ಪಿಂಕ್ ರಿಬ್ಬನ್ 
ಆರೋಗ್ಯ-ಜೀವನಶೈಲಿ

ಹೃದ್ರೋಗ ಬಿಟ್ಟರೆ ಭಾರತೀಯರು ಹೆಚ್ಚು ಬಲಿಯಾಗುವ ರೋಗ ಕ್ಯಾನ್ಸರ್‌!

ಭಾರತದಲ್ಲಿ ಅತಿ ಹೆಚ್ಚು ಮಂದಿಯನ್ನು ಬಲಿ ಪಡೆಯುತ್ತಿರುವ ರೋಗಗಳಲ್ಲಿ ಕ್ಯಾನ್ಸರ್ ಗೆ ಎರಡನೇ ಸ್ಥಾನ!

ನವದೆಹಲಿ: ಭಾರತದಲ್ಲಿ ಅತಿ ಹೆಚ್ಚು ಮಂದಿಯನ್ನು ಬಲಿ ಪಡೆಯುತ್ತಿರುವ ರೋಗಗಳಲ್ಲಿ ಕ್ಯಾನ್ಸರ್ ಗೆ ಎರಡನೇ ಸ್ಥಾನ!. ಮೊದಲನೇ ಸ್ಥಾನ ಹೃದ್ರೋಗ, ನಂತರದ ಸ್ಥಾನದಲ್ಲಿ ಕ್ಯಾನ್ಸರ್‌ ಇದೆ ಎಂದು ಅಂತಾರಾಷ್ಟ್ರೀಯ ಅಧ್ಯಯನವೊಂದು ತಿಳಿಸಿದೆ. ಕ್ಯಾನ್ಸರ್ ನಲ್ಲಿ ಜಠರ, ಪಿತ್ತಜನಕಾಂಗ, ಅನ್ನನಾಳದ ಕ್ಯಾನ್ಸರ್‌ ಅತಿ ಹೆಚ್ಚು ಭಾರತೀಯರನ್ನು ಕೊಲ್ಲುತ್ತಿದೆ. ಕೇವಲ ಎರಡು ದಶಕಗಳ ಅಂತರದಲ್ಲಿ  ಸ್ತನ ಕ್ಯಾನ್ಸರ್‌ ಪ್ರಮಾಣವು ಭಾರತದಲ್ಲಿ ಮೂರು ಪಟ್ಟು ಹೆಚ್ಚಾಗಿದೆ ಎಂದು ಜಾಮಾ ಆಂಕಾಲಜಿ ಎಂಬ ವೈದ್ಯ ಜರ್ನಲ್‌ನಲ್ಲಿ ಪ್ರಕಟವಾಗಿರುವ ಕ್ಯಾನ್ಸರ್‌ ವರದಿಯೊಂದು ಉಲ್ಲೇಖಿಸಿದೆ.

1990ರ ದಶಕದಲ್ಲಿ 6.24 ಲಕ್ಷ ಕ್ಯಾನ್ಸರ್‌ ಪ್ರಕರಣಗಳು ಪತ್ತೆಯಾಗಿ 4.26 ಲಕ್ಷ ಮಂದಿ ಸಾವನ್ನಪ್ಪಿದ್ದರು. 2013ರ ಹೊತ್ತಿಗೆ ಈ ಸಂಖ್ಯೆಯಲ್ಲಿ ಬಾರೀ ಏರಿಕೆ ಕಂಡುಬಂದಿದ್ದು 11.7 ಲಕ್ಷ ಮಂದಿಯಲ್ಲಿ ಕ್ಯಾನ್ಸರ್‌ ಕಾಣಿಸಿಕೊಂಡಿದೆ. ಕ್ಯಾನ್ಸರ್ ಗೆ 6.75 ಲಕ್ಷ ಮಂದಿ ಪ್ರಾಣ ತೆರುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಕ್ಯಾನ್ಸರ್ ಪೀಡಿತರಿಗೆ 3 ಹಾಗೂ 4ನೇ ಹಂತದ ಹೊತ್ತಿಗೆ ಕ್ಯಾನ್ಸರ್‌ ಇದೆ ಎಂಬುದು ರೋಗಿಗೆ ಗೊತ್ತಾಗುತ್ತಿದೆ. ಇದರಿಂದಾಗಿ ರೋಗಿ ಚಿಕಿತ್ಸೆ ಪಡೆಯುವುದು ವಿಳಂಬವಾಗುತ್ತಿದ್ದು, ಇದರಿಂದ ಸಾಯುವ ಸಂಭವ ಹೆಚ್ಚುತ್ತದೆ ಎಂದು ಅಧ್ಯಯನದ ಸಹ ಲೇಖಕರಾಗಿರೂ ಆಗಿರುವ ಭಾರತದ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನ ಮತ್ತು ಅಮೆರಿಕದ ಸಿಯಾಟ್ಲನ ವಾಷಿಂಗ್ಟನ್‌ ವಿವಿಯ ಪ್ರಾಧ್ಯಾಪಕ ಡಾ. ಲಲಿತ್‌ ದಂಡೋನಾ ತಿಳಿಸಿದ್ದಾರೆ.

ಅದೇ ವೇಳೆ ಭಾರತದಲ್ಲಿ ಬಾಯಿ ಕ್ಯಾನ್ಸರ್‌ ರೋಗಿಗಳ ಪ್ರಮಾಣ ಹೆಚ್ಚಿದೆ. 1990ರಲ್ಲಿ ಕೇವಲ 34 ಸಾವಿರ ಮಂದಿಯಷ್ಟಿದ್ದ  ರೋಗಿಗಳ ಸಂಖ್ಯೆ ಈಗ 84,700ಕ್ಕೆ ಏರಿಕೆ ಕಂಡಿದೆ. ಇದೇ ಅವಧಿಯಲ್ಲಿ ಸ್ತನ ಕ್ಯಾನ್ಸರ್‌ ಪ್ರಮಾಣ 56,786 ಪ್ರಕರಣಗಳಿಂದ 1,51,304 ಪ್ರಕರಣಗಳಿಗೆ ಹೆಚ್ಚಾಗಿದೆ.

188 ದೇಶಗಳಲ್ಲಿ 28 ಕ್ಯಾನ್ಸರ್‌ ಸಂಘಟನೆಗಳು ನಡೆಸಿರುವ ವಿಶ್ಲೇಷಣೆ ಆಧರಿಸಿ ಸಿದ್ಧಪಡಿಸಿರುವ ಈ ವರದಿ ಪ್ರಕಾರ, ವಿಶ್ವಾದ್ಯಂತ 2013ನೇ ಸಾಲಿನಲ್ಲಿ 1.5 ಕೋಟಿ ಕ್ಯಾನ್ಸರ್‌ ರೋಗಿಗಳಿದ್ದಾರೆ. 82 ಲಕ್ಷ ಮಂದಿ ಮಾರಕ ಕ್ಯಾನ್ಸರ್ ನಿಂದಾಗಿ ಸಾವನ್ನಪ್ಪುತ್ತಿದ್ದಾರೆ ಎಂದು ವರದಿಯಲ್ಲಿ  ತಿಳಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT