ಸಾಂದರ್ಭಿಕ ಚಿತ್ರ 
ಆರೋಗ್ಯ

ನಿಮ್ಮ ಆರೋಗ್ಯ ನಿಮ್ಮ ಕೆಲಸದ ಸ್ಥಳವನ್ನು ಸಾಕಷ್ಟು ಅವಲಂಬಿಸಿದೆ: ಅಧ್ಯಯನ

ನಾವು ನಮ್ಮ ದಿನ ನಿತ್ಯದ ಸಮಯದಲ್ಲಿ ಮೂರನೇ ಒಂದು ಭಾಗದಷ್ಟು ಸಮಯವನ್ನು ನಮ್ಮ ಕೆಲಸದ ಸ್ಥಳದಲ್ಲಿ...

ವಾಷಿಂಗ್ಟನ್ ಡಿ.ಸಿ: ನಾವು ನಮ್ಮ ದಿನ ನಿತ್ಯದ ಸಮಯದಲ್ಲಿ ಮೂರನೇ ಒಂದು ಭಾಗದಷ್ಟು ಸಮಯವನ್ನು ನಮ್ಮ ಕೆಲಸದ ಸ್ಥಳದಲ್ಲಿ ಕಳೆಯುತ್ತೇವೆ. ಹಾಗಾಗಿ ನಮ್ಮ ದೇಹದ ಆರೋಗ್ಯದಲ್ಲಿ ಕೆಲಸ ಮಾಡುವ ಸ್ಥಳ, ಅಲ್ಲಿನ ವಾತಾವರಣ ಬಹಳ ಮುಖ್ಯವಾಗುತ್ತದೆ.
ಜಗತ್ತಿನಾದ್ಯಂತ 19 ಸಾವಿರ ಜನರ ಮೇಲೆ 58 ಅಧ್ಯಯನಗಳನ್ನು ಮಾಡಲಾಗಿದೆ. ನಿಮ್ಮ ವ್ಯಕ್ತಿತ್ವ ಮತ್ತು ಕೌಶಲ್ಯಗಳಿಗೆ ತಕ್ಕಂತೆ ಸರಿಯಾದ ಉದ್ಯೋಗ ಪಡೆಯುವುದು ನಿಮ್ಮ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಕೆಲಸದ ಸ್ಥಳದಲ್ಲಿ ನಮ್ಮ ಆರೋಗ್ಯ ಸಹೋದ್ಯೋಗಿಗಳ ಜೊತೆ ಹೊಂದಿರುವ ಸಾಮಾಜಿಕ ಸಂಬಂಧವನ್ನು ಅವಲಂಬಿಸಿರುತ್ತದೆ ಎನ್ನುತ್ತದೆ ಅಧ್ಯಯನ.
ಜನರು ಮತ್ತು ಅವರು ಕೆಲಸ ಮಾಡುವ ಸ್ಥಳದ ವಿಷಯ ಬಂದಾಗ ತೃಪ್ತಿ, ಪ್ರೇರಣೆ, ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಣೆ, ಸಹೋದ್ಯೋಗಿಗಳ ಜೊತೆ ಉತ್ತಮ ಬಾಂಧವ್ಯ, ಆರೋಗ್ಯ ಮತ್ತು ಯೋಗಕ್ಷೇಮ ಇತ್ಯಾದಿಗಳು ಮುಖ್ಯವಾಗುತ್ತದೆ.
ಸಂಸ್ಥೆಗಳಲ್ಲಿ ಗುರುತಿಸಿಕೊಳ್ಳುವಿಕೆ ಉತ್ತಮ ಆರೋಗ್ಯದ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಸಂಶೋಧಕ ಡಾ. ನಿಕ್ಲಾಸ್ ಸ್ಟೆಫೆನ್ಸ್. ಕೆಲಸ ಮಾಡುವ ಸ್ಥಳಗಳು ನಮ್ಮಲ್ಲಿ ನಾನು ಎನ್ನುವ ಬದಲಿಗೆ ನಾವು ಎಂಬ ಭಾವನೆ ಮೂಡಿಸುವಲ್ಲಿ ಸಫಲವಾದರೆ ನಮ್ಮ ಸಾಧನೆ, ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.
ಚೀನಾ ಮತ್ತು ಜರ್ಮನಿಯ ಸಂಶೋಧಕರು ಒಟ್ಟು ಸೇರಿ ಈ ಅಧ್ಯಯನ ನಡೆಸಿದ್ದಾರೆ. ಇದನ್ನು ಸೊಸೈಟಿ ಫಾರ್ ಪರ್ಸನಾಲಿಟಿ ಮತ್ತು ಸೋಶಿಯಲ್ ಸೈಕಾಲಜಿ, ಪರ್ಸನಾಲಿಟಿ ಅಂಡ್ ಸೋಶಿಯಲ್ ಸೈಕಾಲಜಿ ರೆವ್ಯೂ ಎಂಬ ನಿಯತಕಾಲಿಕೆಯಲ್ಲಿ ಪ್ರಕಟಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT