ಆರೋಗ್ಯ-ಜೀವನಶೈಲಿ

ಕಹಿ ರುಚಿಯ ಆದ್ಯತೆ ವಿಕ್ಷಿಪ್ತ ಮನಸ್ಥಿತಿಯನ್ನು ಸೂಚಿಸುತ್ತದೆ: ಅಧ್ಯಯನ ವರದಿ

Srinivas Rao BV

ಲಂಡನ್: ಕಹಿ ರುಚಿಯನ್ನು ಹೊಂದಿರುವ ಆಹಾರ-ಪಾನಿಯಗಳನ್ನು ಇಷ್ಟಪಡುವುದು ವಿಕ್ಷಿಪ್ತ ಮನಸ್ಥಿತಿಯನ್ನು ಸೂಚಿಸುತ್ತದೆಯಂತೆ.   
ಬ್ಲ್ಯಾಕ್ ಕಾಫಿ ಸೇರಿದಂತೆ ಕಹಿ ರುಚಿಯ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸುವುದು ಆ ವ್ಯಕ್ತಿಯಲ್ಲಿರುವ ನಾರ್ಸಿಸಿಸಮ್, ಕುಟಿಲ ನೀತಿಯನ್ನು ಸೂಚಿಸುತ್ತದೆ. ಕಹಿ ರುಚಿಯೆಡೆಗಿನ ಆದ್ಯತೆಗೂ ಸಮಾಜವಿರೋಧಿ ವ್ಯಕ್ತಿತ್ವದ ಲಕ್ಷಣಗಳಿಗೂ ಇರುವ ಸಂಬಂಧದ ಬಗ್ಗೆ ಆಸ್ಟ್ರೇಲಿಯಾದ ಇನ್ಸ್ ಬ್ರೂಕ್ ವಿಶ್ವವಿದ್ಯಾನಿಲಯದ ಮನಶಾಸ್ತ್ರಜ್ಞರಾದ ಕ್ರಿಸ್ಟಿನಾ ಸ್ಯಾರಿಯೋಗ್ಲೋ ಹಾಗೂ ಅವರ ಸಹೋದ್ಯೋಗಿ ಟೋಬಿಯಾಸ್ ಗ್ರಿತೆಮೆಯೇರ್ 35 ವರ್ಷ ವಯಸ್ಸಿನ 1 ,000 ಜನರನ್ನು ಸಂದರ್ಶನ ನಡೆಸಿ ಎರಡು ಸಂಶೋಧನೆಗಳನ್ನು ನಡೆಸಿದ್ದಾರೆ.
ಸಮೀಕ್ಷೆಯಲ್ಲಿ ಭಾಗವಹಿದವರಿಗೆ ಸಿಹಿ ಉಪ್ಪು, ಹುಳಿ ಮತ್ತು ಕಹಿ ರುಚಿ ಇರುವ ಆಹಾರ ಪದಾರ್ಥಗಳ ಪೈಕಿ ಅತಿ ಹೆಚ್ಚು ಇಷ್ಟವಾಗುವ ಹಾಗೂ ಇಷ್ಟವಾಗದೇ ಇರುವ ಆಹಾರ ಪದಾರ್ಥಗಳಿಗೆ ರೇಟಿಂಗ್ ನೀಡಲು ಹೇಳಲಾಗಿತ್ತು.   ಎರಡನೇ ಗುಂಪಿಗೆ ಮತ್ತೊಬ್ಬರ ಮೇಲೆ ದಾಳಿ ನಡೆಸಲು ಹೆಚ್ಚು ಪ್ರಚೋದನೆ ನಿಡುವಂತಹ ಹೇಳಿಕೆಗಳನ್ನು ಪಟ್ಟಿ ಮಾಡುವಂತೆ ಹೇಳಲಾಗಿತ್ತು. ಇದರೊಂದಿಗೆ ತಮಗೆ ಹೆಚ್ಚು ಇಷ್ಟವಾಗುವ ಆಹಾರಗಳನ್ನು ಪಟ್ಟಿ ಮಾಡಲು ತಿಳಿಸಲಾಗಿತ್ತು. ಕಹಿ ಪದಾರ್ಥವನ್ನು ಹೆಚ್ಚು ಇಷ್ಟಪಡುವವರು ಅತಿ ಹೆಚ್ಚು  ವಿಕ್ಷಿಪ್ತ ಮನಸ್ಥಿತಿಯನ್ನು ಹೊಂದಿದ್ದನ್ನು ಸಂಶೋಧಕರು ಗುರುತಿಸಿದ್ದಾರೆ. ಅಪೆಟೈಟ್ ಜರ್ನಲ್ ನಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿದೆ.

SCROLL FOR NEXT