ಇಂಗಿಗೆ ಆಯುರ್ವೇದದಲ್ಲಿ ಬಹು ಮುಖ್ಯವಾದ ಸ್ಥಾನ. ಅಡುಗೆ ರುಚಿ ಹೆಚ್ಚಿಸುವಲ್ಲಿ ಇದಕ್ಕೆ ಎಷ್ಟು ಮಹತ್ವ ಇದೆಯೋ ಅಷ್ಟೇ ಮಹತ್ವವುಳ್ಳ ಔಷಧಿಯ ಗುಣಗಳು ಇದರಲ್ಲಿದೆ.
ಇಂಗು ತಿಂದ್ರೆ ಏನೇನು ಉಪಯೋಗ?
ಋತು ಸ್ರಾವದ ಸಮಸ್ಯೆಗಳಾದಾಗ ನೋವು, ಸೆಳೆತ, ಅನಿರ್ದಿಷ್ಟಾವಧಿಯ ಸ್ರಾವ ಮೊದಲಾದ ತೊಂದರೆಯ ಪರಿಹಾರಕ್ಕೆ ಇಂಗು ರಾಮಬಾಣ. ಋತುಸ್ರಾವದ ಹಿಂದಿನ ದಿನ ಚಿಟಿಕೆ ಇಂಗಿನೊಂದಿಗೆ ಬಾಳೆಹಣ್ಣಿನ ಜೊತೆ ತಿಂದ್ರೆ ಹೊಟ್ಟೆ ನೋವು ಬರುವುದಿಲ್ಲ.
ಮೊಡವೆ ನಿವಾರಣೆಗೂ ಇಂಗು ಉಪಯೋಗವಾಗುತ್ತೆ. ಇಂಗನ್ನು ಸ್ವಲ್ಪ ನೀರಿನೊಂದಿಗೆ ಕರಗಿಸಿ ಮೊಡವೆ ಇರುವ ಜಾಗಕ್ಕೆ ಲೇಪಿಸುವುದರಿಂದ ಮೊಡವೆ ಕ್ರಮೇಣ ನಿವಾರಣೆಯಾಗುತ್ತೆ.
ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಗೆ ಮಜ್ಜಿಗೆಯಲ್ಲಿ ಇಂಗನ್ನು ಬೆರಸಿ ಕುಡಿಯುವುದು ರೂಢಿಯಲ್ಲಿದೆ. ಒಂದು ಚಿಟಿಕೆ ಇಂಗನ್ನು ಅರ್ಧ ಲೋಟ ಬಿಸಿ ನೀರಿನೊಂದಿಗೆ ಸೇವಿಸಿದರೆ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುತ್ತೆ.
ಶ್ವಾಸನಾಳದ ಸೋಂಕು ಚಿಕಿತ್ಸೆಗಾಗಿ ಇಂಗು ಪ್ರಯೋಜನಕಾರಿ. ಜೇನು, ಶುಂಠಿ, ಇಂಗು ಬೆರಸಿ ಸೇವಿಸಿದರೆ ತೀವ್ರವಾದ ಒಣ ಕೆಮ್ಮು, ನಾಯಿ ಕೆಮ್ಮು, ಅಸ್ತಮಾ ಉಪಶಮನವಾಗುತ್ತೆ.
ಒಂದು ಚಮಚದ ವೀಳ್ಯೆದೆಲೆಯ ರಸದ ಜೊತೆಗೆ ಕಾಲು ಚಮಚ ಈರುಳ್ಳಿ ರಸ, ಎರಡು ಚಮಚ ಜೇನು ತುಪ್ಪದಲ್ಲಿ ಇಂಗು ತೇದು ಮಕ್ಕಳ ನಾಲಿಗೆಗೆ ನೆಕ್ಕಿಸಿದರೆ, ಕೆಮ್ಮು, ಉಬ್ಬರ ಕಡಿಮೆಯಾಗುತ್ತದೆ.
ಹಸಿವಾಗುತ್ತಿಲ್ಲವೆಂದರೆ ಇಂಗು, ಶುಂಠಿ, ಏಲಕ್ಕಿ, ಸೈಂದವ ಉಪ್ಪನ್ನು ಬಿಸಿ ನೀರಿನಲ್ಲಿ ಬೆರಸಿ ಕುಡಿದರೆ ಹಸಿವು ಹೆಚ್ಚಾಗುತ್ತದೆ.
ಉರಿಯೂತ, ಜಂತುಹುಳಗಳು, ವಾಯು ಇತ್ಯಾದಿ ಜೀರ್ಣ ಕ್ರಿಯೆ ಸಮಸ್ಯೆಗಳನ್ನಾ ಪರಿಹರಿಸಲು ಇಂಗು ಸಹಕಾರಿ. ಅರ್ಧ ಲೋಟ ನೀರಿಗೆ ಚಿಟಿಕೆ ಇಂಗು ಹಾಕಿ ಕರಗಿಸಿ ಕುಡಿದರೆ ಅಜೀರ್ಣ ಸಮಸ್ಯೆ ಪರಿಹಾರವಾಗುತ್ತೆ.
ಇಂಗು ಸೇವನೆಯಿಂದ ರಕ್ತ ತೆಳುವಾಗುತ್ತೆ ಹಾಗೂ ರಕ್ತವನ್ನು ಹೆಪ್ಪುಗಟ್ಟದಂತೆ ಮಾಡುತ್ತದೆ. ಬೊಜ್ಜು ಹೆಚ್ಚಾಗದಂತೆ ತಡೆಯುತ್ತದೆ.
ಇದು ನರವನ್ನು ಪ್ರಚೋದಿಸುತ್ತದೆ. ನರ ದೌರ್ಬಲ್ಯ ನಿವಾರಿಸಿ, ಶಕ್ತಿ ನೀಡುತ್ತದೆ.
ತಲೆನೋವಿಗೂ ಇಂಗು ಪರಿಹಾರ. ನೀರಿನಲ್ಲಿ ಕರಗಿಸಿ ಇಂಗನ್ನು ಸೇವಿಸಿದರೆ, ತಲೆನೋವು ಅಥವಾ ಮೈಗ್ರೇನ್ ಸಮಸ್ಯೆ ಇದ್ದಲ್ಲಿ ನಿವಾರಣೆಯಾಗುತ್ತದೆ.
ನಿಂಬೆ ರಸದಲ್ಲಿ ಇಂಗನ್ನು ಬೆರೆಸಿ ಸೇವಿಸಿದರೆ ಹಲ್ಲಿನ ಆರೋಗ್ಯ ಅತ್ಯಂತ ಒಳ್ಳೆಯದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics