ಆರೋಗ್ಯ-ಜೀವನಶೈಲಿ

ಅಧಿಕ ಮಾಂಸಾಹಾರ ಸೇವಿಸಿದ್ರೆ ಕಡಿಮೆಯಾಗುತ್ತೆ ಆಯಸ್ಸು!: ಸಂಶೋಧನೆ

Shilpa D

ನವದೆಹಲಿ: ಮಾಂಸಾಹಾರ ಪ್ರಿಯರಿಗೊಂದು ಎಚ್ಚರಿಕೆ. ಅಧಿಕ ಮಾಂಸಾಹಾರ ಸೇವಿಸಿದ್ರೆ ಆಯಸ್ಸು ಕಡಿಮೆಯಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

ಸಸ್ಯಾಹಾರ ಆಹಾರ ಪದ್ಧತಿ ರೂಡಿಸಿಕೊಂಡಿರುವವರ ಜೀವಿತಾವಧಿಗಿಂತ ಮಾಂಸಾಹಾರ ಆಹಾರ ಪದ್ಧತಿ ರೂಡಿಸಿಕೊಂಡಿರುವವರ ಜೀವಿತಾವಧಿ ಕಡಿಮೆ ಎಂದು ಸಂಶೋಧನೆಯಿಂದ ಬಹಿರಂಗವಾಗಿದೆ.

ಅರಿಜೋನಾದ ಮಾಯೊ ಕ್ಲಿನಿಕ್ ವೈದ್ಯರು 1.5 ಮಿಲಿಯನ್ ಜನರ ಮೇಲೆ ನಡೆಸಿದ ಸಂಶೋಧನೆಯಿಂದ, ಸಂಸ್ಕರಿತ ಮಾಂಸಾಹಾರ ಸೇವಿಸುವವರ ಆಯಸ್ಸು ಕಡಿಮೆ ಎಂದು ತಿಳಿದುಬದಿಂದೆ.

ಮಾಂಸಾಹಾರ ಸಸ್ಯಾಹಾರ ಆಹಾರ ಪದ್ಧತಿಯ ಮರಣ ಪ್ರಮಾಣ ಕುರಿತು ಆರು ಸಂಶೋಧನೆಗಳು ನಡೆದಿದ್ದು, ಸಂಶೋಧಕರು ಆದಷ್ಟು ಮಾಂಸಾಹಾರವನ್ನು ತ್ಯಜಿಸಿ ಸಸ್ಯಾಹಾರ ಆಹಾರ ಪದ್ಧತಿಯನ್ನು ರೂಡಿಸಿಕೊಳ್ಳುವಂತೆ ವೈದ್ಯರುಗಳು ತಮ್ಮ ರೋಗಿಗಳಿಗೆ ಸಲಹೆ ನೀಡಬೇಕು ಎಂದು ಸಂಶೋಧನೆ ತಿಳಿಸಿದೆ.

17 ವರ್ಷ ಅವಧಿಯಿಂದ ಸಸ್ಯಾಹಾರ ಸೇವಿಸುತ್ತಿರುವವರ ಜೀವಿತಾವಧಿ 3.6 ವರ್ಷದಷ್ಟು ಹೆಚ್ಚಳವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

SCROLL FOR NEXT