ಹಣ್ಣುಗಳು 
ಆರೋಗ್ಯ-ಜೀವನಶೈಲಿ

ಬೇಸಿಗೆಯಲ್ಲಿ ಮರೆಯದೇ ತಿನ್ನಬೇಕಾದ ಹಣ್ಣುಗಳು

ಬೇಸಿಗೆಯ ಬಿಸಿ ಎದುರಿಸಲು ಹಣ್ಣುಗಳು ಉತ್ತಮ ಆಯ್ಕೆ. ಜತೆಗೆ ಅವು ನೀರು, ಪೌಷ್ಟಿಕಾಂಶ, ವಿಟಮಿನ್, ಆ್ಯಂಟಿಆಕ್ಸಿಡೆಂಟ್ಸ್ ಅಂಡ್ ಫೈಬರ್‍ನ ಉತ್ತಮ ಮೂಲವೂ ಹೌದು.

ಹೈಪರ್ ಮಾರುಕಟ್ಟೆಯ ಹಣ್ಣುಗಳ ವಿಭಾಗದಲ್ಲಿ, ಆನ್‍ಲೈನ್ ಗ್ರಾಸರಿ ಶಾಪ್‍ಗಳಲ್ಲಿ ಹೀಗೆ ಭಿನ್ನ ರುಚಿ ನೀಡುವ ಹಣ್ಣುಗಳು ಆಯಾ ಋತುಮಾನದಲ್ಲಿ ಸಿಗುತ್ತವೆ. ಚಳಿಗಾಲದಲ್ಲಿ ಕಿವಿ, ವಸಂತ ಋತುವಿನಲ್ಲಿ ಸ್ಟ್ರಾಬೆರ್ರಿ, ಮಳೆಗಾಲದಲ್ಲಿ ಲಿಟ್ಚಿ ಹಣ್ಣುಗಳು ನಮಗೆ ಪ್ರಿಯವಾಗುತ್ತವೆ. ನಿತ್ಯದ ಅಡುಗೆ, ತಿನಿಸಿಗೆ ಹೊಸ ಅಡುಗೆ, ರುಚಿಯನ್ನು ಸೇರ್ಪಡೆ ಮಾಡುವುದು ನಿಜಕ್ಕೂ ಖುಷಿಯಾದ ಸಂಗತಿ. ಆದರೆ, ಈ ಪ್ರಕ್ರಿಯೆಯಲ್ಲಿ ನಾವು ಆಯಾ ಋತುಮಾನದ ಹಣ್ಣುಗಳು, ಅವುಗಳಲ್ಲಿ ಇರುವ ಪೌಷ್ಟಿಕಾಂಶದ ಮೌಲ್ಯಗಳನ್ನು ಮರೆಯಬಾರದು.

ಕೊಲಂಬಿಯ ಏಷಿಯಾ ಆಸ್ಪತ್ರೆಯ ಕನ್ಸಲ್ಟಂಟ್ ನ್ಯೂಟ್ರಿಷನ್ ಗ್ರೀನಾ ಮೆನೆಜಸ್ ಅವರು, ಹೀಗೆ ಋತುಮಾನದಲ್ಲಿ ಲಭ್ಯವಿರುವ, ನಾವು ಈ ಬೇಸಿಗೆಯ ಅವಧಿಯಲ್ಲಿ ಸೇವಿಸಬಹುದಾದ ಹಣ್ಣುಗಳ ಬಗೆಗೆ ಮಾಹಿತಿ ನೀಡುತ್ತಾರೆ.

'ಬೇಸಿಗೆಯ ಬಿಸಿ ಎದುರಿಸಲು ಹಣ್ಣುಗಳು ಉತ್ತಮ ಆಯ್ಕೆ. ಜತೆಗೆ ಅವು ನೀರು, ಪೌಷ್ಟಿಕಾಂಶ, ವಿಟಮಿನ್, ಆ್ಯಂಟಿಆಕ್ಸಿಡೆಂಟ್ಸ್ ಅಂಡ್ ಫೈಬರ್‍ನ ಉತ್ತಮ ಮೂಲವೂ ಹೌದು. ಈ ಹಣ್ಣುಗಳು ನಿಮ್ಮ ನಿಯಮಿತ ಆಹಾರ ಕ್ರಮವನ್ನು ಹೆಚ್ಚಿಸಲಿದೆ. ನಿಮ್ಮ ದೇಹವನ್ನು ಮೃದುವಾಗಿಸುತ್ತದೆ. ಜತೆಗೆ ಬೇಸಿಗೆಯಲ್ಲಿ ಅಗತ್ಯ ಶಕ್ತಿಯನ್ನು ನೀಡುತ್ತದೆ' ಎನ್ನುತ್ತಾರೆ ಗ್ರೀನಾ ಮೆನೆಜಸ್. ಈ ಕೆಳಗಿನ ಹಣ್ಣುಗಳು ಬೇಸಿಗೆ ಅವಧಿಗೆ ಹೆಚ್ಚು ಪೂರಕವಾಗಿ ಇರುತ್ತವೆ.

ಮಾವಿನಹಣ್ಣು:  ಮಾವಿನಹಣ್ಣುವಿನಲ್ಲಿ ಕೊಬ್ಬಿನಅಂಶ ಇರುವುದಿಲ್ಲ. ಸೋಡಿಯಂ ಅಂಶ ಇರುವುದಿಲ್ಲ. ಜತೆಗೆ, ಮಾವಿನ ಹಣ್ಣಿನಲ್ಲಿ ಕ್ಯಾನ್ಸನ್ ನಿರೋಧಕ ಅಂಶಗಳು ಇರುತ್ತವೆ ಎಂದು ಗುರುತಿಸಲಾಗಿದೆ. ಇದು, ವಿಟಮಿನ್ ಸಿಗೆ ಉತ್ತಮ ಮೂಲವೂ ಆಗಿದ್ದು, ದೇಹದ ತಾಪಮಾನ ಕಾಯ್ದುಕೊಳ್ಳಲು, ಬಾಯಿಯ ಆರೋಗ್ಯ ರಕ್ಷಿಸಲು, ಚರ್ಮದ ತ್ವಚೆ ಕಾಯ್ದುಕೊಳ್ಳಲು ಸಹಕಾರಿ. ಮಾವಿನಹಣ್ಣಿನಲ್ಲಿ ಹೆಚ್ಚಿನ ಫೈಬರ್ ಅಂಶ ಇರುತ್ತದೆ. ಇದು, ದೀರ್ಘಕಾಲ ಚೇತೋಹಾರಿಯಾಗಿ ಇರಲು ನೆರವಾಗಲಿದೆ.

ಮಸ್ಕ್ ಮೆಲನ್ & ವಾಟರ್ ಮೆಲನ್ (ಕಲ್ಲಂಗಡಿ & ಖರ್ಬೂಜ): ಸಿಹಿಯಾದ, ಸುವಾಸಿತ ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ಸೇವಿಸಬಹುದಾದ ಇನ್ನೊಂದು ಹಣ್ಣು. ಇದರಲ್ಲಿ ಫೈಬರ್, ಪೊಟಾಷಿಯಂ, ವಿಟಮಿನ್ ಸಿ, ಬೆಟಾ ಕ್ಯಾರೊಟೆನೆ ಅಂಶಗಳು ಯಥೇಚ್ಚವಾಗಿ ಇರುತ್ತವೆ. ಹೆಚ್ಚಿನ ನೀರಿನ ಅಂಶ ಅಂದರೆ ಇದರಲಲಿ ಶೇ 90ರಷ್ಟು ನೀರಿನ ಅಂಶ ಇದ್ದು, ದೇಹಕ್ಕೆ ಅಗತ್ಯವಾಗಿರುತ್ತದೆ. ಕಲ್ಲಂಗಡಿ, ಖರ್ಬೂಜ ಅಂಥ ಹಣ್ಣುಗಳು ಕಡಿಮೆ ಪ್ರಮಾಣದ ಕ್ಯಾಲೊರಿ ಹೊಂದಿದ್ದು, ತೂಕದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಹೆಚ್ಚಿನದಾಗಿ ಈ ಹಣ್ಣನ್ನು ಮಧುಮೇಹಿಗಳು ಕೂಡಾ ಸೇವಿಸಬಹುದು.

ಸ್ಟ್ರಾಬೆರ್ರಿ: ಸ್ಟ್ರಾಬೆರ್ರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಇದ್ದು, ಪೊಟಾಷಿಯಂ ಅಂಶ ಕೂಡಾ ಇರುತ್ತದೆ. ಉತ್ತಮ ವರ್ಣದ, ಗುಣಮಟ್ಟದ ಸ್ಟ್ರಾಬೆರ್ರಿ ಗುರುತಿಸಿ ಸೇವಿಸುವುದು ಉತ್ತಮ.

ಪೀಚಸ್: ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕಾಂಶಗಳು ಇರುತ್ತವೆ. ಇದರಲ್ಲಿ ಭಿನ್ನ ವರ್ಗದ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಅಂದರೆ ಫೈಬರ್, ವಿಟಮಿನ್ ಎ, ಸಿ,  ಇ ಪೊಟಾಷಿಯಂ ಹಾಗೂ ಜಿಂಕ್ ಅಂಶಗಳಿವೆ. ಇದರಲ್ಲಿ  ಕೊಬ್ಬಿನ ಅಂಶ ಇರುವುದಿಲ್ಲ. ಟ್ರಾನ್ಸ್ ಫ್ಯಾಟ್ಸ್ ಇರುತ್ತದೆ. ಇದು, ಅತ್ಯುತ್ತಮ ಆಹಾರ ಕ್ರಮವಾಗಿದೆ.

ಪಪ್ಪಾಯ: ಇದು, ಪಥ್ಯ ಕ್ರಮಕ್ಕೆ ಉತ್ತಮವಾದ ಆಹಾರ. ಪಪ್ಪಾಯದಲ್ಲಿ ನಿತ್ಯ ವೈದ್ಯರು ಶಿಫಾರಸು ಮಾಡುವ ಪೌಷ್ಟಿಕಾಂಶಗಗಳು ಶೇ 300ರಷ್ಟು  ಇರುತ್ತವೆ. ಇದು ವಿಟಮಿನ್ ಎ, ಇ ಅಂಶ ಕೂಡಾ ಇರುತ್ತದೆ. ಇದರಲ್ಲಿ ಕೊಬ್ಬಿನ ಅಂಶ ಕಡಿಮೆ ಇದ್ದು, ಅಜೀರ್ಣ ಸಂದರ್ಭದಲ್ಲಿ ಕಂಡುಬರುವ ದೇಹಲ್ಲಿನ ಉರಿ ಪ್ರಮಾಣವನ್ನು ಕುಗ್ಗಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಯೋಗೀಶ್ ಗೌಡ ಕೊಲೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿಗೆ ತಾತ್ಕಾಲಿಕ ರಿಲೀಫ್‌; ಅ.27ಕ್ಕೆ ವಿಚಾರಣೆ ಮುಂದೂಡಿಕೆ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!