ಆರೋಗ್ಯ-ಜೀವನಶೈಲಿ

ಸ್ಥೂಲಕಾಯಕ್ಕೆ ಮಕ್ಕಳ ಮೇಲೆ ತಂದೆ ಬೀರುವ ಪ್ರಭಾವವೇ ಕಾರಣ: ಸಂಶೋಧನಾ ವರದಿ

Srinivas Rao BV

ಟೊರೊಂಟೊ: ಯುವಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಲ್ಲಿ ಪೋಷಕರದ್ದು ಪ್ರಮುಖ ಪಾತ್ರವಿರುತ್ತದೆ. ಆದರೆ ಸ್ಥೂಲಕಾಯದ ಸಮಸ್ಯೆ ಎದುರಾಗದಂತೆ ಎಚ್ಚರವಹಿಸುವಲ್ಲಿ ತಂದೆಯೇ ಪಾತ್ರ ಪ್ರಮುಖವಾದದ್ದು ಎಂಬುದು ಇತ್ತೀಚಿನ ಸಂಶೋಧನಾ ವರದಿ.

ತಂದೆಯೊಂದಿಗಿನ ಸಂಬಂಧವು ಪುರುಷರ ಸ್ಥೂಲಕಾಯ ಸಮಸ್ಯೆ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಹೊಸ ಸಂಶೋಧನಾ ವರದಿಯಿಂದ ತಿಳಿದುಬಂದಿದೆ. ಪುರುಷರ ಸ್ಥೂಲಕಾಯಕ್ಕೆ ಕಾರಣವನ್ನು ತಿಳಿಯಲು ಸಂಶೋಧನೆ ನಡೆಸಿದ ವಿಜ್ಞಾನಿಗಳು, ಆ ವ್ಯಕ್ತಿ ತನ್ನ ತಾಯಿಯೊಂದಿಗೆ ಹೊಂದಿರುವ ಬಾಂಧವ್ಯಕ್ಕಿಂತ ತಂದೆಯೊಂದಿಗೆ ಹೊಂದಿರುವ ಬಾಂಧವ್ಯ ಸ್ಥೂಲಕಾಯದ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂಬ ಅಂಶವನ್ನು ಕಂಡುಕೊಂಡಿದ್ದಾರೆ.

"ತಂದೆಯರು ತಮ್ಮ ಮಕ್ಕಳ ಮೇಲೆ ಬೀರುವ ಪ್ರಭಾವ, ಅವರು ವಯಸ್ಕರಾದ ಮೇಲೆ ಸ್ಥೂಲಕಾಯ ಬೆಳವಣಿ, ಆರೋಗ್ಯದ  ಮೇಲೆ ಹೆಚ್ಚು ಪರಿಣಾಮ ಉಂಟು ಮಾಡಲಿದೆ ಎಂದು ಕೆನಡಾದ ಗ್ವೆಲ್ಫ್ ವಿಶ್ವವಿದ್ಯಾಲಯದ ಪ್ರೊಫೆಸರ್ ಜೆಸ್ ಹೈನೆಸ್ ಹೇಳಿದ್ದಾರೆ.

ಪೋಷಕರ ಕಾಳಜಿ ಉತ್ತಮವಾಗಿದ್ದರೆ ಆ ಮಕ್ಕಳು ವಯಸ್ಕರಾದ ನಂತರ ಸ್ಥೂಲಕಾಯವನ್ನು ಹೊಂದುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಸಂಶೋಧನೆಯಲ್ಲಿ ಸುಮಾರು 14-24 ವರ್ಷ ವಯಸ್ಸಿನ 3,700 ಮಹಿಳೆಯರು ಹಾಗೂ 2,600 ಪುರುಷರನ್ನು ಸಂದರ್ಶಿಸಲಾಗಿತ್ತು.  ಬಿಹೇವಿಯರಲ್ ನ್ಯೂಟ್ರಿಷನ್ ಮತ್ತು ಶಾರೀರಿಕ ಚಟುವಟಿಕೆಗೆ ಸಂಬಂಧಿಸಿದ ಜರ್ನಲ್ ನಲ್ಲಿ ಸಂಶೋಧನಾ ವರದಿ ಪ್ರಕಟವಾಗಿದೆ.

SCROLL FOR NEXT