ಸಾಂದರ್ಭಿಕ ಚಿತ್ರ 
ಆರೋಗ್ಯ-ಜೀವನಶೈಲಿ

ದೇಹ ಹಾಗೂ ಮನಸ್ಸು ಆರೋಗ್ಯವಾಗಿರಲು ಉತ್ತಮ ನಿದ್ದೆ ಅತ್ಯವಶ್ಯಕ.

ನಮ್ಮ ಜೀವಿತಾವಧಿಯ ಮುಕ್ಕಾಲು ಭಾಗ ಸಮಯವನ್ನು ನಾವು ನಿದ್ದೆ ಮಾಡುವುದರಲ್ಲೇ ಕಳೆಯುತ್ತೇವೆ, ನಿದ್ದೆ ಎಂಬುದು ಮನುಷ್ಯನ ದೇಹ ಹಾಗೂ ಮನಸ್ಸಿಗೆ ಅತ್ಯಂತ ...

ನಮ್ಮ ಜೀವಿತಾವಧಿಯ ಮುಕ್ಕಾಲು ಭಾಗ ಸಮಯವನ್ನು  ನಾವು ನಿದ್ದೆ ಮಾಡುವುದರಲ್ಲೇ ಕಳೆಯುತ್ತೇವೆ, ನಿದ್ದೆ ಎಂಬುದು ಮನುಷ್ಯನ ದೇಹ ಹಾಗೂ ಮನಸ್ಸಿಗೆ ಅತ್ಯಂತ ಅವಶ್ಯಕ. ಉತ್ತಮ ನಿದ್ದೆಯಿಂದ ಹೆಚ್ಚಿನ ಲಾಭ ಸಿಗುತ್ತದೆ ಎಂದು ಹಲವು ಸಂಶೋಧನೆಗಳು ತಿಳಿಸಿವೆ,

ಅವಶ್ಯಕತೆಗಿಂತ ಕಡಿಮೆ ನಿದ್ದೆ ಮಾಡುವುದರಿಂದ ಮನುಷ್ಯನಿಗೆ ಖಿನ್ನತೆ, ಹೃದಯ ಸಮಸ್ಯೆ, ಬೊಜ್ಜು ಸೇರಿದಂತೆ ಹಲವು ಸಮಸ್ಯೆಗಳಿಗೆ ದಾರಿಯಾಗುತ್ತದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ತೀರಾ ಕಡಿಮೆ ನಿದ್ದೆ ಮಾಡುವುದು ಮನುಷ್ಯನನ್ನು ಸಾವಿನ ದವಡೆಗೆ ನೂಕುತ್ತದೆ. ಹೃದಯಾಘಾತ ಸಂಭವಿಸುವ ಸಾಧ್ಯತೆ  ಹೆಚ್ಚಿದೆ ಎಂದು ಅಧ್ಯಯನಗಳು ತಿಳಿಸಿವೆ,


ಕಡಿಮೆ ಸಮಯ ನಿದ್ದೆ ಮಾಡುವುದರಿಂದ ಅನಾರೋಗ್ಯ ಹೇಗೆ ಉಂಟಾಗುತ್ತದೆ ಎಂಬುದು ಇಲ್ಲಿಯವರೆಗೂ ರಹಸ್ಯಾವಾಗಿಯೇ ಉಳಿದಿತ್ತು. ಆದರೆ ವಿಜ್ಞಾನ ತಂತ್ರಜ್ಞಾನ ಮುಂದುವರೆದಂತೆ ಸಂಶೋಧನೆಗಳು ನಿಧಾನವಾಗಿ ಈ ಒಗಟನ್ನು ಬಿಡಿಸುತ್ತಿವೆ.

ನೆನಪುಗಳು ಬಲವರ್ಧನೆಗೊಳ್ಳಲು ಹಾಗೂ ಮತ್ತೆ ಕೆಲವು ನೆನಪುಗಳು ಅಂದರೆ ಗೊಂದಲು ಉಂಟು ಮಾಡುವಂತ ಕೆಲ ನೆನಪುಗಳು ಮೆದುಳಿನಿಂದ ಅಳಿಸಿಹೋಗಲು ನಿದ್ದೆ ಸಹಾಯ ಮಾಡುತ್ತದೆ,

ನಾವು ಎಚ್ಚರವಿರುವ ಸಮಯದಲ್ಲಿ ನಮ್ಮ ಮಿದುಳಿನಲ್ಲಿ ಸಂಗ್ರಹವಾದ ವಿಷಯುಕ್ತ ಪ್ರೊಟಿನ್, ಜೈವಿಕವಾದಂತ ತ್ಯಾಜ್ಯವನ್ನು ಮಿದುಳಿನಿಂದ ಹೊರ ಹಾಕಲು ನಿದ್ದೆ ಸಹಾಯ ಮಾಡುತ್ತದೆ ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ. ಈ ವಿಷಯುಕ್ತ ಪ್ರೋಟಿನ್ ಅಂಶ ಮಿದುಳಿನಿಂದ ಹೊರಬರುವುದರಿಂದ ಅಲ್ಜೀಮೀರ್ ನಂತಹ ಖಾಯಿಲೆಗಳಿಂದ ದೂರ ಇರಲು ನೆರವಾಗುತ್ತದೆ.

ಆರೋಗ್ಯವಂತ ದೇಹ ಮತ್ತು ಆರೋಗ್ಯಯುತ ಮನಸ್ಸು ನಿಮ್ಮದಾಗಬೇಕು ಎಂದರೆ ಉತ್ತಮ ನಿದ್ದೆ ಅತ್ಯವಶ್ಯಕ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT