬೇರ್ಪಡಿಸಿಹೋದರೂ ಬದುಕುಳಿದ ಅಪೂರ್ವ ಘಟನೆ ನಡೆದಿದೆ ಎಂದು ಮಾಧ್ಯಮವೊಂದು ಭಾನುವಾರ ವರದಿ ಮಾಡಿದೆ.

ಭಾರತೀಯ ಮೂಲದ ನರಶಾಸ್ತ್ರಜ್ಞ ವೈದ್ಯ ಅನಂತ್ ಕಾಮತ್ ಅವರು ನಡೆಸಿದ ಈ ಅಪೂರ್ವ ಶಸ್ತ್ರಚಿಕಿತ್ಸೆಯಲ್ಲಿ ಟೋನಿ ಕೊವನ್ ಅವರ ಬುರುಡೆ ಮತ್ತು ಬೆನ್ನುಹುರಿಯನ್ನು ಮರುಜೋಡನೆ ಮಾಡಿದ್ದರಿಂದ ಕೋವನ್ ಗುಣಮುಖರಾಗಿ ಮನೆಗೆ ಹಿಂದಿರುಗಲು ಸಿದ್ಧರಾಗುತ್ತಿದ್ದಾರೆ ಎಂದು ಮಿರರ್ ಆನ್ಲೈನ್ ವರದಿ ಮಾಡಿದೆ.

ನ್ಯೂ ಕ್ಯಾಸಲ್ ನಗರದ ಟೋನಿ ಕೋವನ್ ಕಳೆದ ವರ್ಷ ಸೆಪ್ಟಂಬರ್ ನಲ್ಲಿ ಕಾರಿನಲ್ಲಿ ಚಲಿಸುತ್ತಿದ್ದಾಗ ಸ್ಪೀಡ್ ಬ್ರೇಕರ್ ಗೆ ಕಾರ್ ವೇಗವಾಗಿ ಢಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ನಂತರ ದೂರವಾಣಿ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ತಲೆಬುರುಡೆ ದೇಹದಿಂದ ಹೊರಬಂದಿತ್ತು.

ಕುತ್ತಿಗೆ ತೀವ್ರ ಗಾಯವಾಗಿ ಬೆನ್ನು ಹುರಿ ಸಂಪೂರ್ಣ ಗಾಯಗೊಂಡಿದ್ದ ಕೋವನ್ ಅವರನ್ನು ಆಸ್ಪತ್ರೆಗೆ ತರುವಾಗ ಹೃದಯಬಡಿತವೂ ನಿಂತಿತ್ತು ಎಂದು ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ.

ಬುರುಡೆ ಬೆನ್ನುಹುರಿಯಿಂದ ಕಳಚಿ ಹೊರಬಂದಿದ್ದರು ಮೆದುಳಿಗೆ ಯಾವುದೇ ಗಾಯವಾಗಿಲ್ಲವಾದರಿಂದ ಕಾಮತ್ ಅವರ ಅಭೂತಪೂರ್ವ ಶಸ್ತ್ರಚಿಕಿತ್ಸೆಯಿಂದ ಬದುಕುಳಿದಿದ್ದಾರೆ ಎನ್ನಲಾಗಿದೆ.

SCROLL FOR NEXT