ಆರೋಗ್ಯ-ಜೀವನಶೈಲಿ

ಮಕ್ಕಳಿಗೆ ವಾರಕ್ಕೆ 3 ಬಾರಿ ಕಡಲೆಕಾಯಿ ನೀಡಿ, ಅಲರ್ಜಿ ಮುಕ್ತರನ್ನಾಗಿಸಿ

Srinivasamurthy VN

ಲಂಡನ್: ಪುಟ್ಟಮಕ್ಕಳಿಗೆ ವಾರಕ್ಕೆ 3 ಬಾರಿ ಕಡಲೆಕಾಯಿ ಬೀಜವನ್ನು ತಿನ್ನಿಸುವುದರಿಂದ ಅವರನ್ನು ಅಲರ್ಜಿ ಸಂಬಂಧಿತ ಕಾಯಿಲೆಗಳಿಂದ ಮುಕ್ತರನ್ನಾಗಿಸಬಹುದು ಎಂದು ವೈಜ್ಞಾನಿಕ  ಸಂಶೋಧನೆಯೊಂದು ಹೇಳಿದೆ.

ಲಂಡನ್ ಮೂವದ ಕಿಂಗ್ಸ್ ಕಾಲೇಜಿನ ಸಿಬ್ಬಂದಿಗಳು ಇಂತಹುದೊಂದು ಅಧ್ಯಯನ ಮಾಡಿ ವರದಿ ನೀಡಿದ್ದು, ಮಕ್ಕಳಿಗೆ ಕಡಲೆಕಾಯಿ ನೀಡುವುದರಿಂದ ಅವರನ್ನು ಅಲರ್ಜಿಯಿಂದ  ಮುಕ್ತರನ್ನಾಗಿಡಬಹುದು ಎಂದು ವರದಿಯಲ್ಲಿ ಹೇಳಲಾಗಿದೆ. ನೂರಾರು ಮಕ್ಕಳ ಮೇಲೆ ಈ ಸಂಶೋಧನೆ ನಡೆಸಲಾಗಿದ್ದು, ಹುಟ್ಟಿದ ಮೊದಲ ವರ್ಷದಿಂದ 6ನೇ ವರ್ಷದವರೆಗೂ ಮಕ್ಕಳಿಗೆ  ನಿಯಮಿತವಾಗಿ ಕಡಲೆಕಾಯಿಯನ್ನು ನೀಡುತ್ತಿದ್ದರೆ ಅಂತಹ ಮಕ್ಕಳು ಭವಿಷ್ಯದಲ್ಲಿ ಅಲರ್ಜಿ ಸಂಬಂಧಿತ ಕಾಯಿಲೆಗಳಿಂದ ಮುಕ್ತರಾಗಿರುತ್ತಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕೆಲವರಿಗೆ ಕಡಲೆಕಾಯಿ ಅಲರ್ಜಿಯಾಗುತ್ತದೆ ಎಂಬ ಭಯದಿಂದ ಮಕ್ಕಳಿಗೆ ಅದನ್ನು ನೀಡುವುದೇ ಇಲ್ಲ. ಆದರೆ ಇಂತಹ ಪೋಷಕರಿಗೆ ಎಚ್ಚರಿಕೆ ನೀಡಿರುವ ಸಂಶೋಧಕರು ಅಲರ್ಜಿ ಆಗುತ್ತದೆ  ಎಂದು ಸಣ್ಣ ವಯಸ್ಸಿನಲ್ಲಿ ಕಡಲೆಕಾಯಿ ನೀಡದಿದ್ದರೆ ಅದಕ್ಕಿಂತಲೂ ಹೆಚ್ಚಿನ ಹಾನಿ ಅವರು ಬೆಳೆದ ನಂತರ ಆರೋಗ್ಯದ ಮೇಲಾಗುತ್ತದೆ ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ. ವಿಶ್ವದಲ್ಲಿ  ಹುಟ್ಟಿದ ಪ್ರತಿ 50 ಮಕ್ಕಳಲ್ಲಿ ಒಬ್ಬರಿಗೆ ಕಡಲೆಕಾಯಿ ಅಲರ್ಜಿಯಿಂದ ಬಳಲುತ್ತಿದ್ದು, ಇಂತಹ ಮಕ್ಕಳು ಮೊದಲ ಮೂರು ವರ್ಷ ಕಡಲೆಕಾಯಿಯಿಂದ ದೂರವಿದ್ದು, ಬಳಿಕ ನಿಯಮಿತವಲಾಗಿ  ಸೇವಿಸಿದರೆ ಅಲರ್ಜಿಯಿಂದ ದೂರಾಗಬಹುದು ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.

ಹುಟ್ಟಿದ ಮೊದಲ ವರ್ಷದಿಂದಲೇ ಕಡಲೆಕಾಯಿ ತಿಂದ ಮಕ್ಕಳಿಗಿಂತ ಬಳಿಕ ಕಡಲೆಕಾಯಿ ತಿನ್ನಲು ಆರಂಭಿಸಿದ ಮಕ್ಕಳಲ್ಲಿ ಈ ಅಲರ್ಜಿ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಿವೆ ಎಂದು  ಸಂಶೋಧಕರು ಹೇಳಿದ್ದಾರೆ. ಹುಟ್ಟಿದಾಗಿನಿಂದಲೇ ಕಡಲೇಕಾಯಿ ತಿನ್ನುವ ಮಕ್ಕಳು ಬಳಿಕ 12 ತಿಂಗಳು ಅದನ್ನು ತಿನ್ನದೇ ಇದ್ದರೆ ಉಂಟಾಗುವ ಪರಿಣಾಮಗಳನ್ನು ಅರಿಯುವ ಉದ್ದೇಶದಿಂದ  ಲಂಡನ್ ಕಿಂಗ್ಸ್ ಕಾಲೇಜು ಸಿಬ್ಬಂದಿಗಳು ಈ ಸಂಶೋಧನೆ ಕೈಗೊಂಡಿದ್ದರು. ಸಂಶೋಧನೆಯಿಂದ ತಿಳಿದ ಬಂದ ಉತ್ತರವೆಂದರೆ ಹುಟ್ಟಿದಾಗಿನಿಂದಲೇ ಕಡಲೆಕಾಯಿ ಸೇವಿಸುವ ಮಕ್ಕಳಿಗಿಂತ  ಆ ಬಳಿಕ ಅಂದರೆ ಸುಮಾರು 3 ವರ್ಷದ ಬಳಿಕ ಕಡಲೆಕಾಯಿ ಸೇವಿಸುವ ಮಕ್ಕಳಲ್ಲಿ ಅಲರ್ಜಿ ಸಂಬಂಧಿತ ಸಮಸ್ಯೆಗಳು ಹೆಚ್ಚು ಎಂದು ಸಂಶೋಧನೆಯಿಂದ ತಿಳಿದುಬಂದಿದೆ.

SCROLL FOR NEXT