ಟೆಕ್ಸ್ಟ್ ಮೆಸೇಜ್ ಪ್ರೋಗ್ರಾಮ್ (ಸಾಂಕೇತಿಕ ಚಿತ್ರ) 
ಆರೋಗ್ಯ-ಜೀವನಶೈಲಿ

ಅತಿಯಾದ ಮದ್ಯ ಸೇವನೆಗೆ ಕಡಿವಾಣ ಹಾಕಲು ಸಹಕಾರಿ ಟೆಕ್ಸ್ಟ್ ಮೆಸೇಜ್ ಪ್ರೋಗ್ರಾಮ್

ಯುವಕರಲ್ಲಿ ಕಂಡುಬರುವ ಅತಿಯಾದ ಮದ್ಯಸೇವನೆ ಚಟವನ್ನು ಟೆಸ್ಟ್ ಮೆಸೇಜ್ ಕಾರ್ಯಕ್ರಮಗಳಿಂದ ಕಡಿಮೆ ಮಾಡಬಹುದೆಂಬುದನ್ನು ಕಂಡುಕೊಳ್ಳಲಾಗಿದೆ.

ನ್ಯೂಯಾರ್ಕ್: ಯುವಕರಲ್ಲಿ ಕಂಡುಬರುವ ಅತಿಯಾದ ಮದ್ಯಸೇವನೆ ಚಟವನ್ನು ಟೆಕ್ಸ್ಟ್  ಮೆಸೇಜ್ ಕಾರ್ಯಕ್ರಮಗಳಿಂದ ಕಡಿಮೆ ಮಾಡಬಹುದೆಂದು ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯದ ವೈದ್ಯಕೀಯ ವಿಭಾಗದ ಪ್ರಯೋಗದಲ್ಲಿ ಕಂಡುಕೊಳ್ಳಲಾಗಿದೆ.
ಮದ್ಯಸೇವನೆಗೆ ನಿಯಂತ್ರಣ ವಿಧಿಸಿಕೊಳ್ಳುವವರಿಗೆ ಹೋಲಿಸಿದರೆ, ಅತಿಯಾದ ಮದ್ಯ ಸೇವನೆಯನ್ನು ಟೆಸ್ಟ್ ಮೆಸೇಜ್ ಕಾರ್ಯಕ್ರಮಯಿಂದ ಕಡಿಮೆ ಮಾಡಬಹುದೆಂದು ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ. ಟೆಕ್ಸ್ಟ್ ಮೆಸೇಜಿಂಗ್ ಅಭಿಯಾನ ಮುಕ್ತಯಾಗೊಂಡ ಆರು ತಿಂಗಳ ನಂತರವೂ ಇದರ ಪರಿಣಾಮ ಚಾಲ್ತಿಯಲ್ಲಿದೆಯಂತೆ.
ಮೆಸೇಜ್ ಗಳನ್ನು ಅತ್ಯಂತ ಕಡಿಮೆ ದರದಲ್ಲಿ ಕಲಿಸುವುದಕ್ಕೆ ಅವಕಾಶ ನಿಡುವುದರಿಂದ ಅತಿ ಹೆಚ್ಚು ಮದ್ಯ ಸೇವನೆ ತಡೆಗಟ್ಟುವುದು ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ತುರ್ತು ಔಷಧ ವಿಭಾಗದ ಸಹಾಯಕ ಪ್ರಾಧ್ಯಾಪಕ ಬ್ರಿಯಾನ್ ಸಫೋಲೆಟೊ ಅಭಿಪ್ರಾಯಪಟ್ಟಿದ್ದಾರೆ.
ಪಶ್ಚಿಮ ಪೆನ್ಸಿಲ್ವೇನಿಯಾದ ನಗರ ತುರ್ತು ವಿಭಾಗಗಳಿಂದ 18 -25 ವರ್ಷದ ವರೆಗಿನ 765 ಜನರನ್ನು ಸಮೀಕ್ಷೆಗೊಳಪಡಿಸಲಾಗಿತ್ತು. ನಿಯಂತ್ರಣ ವಿಧಿಸಿಕೊಳ್ಳುವ ಗುಂಪಿಗೆ ಗುಣಮಟ್ಟದ ಸುರಕ್ಷೆ ನೀಡಲಾಗಿತ್ತು. ಆದರೆ ಟೆಕ್ಸ್ಟ್ ಮೆಸೇಜ್ ಪಡೆಯುವ ಅವಕಾಶ ನೀಡಲಾಗಿರಲಿಲ್ಲ. ಇನ್ನು ಸ್ವಯಂ ನಿಗಾ ವಹಿಸಿಕೊಳ್ಳುವ ಗುಂಪು ಪ್ರತಿ ಭಾನುವಾರದಂದು ಮದ್ಯ ಸೇವನೆ ಪ್ರಮಾಣದ ಬಗ್ಗೆ ಮೆಸೇಜ್ ಗಳನ್ನು ಪಡೆಯುತ್ತಿತ್ತು ಆದರೆ ಪ್ರತಿಕ್ರಿಯೆ ಪಡೆಯುತ್ತಿರಲಿಲ್ಲ.
ಮೂರನೇ ಗುಂಪಿಗೆ ವಾರಾಂತ್ಯದಲ್ಲಿ ಮದ್ಯ ಸೇವನೆ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ಹಾಗೂ ಮದ್ಯ ಸೇವನೆಯನ್ನು ಸೀಮಿತಗೊಳಿಸುವ ಬದ್ಧತೆ ವಿಚಾರಕ್ಕೆ ಸಂಬಂಧಿಸಿದಂತೆ ಮೆಸೇಜ್ ಕಳಿಸಲಾಗುತ್ತಿತ್ತು. ಸಂಪೂರ್ಣವಾಗಿ ಟೆಸ್ಟ್ ಮೆಸೇಜ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರ ಮದ್ಯ ಸೇವನೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿತ್ತು. ಹಾಗೂ ಕಾರ್ಯಕ್ರಮ ಮುಕ್ತಾಯಗೊಂಡ ಆರು ತಿಂಗಳ ನಂತರವೂ ಸಹ ಇದೇ ರೀತಿಯ ಬದ್ಧತೆ ಮುಂದುವರೆದಿದೆ ಎಂದು ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT