ಆರೋಗ್ಯ-ಜೀವನಶೈಲಿ

ಅಮೆರಿಕಾದ ವಯಸ್ಕರು, ಯುವಕರಲ್ಲಿ ಬೊಜ್ಜು ಪ್ರಮಾಣ ಏರಿಕೆ: ಅಧ್ಯಯನ ವರದಿ

Srinivas Rao BV

ವಾಷಿಂಗ್ ಟನ್: 2011 ರಿಂದ 2014  ವರೆಗೆ ಅಮೆರಿಕಾದಲ್ಲಿರುವ ಮೂರನೇ ಒಂದು ಭಾಗದ ವಯಸ್ಕರರು ಹಾಗೂ ಶೇ.17 ರಷ್ಟು ಯುವಕರಲ್ಲಿ ಬೊಜ್ಜು ಪ್ರಮಾಣ ಹೆಚ್ಚಾಗಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
ಯುಎಸ್ ನ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದಿಂದ ಸಮೀಕ್ಷೆ ನಡೆದಿದೆ. ಅಮೆರಿಕಾದ ಯುವ ಜನತೆಯಲ್ಲಿ ಹೆಚ್ಚುತ್ತಿರುವ ಬೊಜ್ಜನ್ನು ಕಡಿಮೆ ಮಾಡುವುದಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತಿದೆಯಾದರೂ, ತೂಕ ಹೆಚ್ಚುವಿಕೆ ಏರಿಕೆಯಾಗುತ್ತಲೇ ಇದೆ ಎಂದು ಸಮೀಕ್ಷೆ ತಿಳಿಸಿದೆ. ತೂಕ ಇಳಿಕೆ ಮಾಡಿಕೊಳ್ಳುವುದನ್ನು ಉತ್ತೇಜಿಸುವುದಕ್ಕಾಗಿ ಇತ್ತೀಚೆಗಷ್ಟೇ ಅಮೆರಿಕಾದ ಪ್ರಥಮ ಮಹಿಳೆ ಮಿಚೆಲ್ ಒಬಾಮ ಲೆಟ್ಸ್ ಮೂವ್ ಅಭಿಯಾನವನ್ನು ಕೈಗೊಂಡಿದ್ದರು. 
ಕಳೆದ 15 ವರ್ಷದ ಹಿಂದೆ ಶೇ.30 .5 ರಷ್ಟಿದ್ದ ಬೊಜ್ಜು ಪ್ರಮಾಣ  2013 -2014 ನೇ ಸಾಲಿನಲ್ಲಿ ಅಮೆರಿಕಾದ ಯುವಜನತೆಯಲ್ಲಿ ಬೊಜ್ಜು ಪ್ರಮಾಣ ಶೇ.38 ಕ್ಕೆ ಏರಿಕೆಯಾಗಿದೆ, ಪುರುಷರಿಗಿಂತ ಮಹಿಳೆಯರೇ ಹೆಚ್ಚು ತೂಕ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಚೀನಾ, ಭಾರತ, ಕೊರಿಯಾ, ಫಿಲಿಫೇನೋ, ವಿಯೆಟ್ನಾಂ, ಜಪಾನ್ ಗಳಿಗೆ ಹೋಲಿಸಿದರೆ ಅಮೆರಿಕಾದಲ್ಲೇ ಹೆಚ್ಚು  ವಯಸ್ಕರರು ಹಾಗೂ ಯುವಕರಲ್ಲಿ ಬೊಜ್ಜು ಪ್ರಮಾಣ ಹೆಚ್ಚುತಿದೆ ಎಂದು ಸಮೀಕ್ಷೆ ವರದಿ ತಿಳಿಸಿದೆ. ಸುಮಾರು 5 ,000 ಜನರನ್ನು ಸಿಡಿಸಿ ನಡೆಸಿದ ಸಮಿಕ್ಷೆಗೊಳಪಡಿಸಲಾಗಿತ್ತು.

SCROLL FOR NEXT