ಪರಸ್ಪರ ತಬ್ಬಿಕೊಳ್ಳುವುದರಿಂದ ಖುಷಿ ಸಿಗುತ್ತದಾ? ಖಂಡಿತವಾಗಿಯೂ ಸಿಗುತ್ತದೆ ಅಂತಾರೆ ತಜ್ಞರು. ಆಲಿಂಗನವು ಪ್ರೀತಿಯ ಸಂಕೇತ ಮಾತ್ರವಲ್ಲ ಇದು ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು. ಎಂಟು ನಿಮಿಷಗಳ ಕಾಲ ಪರಸ್ಪರ ಆಲಂಗಿಸಿಕೊಂಡರೆ ಅದರಿಂದ ಆರೋಗ್ಯಕ್ಕೂ ಲಾಭವುಂಟಾಗುತ್ತದೆ. ಎಂಟು ನಿಮಿಷಗಳ ಕಾಲ ಆಲಿಂಗನ ಮಾಡಿದರೆ ಅದರಿಂದ ಆಗುವ ಉಪಯೋಗಗಳು ಏನು?
ಒಂದೇ ಜಾಗದಲ್ಲಿ ಸುಮಾರು ಹೊತ್ತು ಕುಳಿತು ಕೆಲಸ ಮಾಡುವುದರಿಂದ ಸ್ನಾಯುಗಳ ಒತ್ತಡ ಜಾಸ್ತಿಯಾಗುತ್ತದೆ. ಹೀಗೆ ಸ್ನಾಯು ವೇದನೆಯಾದಾಗ ಆಲಿಂಗನ ಮಾಡಿದರೆ ಸ್ನಾಯುಗಳು ರಿಲ್ಯಾಕ್ಸ್ ಆಗುತ್ತವೆ ಮತ್ತು ಒತ್ತಡ ಕಡಿಮೆಯಾಗುತ್ತವೆ.
ಸಂಬಂಧಗಳನ್ನು ಗಟ್ಟಿ ಮಾಡುತ್ತದೆ
ನಮ್ಮ ಆಪ್ತರನ್ನು ಭೇಟಿಯಾದಾಗ ಹಿತವಾಗಿ ಅಪ್ಪಿಕೊಳ್ಳುವುದರಿಂದ ಸಂಬಂಧಗಳು ಗಟ್ಟಿಯಾಗುತ್ತವೆ. ಒಂದು ಆಲಿಂಗನ ನಿಮ್ಮ ಮನಸ್ಸನ್ನು ಶಾಂತವಾಗಿರಿಸುವುದು ಮಾತ್ರ ವಲ್ಲ ಆಕ್ಸಿಟೋಸಿನ್ ಹಾರ್ಮೋನನ್ನು ಉತ್ತೇಜಿಸುತ್ತದೆ.
ರಕ್ತದೊತ್ತಡ ಕಡಿಮೆ ಮಾಡುತ್ತದೆ
ಆಲಿಂಗನ ಮಾಡುವಾಗ ಆಕ್ಸಿಟೋಸಿನ್ ಜತೆಗೆ ಸಂತೋಷ ನೀಡುವ ಹಾರ್ಮೋನುಗಳಾದ ಎನ್‌ಡಾರ್ಫಿನ್ ಕೂಡಾ ಸ್ರವಿಸುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹೃದಯ ಸಂಬಂಧಿ ಕಾಯಿಲೆಯಿರುವವರಿಗೆ ಆತಂಕಗಳು ಜಾಸ್ತಿಯಾಗುವುದುಂಟು. ಹೀಗಿರುವಾಗ ಆಲಿಂಗನ ಮಾಡಿದರೆ ಮನಸ್ಸು ಶಾಂತವಾಗಿ ಆತಂಕ ಕಡಿಮೆಯಾಗುತ್ತದೆ.
ಟೆನ್ಶನ್, ದುಃಖ ಅನುಭವಿಸಿದಾಗಲೆಲ್ಲಾ ನಿಮ್ಮ ಆಪ್ತರನ್ನು ಹಗ್ ಮಾಡಿ. ಇದರಿಂದ ಸಾಂತ್ವನ ಲಭಿಸುತ್ತದೆ.
ಇಬ್ಬರ ನಡುವೆ ವೈಮನಸ್ಸುಗಳುಂಟಾದಾಗ ನಿಮ್ಮ ಮನಸ್ಸುಗಳನ್ನು ನಿಯಂತ್ರಣಕ್ಕೆ ತರಲು ಹಗ್ ಮಾಡಿ. ಇದರಿಂದ ಸಹಾನುಭೂತಿ ಹೆಚ್ಚುತ್ತದೆ.
ಒಬ್ಬ ವ್ಯಕ್ತಿಯನ್ನು ಆಲಿಂಗನ ಮಾಡುತ್ತೇವೆ ಎಂದರೆ ಆ ವ್ಯಕ್ತಿ ನಮಗೆ ಆಪ್ತರಾಗಿರುತ್ತಾರೆ. ಆಲಿಂಗನದಿಂದ ನಮ್ಮ ನಡುವಿನ ಸ್ನೇಹ ಮತ್ತು ವಿಶ್ವಾಸವೂ ಹೆಚ್ಚುತ್ತದೆ.
ಹಗ್ ಮಾಡುವುದರಿಂದ ಮಾನಸಿಕ ಒತ್ತಡಗಳು ದೂರವಾಗುತ್ತದೆ. ಈ ರೀತಿಯ ಒತ್ತಡಗಳು , ದುಃಖಗಳು ಕಡಿಮೆಯಾದಾಗ ನಮಗೆ ವಯಸ್ಸಾಗಿದೆ ಎಂದು ಗೊತ್ತಾಗುವುದಿಲ್ಲ. ದೇಹಕ್ಕೆ ವಯಸ್ಸಾದರೂ ಮನಸ್ಸು ಪ್ರಫುಲ್ಲವಾಗಿದ್ದರೆ ಇನ್ನೇನು ಬೇಕು? ಖುಷಿ ಖುಷಿಯಾಗಿರಬೇಕಾದರೆ ನಿಮ್ಮ ಆಪ್ತರನ್ನು ಹಗ್ ಮಾಡ್ತಾ ಇರಿ...
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos