ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾರಕ ಡೆಂಗ್ಯೂಗೆ ಹಲವು ಜೀವಗಳು ಬಲಿಯಾಗುತ್ತಲೇ ಇವೆ. ಕಳೆದ ಐದು ವರ್ಷಗಳಲ್ಲಿಯೇ ಮೊದಲ ಬಾರಿಗೆ ಡೆಂಗ್ಯೂ ಸೋಂಕಿನಿಂದ ದೆಹಲಿ ಜನತೆ ಬಸವಳಿದಿದ್ದಾರೆ.
ಸುಮಾರು 2000 ಡೆಂಗ್ಯೂ ಕೇಸುಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಡೆಂಗ್ಯೂ ಬಂದರೆ ಮನೆಯಲ್ಲೇ ಹೇಗೆ ಚಿಕಿತ್ಸೆ ಪಡೆಯಬಹುದು ಎಂಬುದರ ಮಾಹಿತಿ ಇಲ್ಲಿದೆ.
ಡೆಂಗ್ಯೂ ಜ್ವರಕ್ಕೆ ಇದುವರೆಗೂ ಒಂದು ನಿರ್ಧಿಷ್ಟ ಔಷಧಿ ಕಡು ಹಿಡಿಯಲಾಗಿಲ್ಲ. ಡೆಂಗ್ಯೂ ನಿಯಂತ್ರಣಕ್ಕೆ ಜನ ಪರಿಹಾರ ಹುಡುಕುತ್ತಿದ್ದಾರೆ. ಡೆಂಗ್ಯೂ ಜ್ವರದಿಂದ ಬಳಲುತ್ತಿರುವವರು ಪಪ್ಪಾಯ ಹಾಗೂ ಮೇಕೆಯ ಹಾಲನ್ನು ಉಪಯೋಗಿಸುವುದು ತುಂಬಾ ಸಹಾಯಕಾರಿ. ಹೀಗಾಗಿ ಪಪ್ಪಾಯ ಹಾಗೂ ಮೇಕೆ ಹಾಲಿಗೆ ಬೇಡಿಕೆ ಹೆಚ್ಚಾಗಿದೆ.
ಮೇಕೆ ಹಾಲನ್ನು ಒಂದು ವಾರ ಸೇವಿಸಿದರೆ ರಕ್ತದಲ್ಲಿನ ಪ್ಲೇಟ್ಲೆಟ್ ಹೆಚ್ಚುತ್ತದೆ. ಹಾಗೆಯೇ ಪಪ್ಪಾಯ ಎಲೆಕೂಡ ಡೆಂಗ್ಯೂ ನಿಯಂತ್ರಿಸಲು ಪರಿಣಾಮಕಾರಿಯಾಗಿದೆ. ಬೆಂಗಳೂರು ಮೂಲದ ಪ್ರಯೋಗಾಲಯವೊಂದು ಪಪ್ಪಾಯ ಎಲೆ ಬಳಸಿ ಡೆಂಗ್ಯೂಗೆ ಔಷಧಿ ಕಂಡು ಹಿಡಿದಿದೆ. ಇದರಿಂದ ರಕ್ತದ ಪ್ಲೇಟ್ಲೇಟ್ ಸಂಖ್ಯೆ ಹೆಚ್ಚಲಿದೆ.
ಪಪ್ಪಾಯ ಎಲೆಗಳ ರಸದ ಜೊತೆಗೆ ಬೇವಿನ ಎಲೆ ಹಾಗೂ ಕೊತ್ತಂಬರಿ ಸೊಪ್ಪಿನ ಎಲೆಗಳ ರಸ ಸೇವಿಸುವುದರಿಂದಲೂ ಡೆಂಗ್ಯೂ ವನ್ನು ನಿಯಂತ್ರಕ್ಕೆ ತರಬಹುದು. ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸೇವಿಸುವುದು ಡೆಂಗ್ಯೂ ಜ್ವರಕ್ಕೆ ಪರಿಣಾಮಕಾರಿ,