ಆರೋಗ್ಯ-ಜೀವನಶೈಲಿ

ನಾವೇಕೆ ಭಾರವಾದ ಹೊದಿಕೆ ಬಳಸಬೇಕು?

Srinivasamurthy VN

ನಾವು ಹೊದ್ದುಕೊಳ್ಳುವ ಬ್ಲಾಂಕೇಟ್‍ಗೂ (ಹೊದಿಕೆ) ನಮ್ಮ ಮನಸ್ಸಿಗೂ ತುಂಬಾ ಲಿಂಕ್ ಇದೆ. ಅದರಲ್ಲೂ ತೂಕದ ಹೊದಿಕೆಗಳನ್ನೇ ಆದಷ್ಟು ಬಳಸಬೇಕು ಎನ್ನುತ್ತಾರೆ ಮನಃ ಶಾಸ್ತ್ರಜ್ಞರು.

ಇದಕ್ಕೆ ಕಾರಣವೂ ಇದೆ. ತೂಕದ ಹೊದಿಕೆ ಮೈಮೇಲಿದ್ದಾಗ ನರವ್ಯೂಹ ರಿಲ್ಯಾಕ್ಸ್ ಅನುಭವ ಪಡೆಯುತ್ತದೆ. ಮಸಾಜ್ ಮಾಡಿದಾಗ ಹೇಗೆ ನರವ್ಯೂಹಕ್ಕೆ ಆರಾಮ ಸುಖ ಸಿಗುತ್ತದೋ, ಅದೇ ಸುಖ  ಭಾರವಾದ  ಬ್ಲಾಂಕೇಟ್ ಹೊದ್ದುಕೊಂಡಾಗಲೂ ಸಿಗುತ್ತದೆ. ಇಂಥ ಅನುಭವದಿಂದ ನಿದ್ರಾಹೀನತೆ ದೂರವಾಗುತ್ತದೆ. ಅಲ್ಲದೆ ತಮ್ಮ ಬಗ್ಗೆ ಕೀಳರಿಮೆ ಇಟ್ಟುಕೊಂಡವರಿಗೆ, ಖಿನ್ನತೆಯಿಂದ  ಬಳುತ್ತಿರುವವರಿಗೂ ಭಾರವಾದ ಬ್ಲಾಂಕೇಟ್ ಪರಿಹಾರವಾಗುತ್ತದೆ ಎನ್ನುತ್ತದೆ ಸೈಕಾಲಜಿ.

ಯಾಕೆ ಗೊತ್ತಾ? ಭಾರವಾದ ಹೊದಿಕೆ ಮೈಮೇಲೆ ಇದ್ದಾಗ ಯಾರೋ ನಮ್ಮನ್ನು ತಬ್ಬಿಕೊಂಡಿದ್ದಾರೆ ಎಂಬ ಫೀಲ್ ಹುಟ್ಟುತ್ತದೆ. ನಾವು ಏಕಾಂಗಿಗಳಲ್ಲ, ಯಾರಿಂದಲೋ ಸಾಂತ್ವನ  ಸಿಗುತ್ತಿದೆಯೆಂಬ ಸಂದೇಶ ಮೆದುಳಿಗೆ ರವಾನೆ ಆಗುತ್ತದಂತೆ.

SCROLL FOR NEXT