ಆರೋಗ್ಯ-ಜೀವನಶೈಲಿ

ಅತಿ ಹೆಚ್ಚು ವ್ಯಾಯಾಮ ಮಾಡುವುದು ಹೃದಯಕ್ಕೆ ಹಾನಿಕರ!

Srinivas Rao BV

ಟೋರಂಟೊ: ವ್ಯಾಯಾಮ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳ ಬಗ್ಗೆ ಸಂಶೋಧಕರು ಅಧ್ಯಯನ ನಡೆಸಿದ್ದು ಇತ್ತೀಚಿನ ಅಧ್ಯಯನ ವರದಿ ಪ್ರಕಾರ ಅತಿ ಹೆಚ್ಚು ವ್ಯಾಯಾಮ ಮಾಡುವುದು ಹೃದಯಕ್ಕೆ ಹಾನಿಕರವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಅತಿ ಹೆಚ್ಚು ವ್ಯಾಯಾಮ ಮಾಡುವುದು ಹೃದಯದ ರಚನೆಯಲ್ಲಿ ಶಾಶ್ವತವಾದ ಬದಲಾವಣೆಗೆ ಕಾರಣವಾಗುತ್ತದೆ. ದೀರ್ಘಾವಧಿ ಕ್ರೀಡಾಭ್ಯಾಸ ಮಾಡುವುದರಿಂದಾಗಿ ಉಂಟಾಗುವ ಕ್ಷಿಪ್ರ, ಅನಿಯಮಿತ ಎದೆ ಬಡಿತ ಆರ್ಟಿಯಲ್ ಫಿಬ್ರಿಲೇಶನ್ ಗೆ ಕಾರಣವಾಗಲಿದೆ ಎಂದು ಎಂದು ಅಧ್ಯಯನ ವರದಿ ಎಚ್ಚರಿಸಿದೆ.  ಈ ಅಧ್ಯಯನ ವರದಿ ಕೆನಡಾದ ಕಾರ್ಡಿಯಾಲಜಿ ಜರ್ನಲ್ ನಲ್ಲಿ ಪ್ರಕಟವಾಗಿದೆ.

SCROLL FOR NEXT