ಸಾಂದರ್ಭಿಕ ಚಿತ್ರ 
ಆರೋಗ್ಯ-ಜೀವನಶೈಲಿ

ಥ್ರೀ ಫೋರ್ಥ್‌ನಲ್ಲಿರೋ ಸುಖ ಗೊತ್ತೇ ಇರಲಿಲ್ಲ!

ಮುಕ್ಕಾಲು ಪ್ಯಾಂಟ್ ಅಂದರೆ ಮಂಡಿಗಿಂತ ಕೊಂಚ ಉದ್ದವಿರುವ ಪ್ಯಾಂಟ್ ಈಗ ಯಂಗ್ ಜನರೇಷನ್‌ನ ಹಿಟ್ ಲಿಸ್ಟ್‌ನಲ್ಲಿದೆ. ಈ ತರಹದ ಪ್ಯಾಂಟ್‌ಗಳಿಗೆ 3/4 ಪ್ಯಾಂಟ್ ಎಂತಲೂ...

ಮುಕ್ಕಾಲು ಪ್ಯಾಂಟ್ ಅಂದರೆ ಮಂಡಿಗಿಂತ ಕೊಂಚ ಉದ್ದವಿರುವ ಪ್ಯಾಂಟ್ ಈಗ ಯಂಗ್ ಜನರೇಷನ್‌ನ ಹಿಟ್ ಲಿಸ್ಟ್‌ನಲ್ಲಿದೆ. ಈ ತರಹದ ಪ್ಯಾಂಟ್‌ಗಳಿಗೆ 3/4 ಪ್ಯಾಂಟ್ ಎಂತಲೂ ಕರೆಯಲಾಗುತ್ತದೆ. ಮುಕ್ಕಾಲು ಪ್ಯಾಂಟ್ ಧರಿಸುವುದರಿಂದ ಯುವತಿಯರಿಗೆ ಒಂದು ಫ್ಯಾಷನೇಬಲ್ ಲುಕ್ ಬರುವುದಂತೂ ಗ್ಯಾರಂಟಿ. ಇನ್ನು ಬರೀ ಯುವತಿಯರು ಮಾತ್ರವಲ್ಲ, ಯುವಕರು, ಗೃಹಿಣಿಯರೂ ಕೂಡ ಈ ತರಹದ ಮುಕ್ಕಾಲು ಪ್ಯಾಂಟ್‌ಗಳಿಗೆ ಮಾರುಹೋಗಿದ್ದಾರೆ.

ಇನ್ನು ಷಾಪಿಂಗ್, ಪಿಕ್‌ನಿಕ್ ಅಥವಾ ಔಟಿಂಗ್ ಹೋಗುವಾಗ ಈ ಮುಕ್ಕಾಲು ಪ್ಯಾಂಟ್ ಧರಿಸುವುದು ಸರ್ವೇ ಸಾಮಾನ್ಯವಾಗಿದೆ.

ವೆರೈಟಿ ಮುಕ್ಕಾಲು (3/4) ಪ್ಯಾಂಟ್‌ಗಳು
ಕಾರ್ಗೋ ಪ್ಯಾಂಟ್ಸ್, ಜೀನ್ಸ್, ಕ್ಯಾಪ್ರಿಸ್, ಬ್ಲೋಟೆಡ್ ಕ್ಯಾಪ್ರಿಸ್, ಟ್ರೌಸರ್ ಪ್ಯಾಂಟ್, ಜಂಪ್ ಸೂಟ್ ಹೀಗೆ ನಾನಾ ಪ್ರಕಾರದ ಮುಕ್ಕಾಲು ಪ್ಯಾಂಟ್‌ಗಳು ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಕಾರ್ಗೋ ಪ್ಯಾಂಟ್ಸ್  
ಕಾರ್ಗೋ ಮುಕ್ಕಾಲು ಪ್ಯಾಂಟ್‌ಗಳು ನೋಡಲು ಆಕರ್ಷಕವಾಗಿರುವುದರ ಜೊತೆಗೆ ಧರಿಸಲೂ ಕೂಡ ಆರಾಮದಾಯಕವಾಗಿರುತ್ತವೆ. ಈ ಕಾರ್ಗೋ ಪ್ಯಾಂಟ್‌ಗಳಿಗೆ ಬಹಳಷ್ಟು ಜೇಬುಗಳಿರುತ್ತವೆ. ಈ ಜೇಬುಗಳಿಂದ ಕೂಡ  ಈ ಪ್ಯಾಂಟ್‌ಗೆ ಒಂದು ಹೊಸ ಲುಕ್ ಇರುತ್ತದೆ. ಈ ಪ್ಯಾಂಟ್ ಧರಿಸುವಾಗ ಇದರ ಜೊತೆಗೆ ಟೀಶರ್ಟ್ ಧರ್ನಿ, ಕಾಲಿಗೆ ಸ್ಪೋರ್ಟ್ ಶೂ ಧರ್ನಿದರೆ ಸ್ಪೋರ್ಟಿ ಲುಕ್ ್ನಗುತ್ತದೆ. ಜೊತೆಗೆ ಧರ್ನಿದವರನ್ನೂ  ಫ್ಯಾಶನೇಬಲ್ ಆಗಿಸುತ್ತದೆ. ಹೆಚ್ಚಾಗಿ ಕಾಲೇಜಿಗೆ ಹೋಗುವ ಯುವಕ, ಯುವತಿಯರು ಈ ತರಹದ ಜೇಬುಗಳಿರುವ ಪ್ಯಾಂಟ್‌ಗಳನ್ನು ಬಳಸುತ್ತಾರೆ ಕಾರಣ ತಮಗೆ ಅಗತ್ಯವಿದ್ದ ಅನೇಕ ವಸ್ತುಗಳನ್ನು ಜೇಬುಗಳಲ್ಲಿ ಸೇರ್ನಿಕೊಳ್ಳಲು ಉಪಯೋಗವಾಗುತ್ತದೆ.

ಜೀನ್ಸ್ ಕ್ಯಾಪ್ರಿಸ್ಸ್   
ಜೀನ್ಸ್ ಪ್ಯಾಂಟ್‌ಗಳು ಇಂದಿನ ಯುವ ಪೀಳಿಗೆಯ ಅತ್ಯಂತ ಮೆಚ್ಚಿನ ದಿರಿಸು. ಇದು ಕಪ್ಪು, ನೀಲಿ, ಕಂದು ಬಣ್ಣ  ಹಾಗೂ ಮ್ನಾದ ಬಣ್ಣಗಳಲ್ಲಿ ದೊರೆಯುತ್ತವೆ. ಇದರಲ್ಲಿಯೇ ಮುಕ್ಕಾಲು ಪ್ಯಾಂಟ್‌ಗಳು ಕೆಳಗೆ ಮಡಚಲಾಗಿರುತ್ತದೆ. ಇನ್ನು ಕೆಲವು ಮುಕ್ಕಾಲು ಪ್ಯಾಂಟ್‌ಗಳಲ್ಲಿ ಮಡಚಿದ ಭಾಗದಲ್ಲಿ ವಿವಿಧ ವಿನ್ಯಾಸದಲ್ಲಿ ಕತ್ತರ್ನಿ ಅದಕ್ಕೊಂದು ಹೊಸ ಲುಕ್ ಬರುವಂತೆ ಮಾಡಿರುತ್ತಾರೆ. ಇದೂ ಕೂಡ ಒಂದು ಫ್ಯಾಷನ್. ಇದರ ಜೊತೆಗೆ ಟೀಶರ್ಟ್ ಧರ್ನಿ, ಚಪ್ಪಲಿ ಅಥವಾ ಶೂ ಏನೇ ಧರ್ನಿದರೂ ತುಂಬಾ ಆಕರ್ಷಕವಾಗಿ ಕಾಣುತ್ತದೆ.

ಬ್ಲೋಟೆಡ್ ಕ್ಯಾಪ್ರಿ ಪ್ಯಾಂಟ್ಸ್
ಬ್ಲೋಟೆಡ್ ಕ್ಯಾಪ್ರಿ ಪ್ಯಾಂಟ್‌ಗಳನ್ನು ಜೋಧಪುರಿ ಶೈಲಿಯಲ್ಲಿ ಹೊಲಿಯಲಾಗಿರುತ್ತದೆ. ಇಂತಹ ಪ್ಯಾಂಟ್‌ಗಳಲ್ಲಿ ಬಟನ್ ಬದಲಾಗಿ ದಾರವಿದ್ದು ನಮ್ಮ ದೇಹದ ಅಳತೆಗೆ ತಕ್ಕಂತೆ ಬಿಗಿ ಅಥವಾ ಸಡಿಲವಾಗಿ ಮಾಡಿಕೊಳ್ಳಬಹುದು.

ಟ್ರೌಸರ್ ಪ್ಯಾಂಟ್
ಇದೊಂದು ಅತ್ಯಂತ ಆಧುನಿಕ ಶೈಲಿಯ ಪ್ಯಾಂಟ್ ಆಗಿದ್ದು, ಐಟಿ, ಬಿಟಿ ಉದ್ಯೋಗಸ್ಥರಿಗೆ ಹೇಳಿ ಮಾಡ್ನಿದಂತಿರುವ ಈ ಪ್ಯಾಂಟ್‌ಗಳನ್ನು ಆಫ್ನೀಗೆ ಹೋಗುವಾಗ ಧರಿಸಬಹುದು. ಇದು ಅವರಿಗೆ ಒಂದು ಫ್ಯಾಷನೇಬಲ್ ಲುಕ್ ನೀಡುವುದಂತೂ ಗ್ಯಾರಂಟಿ.

ಜಂಪ್ ಸೂಟ್
ಕಾಟನ್, ಜೀನ್ಸ್ ಮುಂತಾದ ಬಟ್ಟೆಗಳಲ್ಲಿ ತಯಾರಿಸಲಾದ ಜಂಪ್ ಸೂಟ್‌ಗಳು ಯಾವಾಗ ಬೇಕಾದರೂ ಧರಿಸಬಹುದು. ಇವನ್ನು ಹೆಚ್ಚಾಗಿ  ಟೂರ್‌ಗೆ ಹೋಗುವಾಗ ಅಥವಾ ಟ್ರೆಕ್ಕಿಂಗ್‌ಗೆ ಹೋಗುವಾಗ ಧರಿಸುವುದು ಉತ್ತಮ.ಟಿ

ಆಶಾ ಎಸ್. ಕುಲಕರ್ಣಿ
kulkarni.asha3@gmail.com

(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/
ಗೆ ಭೇಟಿನೀಡಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT