ಸಾಂಕೇತಿಕ ಚಿತ್ರ 
ಆರೋಗ್ಯ-ಜೀವನಶೈಲಿ

ಸಂಗಾತಿಯ ಟ್ಯಾಟು ಶೋಕಿ ಒಂದೆಡೆ; ಮಾಜಿ ಆದಾಗ ಅದನ್ನು ತೆಗೆಸುವ ಹಿಂಸೆ ಮತ್ತೊಂದೆಡೆ!

ಕಾಲಿವುಡ್ ಸಿನಿಮಾಗಳಿಂದ ಹಿಡಿದು ಟಿವಿ ಧಾರಾವಾಹಿಗಳವರೆಗೆ ಪ್ರೀತಿ ಎಂದರೆ ಸಂಗಾತಿಯ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದು ಮೊದಲಿಗೆ ನೆನಪಾಗುತ್ತದೆ. ಆದರೆ ಚೆನ್ನೈ ನಲ್ಲಿರುವ ವೈದ್ಯರು ಈ ಹಚ್ಚೆ...

ಚೆನ್ನೈ: ಕಾಲಿವುಡ್ ಸಿನಿಮಾಗಳಿಂದ ಹಿಡಿದು ಟಿವಿ ಧಾರಾವಾಹಿಗಳವರೆಗೆ ಪ್ರೀತಿ ಎಂದರೆ ಸಂಗಾತಿಯ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದು ಮೊದಲಿಗೆ ನೆನಪಾಗುತ್ತದೆ. ಆದರೆ ಚೆನ್ನೈ ನಲ್ಲಿರುವ ವೈದ್ಯರು ಈ ಹಚ್ಚೆ ಹಾಕಿಸಿಕೊಳ್ಳುವ ಪ್ರೀತಿಯ ಮತ್ತೊಂದು ಮುಖವನ್ನು ಅನಾವರಣಗೊಳಿಸಿದ್ದಾರೆ.    

ಪ್ರೀತಿಯ ಪ್ರಾರಂಭದಲ್ಲಿ ಸಂಗಾತಿಯ ಹೆಸರನ್ನು ಹಚ್ಚೆ ಹಾಕಿಸಿಕೊಂಡವರಲ್ಲಿ ಕನಿಷ್ಠ 10 ಮಂದಿ ಪ್ರೀತಿ ಮುರಿದುಬಿದ್ದ ನಂತರ ಈ ಹಿಂದೆ ತಮ್ಮ ಸಂಗಾತಿಯ ಹೆಸರುಗಳನ್ನು ಹಾಕಿಸಿಕೊಂಡಿದ್ದ ಹಚ್ಚೆಯನ್ನು ತೆಗೆಸಲು ಆಸ್ಪತ್ರೆಗೆ ಬರುವುದನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆ ವೈದ್ಯರು ಗಮನಿಸಿದ್ದಾರೆ.

ವಿವಾಹಕ್ಕೆ ಇನ್ನು ಕೆಲವೇ ತಿಂಗಳಿರಬೇಕಾದರೆ ಈ ಹಿಂದೆ ತಾವು ಪ್ರೀತಿಸಿದ್ದವರ ಹೆಸರಿನ ಹಚ್ಚೆಯನ್ನು ತೆಗೆಸಿಕೊಳ್ಳುತ್ತಾರೆ. " 6 ವರ್ಷಗಳಿಂದ ಯುವಕನೋರ್ವನನ್ನು ಪ್ರೀತಿಸುತ್ತಿದ್ದ ಯುವತಿಯೋರ್ವಳು ತನ್ನ ಪ್ರಿಯಕರನ ಹೆಸರನ್ನು ತೊಡೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಳು, ಆದರೆ ಅದನ್ನು ತೆಗೆಸಲು ಆಸ್ಪತ್ರೆಗೆ ಬಂದಿದ್ದ ಪ್ರಕರಣ  ಇತ್ತೀಚೆಗಷ್ಟೇ ನಡೆದಿದೆ ಎಂದು ಸ್ಟಾನ್ಲಿ ಮೆಡಿಕಲ್ ಕಾಲೇಜ್ ನ ಕಾಸ್ಮೆಟಾಲಜಿ ವಿಭಾಗದ ಮುಖ್ಯಸ್ಥರಾಗಿರುವ ಡಾ.ಜಿ ಆರ್ ರತ್ನವೇಲ್ ತಿಳಿಸಿದ್ದಾರೆ.

ಆ ಯುವತಿ ಪ್ರೀತಿಸಿದ್ದ ಯುವಕ ಬೇರೆಯವರೊಂದಿಗೆ ವಿವಾಹವಾದ ಕಾರಣ ಆಕೆ ಆತನ ಹೆಸರಿನ ಹಚ್ಚೆಯನ್ನು ದೀರ್ಘಕಾಲದ ಲೇಸರ್ ಚಿಕಿತ್ಸೆ ಮೂಲಕ ತೆಗೆಸಬೇಕಾಯಿತು ಎಂದು ರತ್ನವೇಲ್ ಮಾಹಿತಿ ನೀಡಿದ್ದಾರೆ. ಈ ಹಿಂದೆಲ್ಲಾ ಯುವಕರು ಪೋಷಕರ ಅಥವಾ ಕೆಲಸ ಪಡೆಯುವ ಒತ್ತಡದಿಂದ ಟ್ಯಾಟೂ ಗಳನ್ನು ತೆಗೆಸುವ ನಿದರ್ಶಗಳಿರುತ್ತಿತು. ಆದರೆ ಪ್ರೀತಿಸಿದ್ದವರು ಬೇರೆಯವರನ್ನು ವಿವಾಹವಾಗುವ ಹಿನ್ನೆಲೆಯಲ್ಲಿ ಅವರ ಹೆಸರಿನ ಹಚ್ಚೆಗಳನ್ನು ಅಳಿಸಿಹಾಕುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಟ್ಯಾಟೂ ಸಂಪೂರ್ಣವಾಗಿ  ಅಳಿಸಿ ಹಾಕುವುದಕ್ಕೆ ಕನಿಷ್ಠ 3 ವಾರಗಳು ಬೇಕಾಗುತ್ತದೆ. ಹಚ್ಚೆಗೆ ಬಳಸಲಾಗಿರುವ ಶಾಯಿ ಚರ್ಮದ ಮೇಲ್ಭಾಗದ(ಎಪಿಡರ್ಮಿಸ್) ವರೆಗೆ ಮಾತ್ರ ತಲುಪಿದ್ದರೆ ಟ್ಯಾಟೂ ತೆಗೆಯುವುದು ಸುಲಭ, ಆದರೆ ಇದನ್ನು ದಾಟಿ ಎರಡನೇ ಪದರಕ್ಕೆ ತಲುಪುವಂತೆ ಟ್ಯಾಟೂ ಹಾಕಿಸಿಕೊಂಡರೆ ಟ್ಯಾಟೂ ತೆಗೆಯುವುದಕ್ಕೆ ದೀರ್ಘವಾಧಿ ಚಿಕಿತ್ಸೆ ನೀಡಬೇಕಾಗುತ್ತದೆ ಎನ್ನುತ್ತಾರೆ ವೈದ್ಯರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT